More

    15 ಲಕ್ಷ ರೂಪಾಯಿ ತೆರಿಗೆ ವಂಚಿಸಿದ್ದ ಬೆಂಜ್ ಕಾರು ಜಪ್ತಿ

    2018ರಿಂದ ಟ್ಯಾಕ್ಸ್ ಪಾವತಿಸದೆ ಸಂಚಾರಯಲಹಂಕ ಆರ್​ಟಿಒ ಅಧಿಕಾರಿಗಳ ವಶಕ್ಕೆ

    ಬೆಂಗಳೂರು: ಎರಡು ವರ್ಷದಿಂದ ತೆರಿಗೆ ಪಾವತಿಸದೆ ಆರ್​ಟಿಒ ಅಧಿಕಾರಿಗಳ ಕಣ್ತಪ್ಪಿಸಿ ಸಂಚರಿಸುತ್ತಿದ್ದ ಬೆಂಜ್ ಕಾರು ಕೊನೆಗೂ ಪತ್ತೆಯಾಗಿದೆ. ಯಲಹಂಕ ಆರ್​ಟಿಒ ಅಧಿಕಾರಿಗಳ ತಂಡ ಬರೋಬ್ಬರಿ ಒಂದು ತಿಂಗಳು ನಿರಂತರವಾಗಿ ಬೆನ್ನು ಹತ್ತಿ ಜಪ್ತಿ ಮಾಡಿದೆ.

    ಬಿಎಸ್4 ಇಂಜಿನ್ ವಾಹನಗಳ ನೋಂದಣಿಗೆ ಅ.16ರವರೆಗೆ ಅವಕಾಶವಿರುವುದರಿಂದ ಸಮಸ್ಯೆ ಇಲ್ಲ. ಆದರೆ, ಬಾಕಿ ತೆರಿಗೆ ಪಾವತಿಸಿ ಕಾರು ಬಿಡಿಸಿಕೊಳ್ಳುವಂತೆ ನೋಟಿಸ್ ಕೊಡಲಾಗಿದೆ. ಆದರೆ, 2 ದಿನವಾದರೂ ಮಾಲೀಕರು ಬಂದಿಲ್ಲ. ಮೊಬೈಲ್​ಗೆ ಕರೆ ಮಾಡಿದರೂ ಸ್ವಿಚ್ಡ್ ಆಫ್ ಬರುತ್ತಿದೆ. ಒಂದು ವೇಳೆ ಮಾಲೀಕ ಬರದಿದ್ದರೆ ಕಾನೂನು ಪ್ರಕಾರ ಹರಾಜು ಹಾಕಲಾಗುವುದು.
    | ಪ್ರಕಾಶ್ ಆರ್​ಟಿಒ, ಯಲಹಂಕ

    2018ರ ಜುಲೈನಲ್ಲಿ ಕಾರು ಖರೀದಿಯಾಗಿದ್ದು, ಗಿರೀಶ್ ಸುರೇಶ್ ಎಂಬುವರ ಹೆಸರಿನಲ್ಲಿದೆ. ತಾತ್ಕಾಲಿಕ ನೋಂದಣಿ ಸಂಖ್ಯೆ ಕಾಲಮಿತಿ 2018ರ ಆಗಸ್ಟ್​ನಲ್ಲೇ ಮುಕ್ತಾಯವಾಗಿದೆ. ಕಾಯಂ ನೋಂದಣಿ ಮಾಡಿಸಿದರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ತಾತ್ಕಾಲಿಕ ನೋಂದಣಿ ಸಂಖ್ಯೆಯಲ್ಲಿಯೇ ಓಡಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನ ಕಸ್ಟಮ್ಸ್ ವಶಕ್ಕೆ!

    ಕಾರನ್ನು ಗಿರೀಶ್ ಸುರೇಶ್ ಓಡಿಸುತ್ತಿರಲಿಲ್ಲ. ಬದಲಾಗಿ ವೈದ್ಯರೊಬ್ಬರು ಚಲಾಯಿಸುತ್ತಿದ್ದರು. ಯಲಹಂಕ ಸುತ್ತಮುತ್ತ ಪ್ರತಿನಿತ್ಯ ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಕಾರು ಸಂಚರಿಸುತ್ತಿದ್ದುದನ್ನು ಗಮನಿಸಿದ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಆರ್​ಟಿಒ ಪ್ರಕಾಶ್ ಮಾರ್ಗದರ್ಶನದಲ್ಲಿ ಇನ್​ಸ್ಪೆಕ್ಟರ್ ಲಕ್ಷ್ಮೀ ನೇತೃತ್ವದ ತಂಡ ಗುರುವಾರ (ಅ.1) ವಾಹನವನ್ನು ಜಪ್ತಿ ಮಾಡಿದೆ. ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮಾಲೀಕ ತಂದಿದ್ದರು. 2018ರಿಂದ ತೆರಿಗೆ ಪಾವತಿಸದಿರುವುದು ದೃಢಪಟ್ಟಿದೆ. ಹೀಗಾಗಿ ತೆರಿಗೆ ಪಾವತಿಸಿ ವಾಹನ ಪಡೆದುಕೊಳ್ಳುವಂತೆ ಅಧಿಕಾರಿಗಳು, ನೋಟಿಸ್ ನೀಡಿದ್ದಾರೆ.

    ಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts