More

    ಸತತ ಎರಡನೇ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್​ಗೆ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಜೋಡಿ: ಪ್ರಣಯ್​ಗೆ ನಿರಾಸೆ

    ನವದೆಹಲಿ: ವಿಶ್ವ ನಂ. 2 ಡಬಲ್ಸ್​ ಜೋಡಿ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಇಂಡಿಯಾ ಓಪನ್​ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ್ದಾರೆ. ಸಿಂಗಲ್ಸ್​ನಲ್ಲಿ ಎಚ್​ಎಸ್​ ಪ್ರಣಯ್​ ನಿರಾಸೆ ಅನುಭವಿಸಿದ್ದಾರೆ.

    ಶನಿವಾರ ನಡೆದ ಸೆಮಿೈನಲ್​ ಪಂದ್ಯದಲ್ಲಿ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಜೋಡಿ ಪುರುಷರ ಡಬಲ್ಸ್​ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್​, ವಿಶ್ವ ನಂ. 4 ಜೋಡಿ ಆರೋನ್​ ಚಿಯಾ ಮತ್ತು ಸೊಹ್​ ವೂಯಿ ಯಿಕ್​ ಅವರನ್ನು 21-18, 21-14 ನೇರ ಗೇಮ್​ಗಳಿಂದ ಸೋಲಿಸಿ ೈನಲ್​ಗೆ ಮುನ್ನಡೆಯಿತು. ಇದರೊಂದಿಗೆ ವರ್ಷದ ಸತತ ಎರಡನೇ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದೆ.

    ಈ ಮೂಲಕ ಬಿಡಬ್ಲುಎ್​ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರುವ ಸನಿಹದಲ್ಲಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ವಿಶ್ವ ನಂ.3 ಕೊರಿಯಾದ ಎಸ್​ಜೆ. ಸಿಯೋ&ಎಂಎಚ್​ ಕಾಂಗ್​ ಜೋಡಿ ಸವಾಲು ಎದುರಿಸಲಿದೆ. ಸಾತ್ವಿಕ್​&ಚಿರಾಗ್​ ಶೆಟ್ಟಿ ಜೋಡಿ ಕಳೆದ ವಾರ ಮಲೇಷ್ಯಾ ಮಾಸ್ಟ್ರರ್ಸ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಸಾತ್ವಿಕ್​&ಚಿರಾಗ್​ ಜೋಡಿ ರನ್ನರ್​ ಅಪ್​ ಆಗಿತ್ತು. ಪುರುಷರ ಸಿಂಗಲ್ಸ್​ನಲ್ಲಿ ವಿಶ್ವ ನಂ.9 ಎಚ್​ಎಸ್​ ಪ್ರಣಯ್​ 15&21, 5&21 ರಿಂದ ವಿಶ್ವ ನಂ.2 ಚೀನಾದ ಶಿ ಯು ಕೀ ಎದುರು ಪರಾಭವಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts