More

    15 ದಿನದಲ್ಲಿ ಸಿದ್ಧವಾಯಿತು ಹೊಸ ಆಸ್ಪತ್ರೆ

    ಹುಬ್ಬಳ್ಳಿ: 15 ದಿನದ ಹಿಂದೆ ಆ ಜಾಗದಲ್ಲಿ ಸಣ್ಣ ಸಣ್ಣ ಕಲ್ಲುಗಳಿದ್ದವು, ಕುರುಚಲು ಗಿಡಗಳೂ ಬೆಳೆದಿದ್ದವು. ಕಿಮ್್ಸ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ತೆರೆದ ಸ್ಥಳ ಅದು. ಈಗ ಅಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ವಣವಾಗಿದೆ!

    ಮೈನಿಂಗ್ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾದ ‘ವೇದಾಂತ’ ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್​ಆರ್) ಅಡಿಯಲ್ಲಿ ಈ ಆಸ್ಪತ್ರೆ ಸಿದ್ಧಗೊಂಡಿದೆ.

    ಇದೊಂದು ಮೇಕ್​ಶಿಫ್ಟ್ ಆಸ್ಪತ್ರೆ. ಅಂದರೆ, ಅಗತ್ಯವಿದ್ದರೆ ಇನ್ನೊಂದು ಕಡೆಗೆ ಸ್ಥಳಾಂತರಿಸಬಹುದಾದ, ಸುಧಾರಿತ ಟೆಂಟ್ ಮಾದರಿಯ ಕಟ್ಟಡ. ಲೋಹದ ಕಂಬಗಳು, ಅಲ್ಯುಮಿನಿಯಂನಂಥ ಹಗುರ ಲೋಹದ ಚಾನೆಲ್ ಹಾಗೂ ಹಾರ್ಡ್​ಬೋರ್ಡ್ ಬಳಸಿ ರೂಪಿಸಿದ ಗೋಡೆಗಳು, ಬೃಹತ್ ಕೆನೊಪಿ ಇತ್ಯಾದಿಯನ್ನು ಬಳಸಿಕೊಂಡು ಸಜ್ಜುಗೊಳಿಸಿದ ಕಟ್ಟಡ. ಭಾರತೀಯ ಸೇನೆ ಹೆಚ್ಚಾಗಿ ಗಡಿ ಪ್ರದೇಶದಲ್ಲಿ; ಜಪಾನ್ ಸೇರಿದಂತೆ ಭೂಕಂಪ ವಲಯದಲ್ಲಿಯ ದೇಶಗಳ ನಾಗರಿಕರು ನಿರ್ವಿುಸಿಕೊಳ್ಳುವ ಮಾದರಿಯ ಸರಳ ಮತ್ತು ವ್ಯವಸ್ಥಿತ ರಚನೆ ಇದು.

    ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ವೇದಾಂತ ಕಂಪನಿಯ ಗಣಿಗಳಿವೆ. ಕಂಪನಿಯು ಅನಿಲ್ ಅಗರವಾಲ್ ಫೌಂಡೇಷನ್ ಮೂಲಕ ‘ವೇದಾಂತ ಕೇರ್ ಫೀಲ್ಡ್ ಹಾಸ್ಪಿಟಲ್’ಅನ್ನು ಇತ್ತೀಚೆಗೆ ಚಿತ್ರದುರ್ಗದಲ್ಲಿ ನಿರ್ವಿುಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ವೇದಾಂತದ ಎರಡನೇ ಫೀಲ್ಡ್ ಹಾಸ್ಪಿಟಲ್ ಹುಬ್ಬಳ್ಳಿಯಲ್ಲಿ ಸದ್ಯದಲ್ಲೇ ಉದ್ಘಾಟನೆಯಾಗಲಿದೆ.

    ‘ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಸ್ಪತ್ರೆ ನಿರ್ವಣವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಕೆಲವು ಅಂತಿಮ ಸ್ಪರ್ಶದ ಕೆಲಸಗಳಷ್ಟೇ ಬಾಕಿ ಇವೆ. ಒಂದೆರಡು ದಿನದಲ್ಲಿ ಅವನ್ನೂ ಪೂರ್ಣಗೊಳಿಸಲಾಗುತ್ತದೆ’ ಎಂದು ವೇದಾಂತ ಕಂಪನಿಯ ಸಿಎಸ್​ಆರ್ ಅಧಿಕಾರಿ ನಿಶಿನ್, ನಿರ್ಮಾಣ ಕಾರ್ಯ ವಹಿಸಿಕೊಂಡಿರುವ ಶ್ರೀ ಬಾಲಾಜಿ ಎಕ್ಸಿಮ್್ಸ ಕಂಪನಿ ಅಧಿಕಾರಿ ಅಖಿಲೇಶ ಅವರು ‘ವಿಜಯವಾಣಿ’ಗೆ ತಿಳಿಸಿದರು. ಸಿದ್ಧ ಉಪಕರಣ ಮತ್ತು ಬಿಡಿ ಭಾಗಗಳ ವ್ಯವಸ್ಥಿತ ಅಳವಡಿಕೆ ಹಾಗೂ ಸ್ಥಾಪನೆ ಮಾದರಿಯಲ್ಲಿ ಚಿಕಿತ್ಸಾಲಯ ಸಜ್ಜುಗೊಳಿಸಲಾಗಿದೆ ಎಂದು ಪ್ರಾಜೆಕ್ಟ್ ಮ್ಯಾನೇಜ್​ವೆುಂಟ್ ಕಂಪನಿಯಾದ ಹೊಸ್ಮ್ಯಾಕ್​ನ ಅಧಿಕಾರಿ ಜಯಪ್ರಕಾಶ ಗುಪ್ತಾ ತಿಳಿಸಿದರು.

    20 ಹಾಸಿಗೆ ಐಸಿಯು

    ವೇದಾಂತ ಕೇರ್ ಚಿಕಿತ್ಸಾಲಯದ 100 ಹಾಸಿಗೆಗಳಲ್ಲಿ 80 ಆಕ್ಸಿಜನ್ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ. 20 ಹಾಸಿಗೆಗಳ ತೀವ್ರ ನಿಗಾ ಘಟಕ (ಐಸಿಯು) ಸಿದ್ಧಪಡಿಸಲಾಗಿದೆ. ಎಲ್ಲ ನೂರು ಮಂಚ, ಹಾಸಿಗೆ, ದಿಂಬು ಹಾಕಿ, ಇತರ ಪರಿಕರಗಳನ್ನೂ ಅಳವಡಿಸಲಾಗಿದೆ.

    ಏನೇನು ಇವೆ…

    ನೋಂದಣಿ ಮೇಜು, ಪರೀಕ್ಷಾ ಕೊಠಡಿ, ಉಗ್ರಾಣ ಹಾಗೂ ದಾಖಲೆ ಕೊಠಡಿ, ಕೇಂದ್ರದ ಮುಖ್ಯಸ್ಥರ ಕೊಠಡಿ, ಉಪಯುಕ್ತ ಸೇವೆ, ಐಟಿ-ಸಿಸಿಟಿವಿ, ಸಹಾಯಕರ ಕೋಣೆ, ಸ್ಟಾಫ್ ಲೌಂಜ್, ಜನರಲ್ ಸ್ಟೋರ್, ಪ್ರಯೋಗಾಲಯ, ನರ್ಸಿಂಗ್ ಸ್ಟೇಷನ್, ವೈದ್ಯಾಧಿಕಾರಿಗಳ ಕೊಠಡಿ, ಉಪಕರಣ ಕೋಣೆ, ಎಕ್ಸ್ ರೇ ಕೊಠಡಿ… ಹೀಗೆ ಆಸ್ಪತ್ರೆಯಲ್ಲಿ ಎಲ್ಲವನ್ನೂ ಅತ್ಯಂತ ಶಿಸ್ತುಬದ್ಧವಾಗಿ ಮಾಡಲಾಗಿದೆ.

    ಸಚಿವರ ಕಾಳಜಿ

    ವೇದಾಂತ ಕಂಪನಿಯ ಚಟುವಟಿಕೆ ಒಂದಲ್ಲ ಒಂದು ರೀತಿಯಿಂದ ಕೇಂದ್ರ ಗಣಿ, ಭೂವಿಜ್ಞಾನ ಇಲಾಖೆಗೆ ಸಂಬಂಧಪಡುತ್ತವೆ. ಈ ಇಲಾಖೆ ಜವಾಬ್ದಾರಿಯನ್ನೂ ಹೊಂದಿರುವ ಸಚಿವ ಪ್ರಲ್ಹಾದ ಜೋಶಿ ಅವರು ಕಂಪನಿಯು ಸಿಎಸ್​ಆರ್ ಅಡಿಯಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಆಸ್ಪತ್ರೆ ನಿರ್ವಿುಸಿಕೊಡುತ್ತದೆ ಎಂಬುದನ್ನು ತಿಳಿದುಕೊಂಡು, ಆಡಳಿತ ವರ್ಗದವರ ಎದುರು ಬೇಡಿಕೆ ಇಟ್ಟು ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ. ಕರೊನಾ ಸೋಂಕಿತರ ಉಪಚಾರಕ್ಕೆ ಇದರಿಂದ ಬಹಳ ಅನುಕೂಲವಾಗಲಿದೆ.

    ಕಿಮ್್ಸ ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ತಜ್ಞ ವೈದ್ಯರಿದ್ದಾರೆ. ಆಕ್ಸಿಜನ್ ಬೆಡ್, ಐಸಿಯು ಸೇರಿದಂತೆ ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳು ಈ ಸಲ ಕರೊನಾ ಸೋಂಕಿತರ ಸಂಖ್ಯೆ ಏರಿದಾಗ ಸಾಕಾಗಲಿಲ್ಲ ಎನ್ನುವುದನ್ನು ಗಮನಕ್ಕೆ ಬಂತು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಹೆಚ್ಚಿನ ಸೌಲಭ್ಯಕ್ಕೆ ಮನವಿ ಮಾಡಿದ್ದರು. ಕೂಡಲೆ, ವೇದಾಂತ ಕಂಪನಿಯ ಅನಿಲ ಅಗರವಾಲ ಅವರನ್ನು ಸಂರ್ಪಸಿ ಬೇಡಿಕೆ ಮಂಡಿಸಿದೆ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಸರ್ಕಾರದಲ್ಲಿ ತಮ್ಮ ಕೆಲಸಗಳು ತ್ವರಿತವಾಗಿ ಆಗುತ್ತಿರುವ ಕುರಿತು ತೃಪ್ತಿ ಹೊಂದಿರುವ ಅಗರವಾಲ ಅವರು, ಸಂತೋಷದಿಂದಲೇ ಸ್ಪಂದಿಸಿದರು. ಕಿಮ್್ಸ ಆಸ್ಪತ್ರೆಯವರು ಎ.ಸಿ. ಅಗತ್ಯ ಎಂದು ಹೇಳಿದರು. ಅದಕ್ಕೆ 20 ಲಕ್ಷ ರೂ.ಗಿಂತ ಹೆಚ್ಚು ವೆಚ್ಚದ ವಿದ್ಯುತ್ ಪರಿವರ್ತಕ ಹಾಕಬೇಕಿತ್ತು. ಈ ಖರ್ಚನ್ನೂ ಪ್ರತಿಷ್ಠಾನದವರೇ ಭರಿಸಿದ್ದಾರೆ. ನಿಗದಿತ 15 ದಿನದಲ್ಲೇ ಕೆಲಸ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಈ ಆಸ್ಪತ್ರೆಯನ್ನು ಉದ್ಘಾಟಿಸಿ ಬಳಕೆಗೆ ಮುಕ್ತಗೊಳಿಸಲಾಗುವುದು.

    | ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts