More

    16ರಂದು ಶಿವಚರಿತ್ರೆ ಲೋಕಾರ್ಪಣೆ – ಶಾಸಕ ಅಭಯ ಪಾಟೀಲ

    ಬೆಳಗಾವಿ: ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನ ಪಕ್ಕದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶಿವಚರಿತ್ರೆ ಉದ್ಘಾಟನೆಗೆ ಮಾ.16ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಆಗಮಿಸುತ್ತಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಚರಿತ್ರೆ ಉದ್ಘಾಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮಿಸುವವರಿದ್ದರು. ಆದರೆ, ಕೊನೇ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಮತಿ ಇರಾನಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಾಟೀಲ ಆಗಮಿಸುತ್ತಿದ್ದಾರೆ ಎಂದರು.

    ಶಿವಚರಿತ್ರೆಯಲ್ಲಿ ಕನ್ನಡ ಮತ್ತು ಮರಾಠಿ ಎರಡು ಭಾಷೆಯಲ್ಲಿ 40 ನಿಮಿಷಗಳ ಧ್ವನಿ ಮತ್ತು ಬೆಳಕು ಕಾರ್ಯಕ್ರಮಗಳು ನಡೆಯಲಿವೆ. 400 ಜನರು ಒಟ್ಟಿಗೆ ಕುಳಿತು ಶಿವಚರಿತ್ರ ವೀಕ್ಷಣೆ ಮಾಡಬಹುದು. ದೇಶದಲ್ಲಿಯೇ ಮೊದಲ ಬಾರಿಗೆ ನೀರಿನ ಪರದೆ ಮೇಲೆ ಶಿವಚರಿತ್ರೆ ಪ್ರದರ್ಶನಗೊಳ್ಳುತ್ತಿದೆ. ಶಿವಚರಿತ್ರೆ ನಿರ್ಮಾಣಕ್ಕಾಗಿ ದಶಕಗಳಿಂದ ಶ್ರಮಿಸಿದ್ದು, 10 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದರು.

    ಮಾ.15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಗೋವಾವೇವಸ್ ಬಸವೇಶ್ವರ ವೃತ್ತದಲ್ಲಿರುವ ಉದ್ಯಾನದಲ್ಲಿ 15 ಎಡಿ ಎತ್ತರದ ಬಸವಣ್ಣ ಮೂರ್ತಿ ಪ್ರತಿಷ್ಠಾನೆ ಹಾಗೂ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಬಸವಣ್ಣವರ ಇತಿಹಾಸ ಸಾರುವ ಬಸವಣ್ಣ ಚರಿತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈಗಾಗಲೇ 35 ಲಕ್ಷ ರೂ. ವೆಚ್ಚದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಸವಣ್ಣ ಮೂರ್ತಿ ತಯಾರುಗೊಂಡಿದೆ ಎಂದು ತಿಳಿಸಿದರು.

    ಮಾ.22ರಂದು ಅನಗೋಳದಲ್ಲಿ ಸಂಭಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದಕ್ಷಿಣ ಕ್ಷೇತ್ರದ ಕೆರೆಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಜರುಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts