More

    15 ವರ್ಷಗಳ ಷರತ್ತು ವಿಧಿಸದೆ ಹಕ್ಕುಪತ್ರ ನೀಡಿ: ಹೊಸಪೇಟೆಯಲ್ಲಿ ಎಸಿಗೆ ಸ್ಲಂ ಜನಾಂದೋಲನ ಸಂಘಟನೆ ಮನವಿ

    ಹೊಸಪೇಟೆ: ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಷರತ್ತು ವಿಧಿಸದೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸೋಮವಾರ ಎಸಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿತು.

    2020ರ ಆ.20ರಂದು ಸಚಿವ ಸಂಪುಟದಲ್ಲಿ ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕೈಗೊಂಡ ತೀರ್ಮಾನ ಸ್ವಾಗತರ್ಹ. ರಾಜ್ಯದಲ್ಲಿ ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ 1873 ಕೊಳಚೆ ಪ್ರದೇಶದ ನಿವಾಸಿಗಳು 30 ವರ್ಷಗಳಿಂದ ವಾಸಿಸುತ್ತಿದ್ದಾರೆ. 15 ವರ್ಷಗಳ ಷರತ್ತು ವಿಧಿಸದೆ ಪೂರ್ಣಾವಧಿ ಹಕ್ಕುಪತ್ರ ನೀಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ನೋಂದಣಿ ಶುಲ್ಕಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು. ಖಾಸಗಿ ಮಾಲೀಕತ್ವದಲ್ಲಿ ಇರುವ 709 ಕೊಳಚೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು, ಸರ್ಕಾರ ವಿಶೇಷ ನಿಧಿ ಸ್ಥಾಪಿಸಿ ಭೂ ಮಾಲೀಕರಿಗೆ ಪರಿಹಾರ ಜತೆಗೆ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಂಘಟನೆ ಮುಖಂಡರಾದ ವೆಂಕಮ್ಮ, ದೇವಮ್ಮ, ತಾಯಮ್ಮ, ಗೌರಮ್ಮ, ಇಸ್ಮಾಯಿಲ್, ರಿಹಾನ್, ಶಹರಾಬಾನು, ಎನ್.ನಾಗಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts