More

    ಒಂದೇ ವರ್ಷ16 ಚಿತ್ರಗಳು; ಡಾ.ರಾಜ್ ಉತ್ಸವ..

    ಬೆಂಗಳೂರು: ಐದು ದಶಕಗಳ ವೃತ್ತಿಜೀವನದಲ್ಲಿ ಡಾ. ರಾಜಕುಮಾರ್ ಒಟ್ಟಾರೆ 207 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ, 1980ರ ದಶಕದ ನಂತರ ರಾಜಕುಮಾರ್ ಅಭಿನಯದ ಚಿತ್ರಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಅದಕ್ಕೂ ಮುನ್ನ 70ರ ದಶಕದಲ್ಲಿ ವರ್ಷವೊಂದಕ್ಕೆ ರಾಜಕುಮಾರ್ ಅಭಿನಯದ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಅದಕ್ಕೂ ಮುನ್ನ ಅಂದರೆ 60ರ ದಶಕದಲ್ಲಿ ಆ ಸಂಖ್ಯೆ 10 ದಾಟಿರುತ್ತಿತ್ತು. ಅದರಲ್ಲೂ 1968, ರಾಜಕುಮಾರ್ ಚಿತ್ರಜೀವನದಲ್ಲಿ ಒಂದು ಮಹತ್ವದ ವರ್ಷ ಎಂದರೆ ತಪ್ಪಿಲ್ಲ. ಏಕೆಂದರೆ, ಇದೊಂದೇ ವರ್ಷ ಅವರ 16 ಚಿತ್ರಗಳು ತೆರೆಕಂಡಿದ್ದವು. ಈ ಪೈಕಿ 15 ಚಲನಚಿತ್ರಗಳಾದರೆ, ಒಂದು ಸಾಕ್ಷ್ಯಚಿತ್ರವಾಗಿತ್ತು.

    ಮೂಲಗಳ ಪ್ರಕಾರ, ಆ ವರ್ಷ ಬಿಡುಗಡೆಯಾದ ಡಾ. ರಾಜಕುಮಾರ್ ಅವರ ಮೊದಲ ಚಿತ್ರ ಎಂದರೆ ಅದು ‘ಜೇಡರ ಬಲೆ’. ಇದು ಕನ್ನಡ ಚಿತ್ರರಂಗದಲ್ಲಿ ಬಾಂಡ್ ಶೈಲಿಯ ಮೊದಲ ಚಿತ್ರವಾಗಿದ್ದು, ಆ ನಂತರ ಬಾಂಡ್ ಸರಣಿಯಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆಯಾದವು. ‘ಜೇಡರ ಬಲೆ’ ನಂತರ ‘ಗಾಂಧಿನಗರ’, ‘ಮಹಾಸತಿ ಅರುಂಧತಿ’, ‘ಮನಸ್ಸಾಕ್ಷಿ’, ‘ಸರ್ವಮಂಗಳಾ’, ‘ಭಾಗ್ಯ ದೇವತೆ’, ‘ಬೆಂಗಳೂರು ಮೇಲ್’, ‘ಹಣ್ಣೆಲೆ ಚಿಗುರಿದಾಗ’, ‘ಭಾಗ್ಯದ ಬಾಗಿಲು’, ‘ರೌಡಿ ರಂಗಣ್ಣ’, ‘ಧೂಮಕೇತು’, ‘ಅಮ್ಮ’, ‘ಸಿಂಹ ಸ್ವಪ್ನ’, ‘ಗೋವಾದಲ್ಲಿ ಸಿಐಡಿ 999’ ಮತ್ತು ‘ಮಣ್ಣಿನ ಮಗ’ ಚಿತ್ರಗಳು ಸೇರಿವೆ. ಈ ವರ್ಷ ರಾಜಕುಮಾರ್ ಅಭಿನಯದ 100ನೇ ಚಿತ್ರವಾದ ‘ಭಾಗ್ಯದ ಬಾಗಿಲು’ ಬಿಡುಗಡೆ ಆಯಿತು. ಈ ಸಂಬಂಧ ಅವರು ಚಿತ್ರರಂಗದಲ್ಲಿ ನಡೆದು ಬಂದ ಹಾದಿ, ಅವರ ಚಿತ್ರಜೀವನ ಮತ್ತು ಖಾಸಗೀ ಜೀವನದ ಹಲವು ಅಂಶಗಳನ್ನು ‘ನಟಸಾರ್ವಭೌಮ’ ಎಂಬ ಸಾಕ್ಷ್ಯಚಿತ್ರದಲ್ಲಿ ಹಿಡಿದಿಡಲಾಯಿತು. ಈ ಚಿತ್ರವನ್ನು ಆರೂರು ಪಟ್ಟಾಭಿ ನಿರ್ದೇಶನ ಮಾಡಿದ್ದರು.

     

    ಒಂದೇ ವರ್ಷ16 ಚಿತ್ರಗಳು; ಡಾ.ರಾಜ್ ಉತ್ಸವ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts