More

    ಇಬ್ಬರು ಮಕ್ಕಳು ಸಹಿತ 15 ಮಂದಿಗೆ ಪಾಸಿಟಿವ್

    ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಶುಕ್ರವಾರ ಮಹಾರಾಷ್ಟ್ರದಿಂದ ಆಗಮಿಸಿ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ 15 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

    ಇದರಲ್ಲಿ ಉಡುಪಿಯಿಂದ ಇಬ್ಬರು, ಕುಂದಾಪುರದ ಇಬ್ಬರು, ಕಾರ್ಕಳದ 11 ಮಂದಿ ಇದ್ದಾರೆ. ಸೋಂಕು ತಗುಲಿದವರು ಇಬ್ಬರು ಮಕ್ಕಳು, ನಾಲ್ವರು ಮಹಿಳೆಯರು, 9 ಪುರುಷರಾಗಿದ್ದು, ಎಲ್ಲರನ್ನೂ ಕೋವಿಡ್-19 ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕ ವಿವರವನ್ನು ಕಲೆ ಹಾಕಲಾಗುತ್ತಿದ್ದು, ಎಲ್ಲರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.

    677 ಮಂದಿಯದು ನೆಗೆಟಿವ್: ಜಿಲ್ಲೆಯಲ್ಲಿ ಶುಕ್ರವಾರ 677 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 1, ಇಲ್‌ನೆಸ್‌ಗೆ ಸಂಬಂಧಿಸಿ 2 , ಕೊವಿಡ್-19 ಸಂಪರ್ಕ ಒಬ್ಬರು ಸೇರಿದಂತೆ ಒಟ್ಟು 4 ಮಂದಿಯ ಮಾದರಿಯನ್ನು ಭಾನುವಾರ ಸಂಗ್ರಹಿಸಲಾಗಿದೆ. ಇನ್ನೂ 6019 ಮಂದಿಯ ವರದಿ ಬರಲು ಬಾಕಿ ಇದೆ. ಐಸೋಲೇಶನ್ ವಾರ್ಡ್‌ನಿಂದ 14 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts