More

    ರಾಮದುರ್ಗ, ಬೆಳಗಾವಿ: ಹಂಚಿಹೋಗಿದ್ದ ರಾಜ್ಯವನ್ನು ಅಖಂಡವಾಗಿಸುವಲ್ಲಿ ಅನೇಕ ಮಹನೀಯರ ಪಾತ್ರವಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
    ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತದಲ್ಲಿ ಅಧಿಕಾರಿಗಳು ಕನ್ನಡವನ್ನೇ ಬಳಕೆ ಮಾಡಬೇಕು. ಕನ್ನಡ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಅಧಿಕಾರಿಗಳು ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕು. ಕನ್ನಡ ಭಾಷೆಯ ಮೇಲೆ ಬೆಳಕು ಚೆಲ್ಲಲು ಕನ್ನಡ ಮನಸ್ಸುಗಳು ಒಂದಾಗಿ ಕಾರ್ಯನಿರ್ವಹಿಸಬೇಕು ಎಂದರು.

    ಉಪನ್ಯಾಸಕ ರಮೇಶ ಮೋಟೆ ಕನ್ನಡ ಭಾಷೆಯ ಕುರಿತು ಅತಿಥಿ ಉಪನ್ಯಾಸ ನೀಡಿದರು. ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು. ರಘುನಾಥ ರೇಣಕೆ, ನಾಗರಾಜ ಕಟ್ಟಿಮನಿ, ಪ್ರವೀಣಕುಮಾರ ಸಾಲಿ, ಎನ್.ವೈ. ಕುಂದರಗಿ, ಐ.ಆರ್.ಪಟ್ಟಣಶೆಟ್ಟಿ, ಪಾಂಡುರಂಗ ಜಟಗನ್ನವರ, ಅಧ್ಯಕ್ಷ ಶಂಕರ ಬೆನ್ನೂರ, ಸರಿತಾ ದೂತ, ಸಂಗೀತಾ ರಾಯಭಾಗ, ಪ್ರಹ್ಲಾದ ಬಡಿಗೇರ, ಬಸವರಾಜ ಯಾದವಾಡ, ಕಿರಣ ಸಣ್ಣಕ್ಕಿ, ಎಇಇ ಶಿವಪ್ರಕಾಶ ಕರಡಿ, ಶಿವಕ್ಕ ಮಾದರ, ಶಂಕರ ಕುಂಬಾರ, ರಾಮಪ್ಪ ರಕ್ಕಸಗಿ ಇತರರಿದ್ದರು.

    ಹಳ್ಳೂರ ವರದಿ: ಸಮೀಪದ ಖಾನಟ್ಟಿ ಪಿಕೆಪಿಎಸ್ ಸಂಘದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯನಿರ್ವಾಹಕ ಜಗದೀಶ ಬಳಿಗಾರ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮಹಾಲಿಂಗಯ್ಯ ಪೂಜೇರಿ, ಪರಯ್ಯ ಮಹಾಲಿಂಗಪೂರ, ಮಹಾದೇವ ಬಡಿಗೇರ, ಶಿವನಪ್ಪ ತುಪ್ಪದ, ಮಹಾಂತೇಶ ರಡೇರಟ್ಟಿ, ಶ್ರೀಶೈಲ ತುಪ್ಪದ, ಕೆಂಪಣ್ಣ ಮೇತ್ರಿ, ರಾಮಣ್ಣ ಕರಗಣ್ಣಿ ಇತರರಿದ್ದರು.

    ಕಟಕೋಳ ವರದಿ: ಸಮೀಪದ ಚಂದರಗಿ ಕ್ರೀಡಾ ವಸತಿ ಶಾಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಚಂದರಗಿ ಎಸ್.ಎಂ.ಕಲೂತಿ ಕ್ರೀಡಾ ವಸತಿ ಶಾಲೆ ಉಪಾಧ್ಯಕ್ಷೆ ರಾಜೇಶ್ವರಿ ಯಾದವಾಡ, ನಿರ್ದೇಶಕ ಎಂ.ಎಸ್.ಮನೋಳಿ ಮಾತನಾಡಿದರು. ಶಿಕ್ಷಕ ಎಸ್.ಎ.ಹಿರೇಮಠ, ಐ.ಜಿ.ಅಂಕಲಿ, ಎಸ್.ಸಿ.ತೋರಣಗಟ್ಟಿ, ನಿರ್ದೇಶಕ ಎಸ್.ಆರ್.ನವರಕ್ಕಿ, ಉದಯಕುಮಾರ ಸೋಮನಟ್ಟಿ, ಎಸ್.ಎಸ್.ಮುದೇನೂರ, ಪ್ರಾಚಾರ್ಯರಾದ ಎ.ಎನ್.ಮೋದಗಿ, ಪಿ.ಕೆ.ಪಾಟೀಲ ಹಾಗೂ ಎಸ್.ಬಿ.ಪಾಟೀಲ, ವ್ಯವಸ್ಥಾಪಕ ಜಗದೀಶ ಮುರಗೋಡ, ಎ್.ಎಲ್.ಮದಹಳ್ಳಿ ಇತರರಿದ್ದರು.

    ಕಡಬಿ ವರದಿ: ಇಲ್ಲಿನ ಬಸ್ ನಿಲ್ದಾಣ ಪಕ್ಕದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕಡಬಿ ಗ್ರಾಮ ಘಟಕ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಕೈಗೊಳ್ಳಲಾಯಿತು. ಲಕ್ಷ್ಮಣ ಚಿಕ್ಕೋಡಿ, ಪಿಡಿಒ ಸುವರ್ಣಗೌರಿ ಕೊಣ್ಣೂರ, ಗ್ರಾಪಂ ಸದಸ್ಯ ಗಂಗಪ್ಪ ಮೀಶಿ, ಸಿದ್ದಪ್ಪ ಮುಕ್ಕನ್ನವರ, ಶೌಕತ್ತಲಿ ಸನದಿ ಇತರರಿದ್ದರು.

    ಇಟಗಿ ವರದಿ: ಇಲ್ಲಿನ ಜನತಾ ಶಿಕ್ಷಣ ಪ್ರಸಾರ ಸಮಿತಿಯ ರಾಣಿ ಚನ್ನಮ್ಮಳ ಸ್ಮಾರಕ ಸಂಯುಕ್ತ ಪದವಿ ಪೂರ್ವ ಹಾಗೂ ಬಿ.ಎಂ.ಸಾಣಿಕೊಪ್ಪ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಚೇರ್ಮನ್ ವಿಜಯಕುಮಾರ ಸಾಣಿಕೊಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯದರ್ಶಿ ಶ್ರೀಶೈಲ ತುರಮರಿ, ಕೋಶಾಧಿಕಾರಿ ಎಂ.ಎಸ್.ಸಾಣಿಕೊಪ್ಪ, ನಿರ್ದೇಶಕ ಸಿ.ಬಿ.ಲಂಗೋಟಿ, ಬಿ.ವಿ.ಬೆಣಚಮರ್ಡಿ, ಎಸ್.ಪಿ.ಸಾಣಿಕೊಪ್ಪ, ಎಸ್.ವಿ.ಗಣಾಚಾರಿ, ಎಂ.ವಿ.ತುರಮರಿ, ಬಿ.ಎಸ್.ಪುಂಡಿ, ಎಸ್.ಕೆ.ಕುರಗುಂದ, ಪ್ರಾಚಾರ್ಯ ಎಸ್.ಎಸ್.ಶಾಸಿ, ಆರ್.ಬಿ.ಹುಣಶೀಕಟ್ಟಿ, ಮುಖ್ಯ ಶಿಕ್ಷಕ ಎಂ.ಬಿ.ಕಾಮಗೌಡ, ಎಸ್.ಎಸ್.ಅಂಗಡಿ, ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷ ವಿಜಯ ಬಡಿಗೇರ, ಶಿಕ್ಷಕ ಕೆ.ಟಿ.ತಳವಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts