More

    1,326 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.5 ರಿಯಾಯಿತಿ ದರದ ಆಸ್ತಿ ತೆರಿಗೆ ಪಾವತಿಗೆ ಭಾನುವಾರ (ಮೇ 31) ಕೊನೆಯ ದಿನವಾಗಿದ್ದು, ಈವರೆಗೆ ಒಟ್ಟು 1,326.48 ಕೋಟಿ ರೂ. ಸಂಗ್ರಹವಾಗಿದೆ.

    ಬಿಬಿಎಂಪಿ 2020-21ನೇ ಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಆದರೆ ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ ಶೇ.5 ರಿಯಾಯಿತಿ ದರದಲ್ಲಿ ಆಸ್ತಿ ತೆರಿಗೆ ಪಾವತಿಸಲು ಮೇ 31ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈ ಅವಧಿಯನ್ನು ಸದುಪಯೋಗ ಮಾಡಿಕೊಂಡಿರುವ ಜನರು, ಕರೊನಾ ಭೀತಿಯಿಂದ ಆನ್​ಲೈನ್ ಪಾವತಿಗೆ ಮೊರೆ ಹೋಗಿದ್ದಾರೆ.

    ಇದನ್ನೂ ಓದಿ  ಪಿಯು ಮೌಲ್ಯಮಾಪಕರ ಜತೆ ಸರ್ಕಾರ ಚೆಲ್ಲಾಟ

    ಏಪ್ರಿಲ್​ನಲ್ಲಿ ಕೇವಲ 300 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಆದರೆ ಮೇ ಅಂತ್ಯಕ್ಕೆ 1,026 ಕೋಟಿ ರೂ. ಪಾವತಿಸಿದ್ದಾರೆ. ಆನ್​ಲೈನ್ ಮೂಲಕ 727.83 ಕೋಟಿ ರೂ. ಹಾಗೂ ಆಫ್​ಲೈನ್ (ಬ್ಯಾಂಕ್ ಚಲನ್) ಮೂಲಕ 598.65 ಕೋಟಿ ರೂ. ಪಾವತಿಸಿದ್ದಾರೆ. ರಿಯಾಯಿತಿ ಅವಧಿಯ ಒಂದೇ ತಿಂಗಳಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾದಂತಾಗಿದೆ. ಕೆಲವು ಸಂಘ ಸಂಸ್ಥೆಗಳು ಕೋಟ್ಯಂತರ ರೂ. ಆಸ್ತಿ ತೆರಿಗೆಯನ್ನು ನೇರವಾಗಿ ಚೆಕ್ ಮೂಲಕ ಪಾವತಿಸಿದ್ದಾರೆ.

    ರಿಯಾಯಿತಿ ವಿಸ್ತರಣೆಯಿಲ್ಲ: ಲಾಕ್​ಡೌನ್ ಪರಿಣಾಮ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ರಾಜ್ಯದ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಆಸ್ತಿ ತೆರಿಗೆ ಪಾವತಿಗೆ (ಬಿಬಿಎಂಪಿ ಹೊರತು ಪಡಿಸಿ) ಸರ್ಕಾರ ಜೂ.30ರವರೆಗೆ ಅವಕಾಶ ನೀಡಿದೆ. ಈಗಾಗಲೇ ಮೇ 31ರ ಒಳಗಾಗಿ ಆಸ್ತಿ ತೆರಿಗೆ ಪಾವತಿಗೆ ಹಲವು ಬಾರಿ ಸೂಚನೆ ನೀಡಿ, ಜಾಗೃತಿ ಮೂಡಿಸಲಾಗಿದೆ. ಹೀಗಾಗಿ ರಿಯಾಯಿತಿ ಅವಧಿ ಮುಂದುವರಿಸುವ ಬಗ್ಗೆ ಬಿಬಿಎಂಪಿಯಲ್ಲಿ ಯಾವುದೇ ಚಿಂತನೆಗಳಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಿಮ್ಮ ಮೊಬೈಲ್​ನಲ್ಲಿ ಚೀನಾದ ಆ್ಯಪ್​ ಇದೆಯೆ- ಪತ್ತೆ ಹಚ್ಚೋದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts