More

    ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!

    ಪಂಜಾಬ್​: ಮೊಬೈಲ್​ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ವಿರುದ್ಧ ನಡುರಸ್ತೆಯಲ್ಲೇ ಹೋರಾಡಿ ಕಳ್ಳನೊಬ್ಬನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದ 15ರ ಬಾಲಕಿಯ ಸಹಾಸಕ್ಕೆ ದೇಶದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಆಕೆಯ ಧೈರ್ಯಕ್ಕೆ ಶೌರ್ಯ ಪ್ರಶಸ್ತಿ ಲಭಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ನಡುವೆ ಆಕೆಗೆ ಬಂಬರ್​ ಬಹುಮಾನವೂ ಸಿಕ್ಕಿದೆ.

    ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!ಪಂಜಾಬ್‌ನ ಜಲಂಧರ್-ಕಪುರ್ಥಾಲಾ ರಸ್ತೆ ಬಳಿಯ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಆ.30ರಂದು ಕುಸುಮ್ ಕುಮಾರ್ ಎಂಬ ಹದಿನೈದು ವರ್ಷದ ಬಾಲಕಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್​ ಆಗುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಬಾಲಕಿ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಆಕೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದರೂ ಧೈರ್ಯದಿಂದ ಹೋರಾಡಿ ಕಳ್ಳನೊಬ್ಬನನ್ನು ಹಿಡಿಯುವಲ್ಲಿ ಬಾಲಕಿ ಯಶಸ್ವಿಯಾದಳು. ಕುಸುಮ್​ಳ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಗೆ ಬಾಲಕಿಯ ಹೆಸರು ಕಳುಹಿಸುವುದಾಗಿ ಪೊಲೀಸ್ ಆಯುಕ್ತ ಗುರ್‌ಪ್ರೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ. ಇದನ್ನೂ ಓದಿರಿ video/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ

    ಕಳ್ಳರ ಹಲ್ಲೆಯಿಂದ ಗಾಯಗೊಂಡಿದ್ದ ಕುಸುಮ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಕೂಲಿಕಾರ ಸಾಧು ರಾಮ್ ಅವರ ಮಗಳು ಕುಸುಮ್​ಳ ಸಾಹಸವನ್ನು ಗೌರವಿಸಿ ಜಿಲ್ಲಾಧಿಕಾರಿ ಘನಶ್ಯಾಮ್​ ಥೋರಿ ಅವರು 51,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಹಣ ಬಳಸಿಕೊಂಡು ಕುಸುಮ್‌ಗೆ ನಗದು ಪ್ರಶಸ್ತಿ ನೀಡಲಾಗುವುದು ಎಂದು ಥೋರಿ ತಿಳಿಸಿದ್ದಾರೆ.

    ಇನ್ನು ಧೈರ್ಯಶಾಲಿ ಕುಸುಮ್ ಹೆಸರಿನ ಮ್ಯಾಸ್ಕಾಟ್ ಅನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು. ಈ ಬಗ್ಗೆ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಗುರ್ಮಿಂದರ್ ಸಿಂಗ್ ರಾಂಧವಾ ತಿಳಿಸಿದ್ದಾರೆ.

    ಡ್ರಗ್ಸ್​ ಮಾಫಿಯಾ; ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಬುಲಾವ್

    ಎಲ್ಲವೂ ಸರ್ವನಾಶವಾಯ್ತು… ಎಂದು ಗೋಳಾಡುತ್ತಿದ್ದ ರೈತನಿಗೆ ಪಿಎಸ್ಐ ಕೊಟ್ರು ಅಚ್ಚರಿಯ ಉಡುಗೊರೆ!

    video/ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ ಮೊಬೈಲ್​ ಕಳ್ಳನನ್ನು ಹಿಡಿದ 15ರ ಬಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts