More

    ಕರೊನಾ ಭೀತಿ ನಡುವೆಯೂ ವಿಶ್ವದಾದ್ಯಂತ ಸಿಲುಕಿರೋ ಭಾರತೀಯರನ್ನು ಕರೆತರಲು ಸರ್ಕಾರದ ಮೆಗಾ ಯೋಜನೆ!

    ನವದೆಹಲಿ: ಕರೊನಾ ವೈರಸ್​ ಬಿಕ್ಕಟ್ಟಿನಿಂದ ವಿಶ್ವದಾದ್ಯಂತ ಸಿಲುಕಿರುವ ಸಾವಿರಾರು ಭಾರತೀಯರನ್ನು ವಾಯು ಮತ್ತು ಸಮುದ್ರಯಾನ ಮೂಲಕ ಗುರುವಾರದಿಂದ ತವರಿಗೆ ಕರೆತರಲು ಕೇಂದ್ರ ಸರ್ಕಾರ ಮೆಗಾ ಸ್ಥಳಾಂತರ ಯೋಜನೆ ರೂಪಿಸಿದ್ದು, ರಾಷ್ಟ್ರವು ಸ್ವತಂತ್ರಗೊಂಡ ಬಳಿಕ ನಡೆಯುತ್ತಿರುವ ಅತಿದೊಡ್ಡ ಸ್ಥಳಾಂತರ ಇದಾಗಿದೆ.

    13 ದೇಶಗಳಲ್ಲಿರುವ 14, 800 ಭಾರತೀಯರನ್ನು 64 ವಿಮಾನಗಳಲ್ಲಿ ಮೊದಲ ವಾರದಲ್ಲಿ ಮರಳಿ ಕರೆತರುವುದಾಗಿ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ವಿಮಾನ ಹಾರಾಟ ನಿರ್ಬಂಧಗೊಂಡಿರುವ ಪಶ್ಚಿಮ ಏಷಿಯಾ ಮತ್ತು ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ಹೊತ್ತು ತರಲು ಭಾರತೀಯ ನೌಕಾಪಡೆಯ ಮೂರು ಹಡಗುಗಳು ಸಹ ಸಂಚರಿಸಲಿವೆ.

    ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕ್​ ವಾಯುಸೇನೆಯ ಪೈಲಟ್​ ಆಗಿ ಹಿಂದು ಯುವಕ ನೇಮಕ!

    ಮೊದಲ ದಿನದ ಸ್ಥಳಾಂತರದಲ್ಲಿ 10 ವಿಮಾನಗಳು 2,300 ಭಾರತೀಯರನ್ನು ಕರೆತರಲಿದೆ. ಭಾರತದ ವಿಮಾನಗಳು ಯುಎಸ್​, ಫಿಲಿಫೈನ್ಸ್​, ಸಿಂಗಾಪುರ್, ಬಾಂಗ್ಲಾದೇಶ, ಯುಎಇ, ಯುಕೆ, ಸೌದಿ ಅರೇಬಿಯಾ, ಕತಾರ್​​, ಓಮನ್​, ಬಹ್ರೇನ್​ ಮತ್ತು ಕವೈತ್​ಗೆ ಭೇಟಿ ನೀಡಲಿವೆ. ಎರಡನೇ ದಿನ ಯೋಜನೆ ಪ್ರಕಾರ ಸುಮಾರು 2,050 ಭಾರತೀಯರು 9 ವಿವಿಧ ದೇಶಗಳಿಂದ ಚೆನ್ನೈ, ಕೊಚ್ಚಿ, ಮುಂಬೈ, ಅಹಮದಬಾದ್​, ಬೆಂಗಳೂರು ಮತ್ತು ದೆಹಲಿಗೆ ಬಂದಿಳಿಯಲಿದ್ದಾರೆ.

    ಮೂರನೇ ದಿನವೂ ಇದೇ ಸಂಖ್ಯೆಯಲ್ಲಿ ಯುಎಸ್​ಎ, ಮಧ್ಯಪೂರ್ವ ಯೂರೋಪ್​ ಹಾಗೂ ಆಗ್ನೇಯ ಏಷ್ಯಾದ 13 ರಾಷ್ಟ್ರಗಳಲ್ಲಿ ಇರುವ ಭಾರತೀಯರು ಮುಂಬೈ, ಕೊಚ್ಚಿ, ಲಖನೌ ಮತ್ತು ದೆಹಲಿಗೆ ಬಂದು ಇಳಿಯಲಿದ್ದಾರೆ. ನಾಲ್ಕನೇ ದಿನದ ಯೋಜನೆ ಪ್ರಕಾರ ಯುಎಸ್​, ಯುಕೆ ಮತ್ತು ಯುಎಇ ಸೇರಿದಂತೆ 8 ವಿವಿಧ ದೇಶಗಳಲ್ಲಿ ಸಿಲುಕಿರುವ 1,850 ಭಾರತೀಯರನ್ನು ಸರ್ಕಾರ ತವರಿಗೆ ಕರೆತರಲಿದೆ.

    ಇದನ್ನೂ ಓದಿ: ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

    ವಿಮಾನಗಳು ಕಾರ್ಯನಿರ್ವಹಿಸುವುದನ್ನು ಅವಲಂಬಿಸಿ, ಪ್ರತಿ ವಿಮಾನವು 200 ರಿಂದ 300 ಪ್ರಯಾಣಿಕರನ್ನು ಹೊಂದುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಚಿತಪಡಿಸಲಿದೆ. ಭಾರತೀಯರನ್ನು ಹೊತ್ತು ವಿಶೇಷ ವಿಮಾನಗಳು ಹೊರಡುವ ಮುನ್ನ ಪ್ರಯಾಣಿಕರು ತಮಗೇನಾದರೂ ಜ್ವರ, ಕೆಮ್ಮು, ಡಯಾಬಿಟೀಸ್​ ಅಥವಾ ಯಾವುದೇ ಉಸಿರಾಟದ ತೊಂದರೆಯಿದ್ದಲ್ಲಿ ಮೊದಲೇ ತಿಳಿಸಬೇಕಾಗುತ್ತದೆ.

    ಕರೊನಾ ವೈರಸ್​ ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಇನ್ನು ಐಎನ್​ಎಸ್​ ಜಲಶ್ವ ಸೇರಿದಂತೆ ನೌಕಾಪಡೆಯಿಂದ ನಿಯೋಜನೆಗೊಂಡಿರುವ ಮೂರು ಹಡಗುಗಳು ಭಾರತೀಯರನ್ನು ಮರಳಿ ಕರೆತರಲಿದೆ. ವಿಸಾಖಪಟ್ಟಣದಲ್ಲಿರುವ ಐಎನ್​ಎಸ್​ ಜಲಶ್ವ ಅರಬ್ಬೀ ಸಮುದ್ರದ ಮೂಲಕ ಮಿಷನ್​ ಆರಂಭಿಸಲಿದ್ದು, 1000 ಭಾರತೀಯರನ್ನು ಕರೆತರಲಿದೆ. ಉಳಿದಂತೆ ಐಎನ್​ಎಸ್​ ಶಾರ್ದುಲ್​ ಮತ್ತು ಐಎನ್​ಎಸ್​ ಮಗಾರ್​ ಸಹ ನಿಯೋಜನೆಗೊಂಡಿದ್ದು, ಸಾಮಾಜಿಕ ಅಂತರ ಕಾರಣದಿಂದ ಟ್ರಿಪ್​​ ಒಂದಕ್ಕೆ 300 ಪ್ರಯಾಣಿಕರನ್ನು ಮಾತ್ರ ಹೊತ್ತು ತರಲಿವೆ. (ಏಜೆನ್ಸೀಸ್​)

    ಇದನ್ನೂ ಓದಿ: ಮದ್ಯದ ಅಮಲಿನಿಂದ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ ದುರಂತ ಸಾವಿಗೀಡಾದ ವ್ಯಕ್ತಿ

    ಕರಡಿ ಬೇಟೆಯಾಡಿ ಫೋಟೋಗೆ ಪೋಸ್ ನೀಡಿದ್ದನ್ನು ಟೀಕಿಸಿದವರಿಗೆ ಯುವತಿಯ ತಿರುಗೇಟು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts