More

    16.65 ಲಕ್ಷ ರೂ. ಉಳಿತಾಯ ಬಜೆಟ್

    ಬಂಕಾಪುರ: ಪಟ್ಟಣದ ಪುರಸಭೆಯ 2021-22ನೇ ಸಾಲಿನ ಒಟ್ಟು 23.20 ಕೋಟಿ ರೂ. ಬಜೆಟ್​ನಲ್ಲಿ 16.65 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಬುಧವಾರ ಮಂಡಿಸಿದರು.

    ನೀರಿನ ಬಳಕೆ ಶುಲ್ಕದಿಂದ 42.25 ಲಕ್ಷ ರೂ., ಹೊಸ ಸಂಪರ್ಕಗಳಿಂದ 5.10 ಲಕ್ಷ ರೂ., ಆಸ್ತಿ ತೆರಿಗೆ ವಸೂಲಾತಿಯಿಂದ 70 ಲಕ್ಷ ರೂ., ವ್ಯಾಪಾರ ಪರವಾನಗಿಯಿಂದ 1.72 ಲಕ್ಷ ರೂ., ಸಂತೆ ಮಾರುಕಟ್ಟೆ ಹರಾಜಿನಿಂದ 11.58 ಲಕ್ಷ ರೂ., ಅಭಿವೃದ್ಧಿ ಶುಲ್ಕ 18.86 ಲಕ್ಷ ರೂ. ಕಟ್ಟಡ ಪರವಾನಗಿಯಿಂದ 5.50 ಲಕ್ಷ ರೂ., ಇತರೆ ಮೂಲಗಳಿಂದ 2 ಲಕ್ಷ ರೂ. ಸೇರಿದಂತೆ 157.01 ಲಕ್ಷ ರೂ. ರಾಜಸ್ವ ಆದಾಯ ನಿರೀಕ್ಷಿಸಲಾಗಿದೆ.

    ಇದಲ್ಲದೆ, ರಾಜ್ಯ ಹಣಕಾಸು ಯೋಜನೆ ಹಾಗೂ ಮುಕ್ತ ನಿಧಿ ಸೇರಿ 50 ಲಕ್ಷ ರೂ. ವೇತನ ನಿಧಿಯಿಂದ 106 —-ವಿದ್ಯುತ್ ಬಿಲ್ ಪಾವತಿ ಅನುದಾನ 666 ಲಕ್ಷ ರೂ., ಕುಡಿಯುವ ನೀರಿನ ಯೋಜನೆಗೆ 40 ಲಕ್ಷ ರೂ. ಸೇರಿದಂತೆ ಒಟ್ಟು 862 ಲಕ್ಷ ಅನುದಾನವನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಇದರಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು, ಸ್ಮಶಾನ, ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆಯವ್ಯಯದಲ್ಲಿ ತೀರ್ವನಿಸಲಾಗಿದೆ.

    ಸರ್ಕಾರದ ವಿಶೇಷ ಅನುದಾನದಡಿ 200 ಲಕ್ಷ ರೂ.ಗಳಲ್ಲಿ ಪೌರ ಕಾರ್ವಿುಕರ ಗೃಹಭಾಗ್ಯ ನಿರ್ವಣಕ್ಕೆ 15 ಲಕ್ಷ ರೂ., ಜಿ+1 ಮನೆ ನಿರ್ವಣಕ್ಕೆ 100 ಲಕ್ಷ, ನಲ್ಮ ಯೋಜನೆಯಡಿ 8 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ. ಸ್ವಚ್ಛ ಭಾರತ ಯೋಜನೆಯಡಿ 55 ಲಕ್ಷ ರೂ.ದಲ್ಲಿ ಶೌಚಗೃಹಗಳ ಕಾಮಗಾರಿ, ಅತಿವೃಷ್ಟಿ ಅನುದಾನ 20 ಲಕ್ಷ ರೂ. ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಯವ್ಯಯದಲ್ಲಿ ತೀರ್ವನಿಸಲಾಗಿದೆ.

    ಕಚೇರಿ, ಕಟ್ಟಡ ನಿರ್ವಹಣೆ ವೆಚ್ಚಕ್ಕಾಗಿ 40 ಲಕ್ಷ ರೂ., ಮೂಲಸೌಕರ್ಯಗಳಾದ ಕಾಂಕ್ರೀಟ್ ರಸ್ತೆಗಳಿಗೆ 78 ಲಕ್ಷ ರೂ., ಚರಂಡಿಗೆ 69 ಲಕ್ಷ ರೂ. ವಾಹನ ಖರೀದಿಗೆ 15 ಲಕ್ಷ ರೂ., ಬೀದಿ ದೀಪ 30 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ 112.50 ಲಕ್ಷ ರೂ., ಘನ ತ್ಯಾಜ್ಯ ವಸ್ತು ವಿಲೇವಾರಿಗೆ 47.50. ಲಕ್ಷ ರೂ., ಪೈಪ್​ಲೈನ್ 20 ಲಕ್ಷ ರೂ., ಉದ್ಯಾನ ನಿರ್ಮಾಣ 16.24 ಲಕ್ಷ ರೂ., ವೈಯಕ್ತಿಕ ಶೌಚಗೃಹ ನಿರ್ವಣಕ್ಕೆ 5 ಲಕ್ಷ ರೂ., ಸ್ಮಶಾನ ಅಭಿವೃದ್ಧಿ 25 ಲಕ್ಷ ರೂ., ಪೌರ ಕಾರ್ವಿುಕ ವೇತನಕ್ಕಾಗಿ 26.37 ಲಕ್ಷ ರೂ., ಕಚೇರಿ ಪೀಠೋಪಕರಣ, ಗಣಕ ಯಂತ್ರ, ಸಲಕರಣೆ, ಖರೀದಿ, ವಂತಿಕೆಗಳಿಗೆ 8 ಲಕ್ಷ ರೂ. ಗಳನ್ನು ವೆಚ್ಚ ಮಾಡಲು ತೀರ್ವನಿಸಲಾಗಿದೆ.

    ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ನೈರ್ಮಲ್ಯಾಧಿಕಾರಿ ರೂಪಾ ನಾಯ್ಕ, ಬಿ.ಎಂ. ಹಿರೇಮಠ, ಅಶ್ವಿನಿ ಸುಣಗಾರ, ಬಿ.ಎಚ್. ಕೊರಕಲ್, ತಿಪ್ಪೇಸ್ವಾಮಿ ಎಂ.ಎಂ. ಉಪಸ್ಥಿತರಿದ್ದರು

    ರಾಜಸ್ವ ಆದಾಯ: 12.50 ಕೋಟಿ ರೂ., ಬಂಡವಾಳ ಆದಾಯ: 3.57 ಕೋಟಿ ರೂ., ವಿಶೇಷ ವಸೂಲಾತಿ: 7.12 ಕೋಟಿ ರೂ. ಗಳು. ಒಟ್ಟು: 23.20 ಕೋಟಿ ರೂ.

    ರಾಜಸ್ವ ವೆಚ್ಚಗಳು: 11.93 ಕೋಟಿ ರೂ. ಬಂಡವಾಳ ವೆಚ್ಚಗಳು: 3.97 ಕೋಟಿ ರೂ., ವಿಶೇಷ ಪಾವತಿಗಳು: 7.12 ಕೋಟಿ ರೂ.ಗಳು. ಒಟ್ಟು 23.03 ಕೋಟಿ ರೂ. ಒಟ್ಟು ಉಳಿತಾಯ 16.65 ಲಕ್ಷ ರೂ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts