More

    14ರ ಬಾಲಕಿಗೆ ಒಲಿದ ಪ್ರತಿಷ್ಠಿತ ಒಡಿಶಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ

    ಕಟಕ್: ಉದಯೋನ್ಮುಖ ಪ್ರತಿಭೆಗಳಾದ ಕಿರಣ್ ಜಾರ್ಜ್ ಹಾಗೂ ಉನ್ನತಿ ಹೂಡಾ, ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತ್ರೀಸಾ ಜೊಲಿ ಹಾಗೂ ಗಾಯತ್ರಿ ಗೋಪಿಚಂದ್ ಪ್ರಶಸ್ತಿ ಗೆದ್ದುಕೊಂಡರು. 14 ವರ್ಷದ ಉನ್ನತಿ ಹೂಡಾ ಅತಿ ಕಿರಿಯ ವಯಸ್ಸಿಗೆ ಪ್ರಶಸ್ತಿ ಗೆದ್ದ ಭಾರತದ ಆಟಗಾರ್ತಿ ಎನಿಸಿಕೊಂಡಿದ್ದಾರೆ.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಉನ್ನತಿ ಹೂಡಾ 21-19, 21-11 ನೇರ ಗೇಮ್‌ಗಳಿಂದ ಸ್ವದೇಶ ಬಾಂಧವೆ ಸ್ಮಿತ್ ತೋಶ್ನಿವಾಲ್ ಅವರನ್ನು ಕೇವಲ 35 ನಿಮಿಷಗಳಲ್ಲಿ ಮಣಿಸಿದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೇಯಾಂಕ ರಹಿತ ಆಟಗಾರ 21 ವರ್ಷದ ಕಿರಣ್ ಜಾರ್ಜ್ 21-15, 14-21, 21-18 ರಿಂದ ಪ್ರಿಯಾಂಶು ರಾಜವತ್ ಅವರನ್ನು 58 ನಿಮಿಷಗಳ ಹಣಾಹಣಿಯಲ್ಲಿ ಸೋಲಿಸಿದರು.

    ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತ್ರೀಸಾ ಜೊಲಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿ 21-12, 21-10 ರಿಂದ ಸಂಯೋಗಿತಾ ಘೋರ್ಪಡೆ-ಶೃತಿ ಮಿಶ್ರಾ ಜೋಡಿ ಎದುರು ಕೇವಲ 28 ನಿಮಿಷಗಳಲ್ಲಿ ಜಯ ದಾಖಲಿಸಿತು. ಪುರುಷರ ಡಬಲ್ಸ್ ವಿಭಾಗದಲ್ಲಿ ರವಿಕೃಷ್ಣ ಪಿಎಸ್-ಶಂಕರ್ ಪ್ರಸಾದ್, ಮಿಶ್ರ ಡಬಲ್ಸ್ ವಿಭಾಗದಲ್ಲಿ ಎಂ.ಆರ್.ಅರ್ಜುನ್ ಹಾಗೂ ತ್ರೀಸಾ ಜೊಲಿ ಫೈನಲ್‌ನಲ್ಲಿ ಮುಗ್ಗರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts