More

    ಪಂಜಾಬ್​ ಬಳಿ ಭಾರತೀಯ ವಾಯುಪಡೆ ಯುದ್ಧವಿಮಾನ ಪತನ

    ನವದೆಹಲಿ: ಪಂಜಾಬ್​ನ ಹೊಷಿಯಾರ್​ಪುರ ಜಿಲ್ಲೆಯ ಜಾಲಂಧರ್​ ಬಳಿ ಭಾರತೀಯ ವಾಯುಪಡೆಯ ಯುದ್ಧವಿಮಾನ ಮಿಗ್​ 29 ಇಂಟರ್​ಸೆಪ್ಟರ್​ ಶುಕ್ರವಾರ ಬೆಳಗ್ಗೆ ಪತನಗೊಂಡಿದೆ. ಆದರೆ, ಪೈಲಟ್​ ಸುರಕ್ಷಿತವಾಗಿ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಮಾನವನ್ನು 1999ರ ಕಾರ್ಗಿಲ್​ ಯುದ್ಧದಲ್ಲಿ ಕಾರ್ಯಾಚರಣೆಗೆ ಬಳಸಲಾಗಿತ್ತು.
    ದೈನಂದಿನ ಕಸರತ್ತಿನ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದನ್ನು ಗ್ರಹಿಸಿದ ಪೈಲಟ್​ ತಕ್ಷಣವೇ ವಿಮಾನದಿಂದ ಹೊರಹಾರಿ ಪ್ಯಾರಾಚೂಟ್​ ನೆರವಿನಿಂದ ಸುರಕ್ಷಿತವಾಗಿ ಕೆಳಗಿಳಿದರು ಎನ್ನಲಾಗಿದೆ. ಪೈಲಟ್​ ಇಳಿದಿದ್ದ ಸ್ಥಳಕ್ಕೆ ತಕ್ಷಣವೇ ಧಾವಿಸಿದ ವಾಯುಪಡೆ ಸಿಬ್ಬಂದಿ, ಅವರನ್ನು ರಕ್ಷಿಸಿ, ಹೆಲಿಕಾಪ್ಟರ್​ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಿದರು.
    ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬುದನ್ನು ತನಿಖೆ ಮಾಡಲು ವಿಚಾರಣಾ ಸಮಿತಿಯನ್ನು ರಚಿಸಿರುವುದಾಗಿ ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. (ಏಜನ್ಸೀಸ್)

    ಬಾಕ್ಸಿಂಗ್​ನಲ್ಲಿ ಯುವತಿಗೆ ಎದುರಾಳಿಯಾಗಿದ್ಯಾರು? ಫಲಿತಾಂಶವೇನು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts