More

  131 ಕೋಟಿ ಪರಿಹಾರ ಬಾಕಿ; ಚೆನ್ನೆ-ಬೆಂಗಳೂರು ಎಕ್ಸ್​ಪ್ರೆಸ್​ ರಸ್ತೆ ವೇಗ ಪಡೆದರೂ ರೈತರಿಗೆ ಪರಿಹಾರ ವಿಳಂಬ 

  ಬೇತಮಂಗಲ: ಶರವೇಗದಲ್ಲಿ ನಿರ್ಮಾಣವಾಗುತ್ತಿರುವ 20 ಸಾವಿರ ಕೋಟಿ ರೂಪಾಯಿ ವೆಚ್ಚದ ಚೆನ್ನೆ$&ಬೆಂಗಳೂರು ಎಕ್ಸ್​ಪ್ರೆಸ್​ ಕಾರಿಡಾರ್​ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡವರಿಗೆ ಈಗಾಗಲೇ 388 ಕೋಟಿ ರೂಪಾಯಿ ಪರಿಹಾರ ವಿತರಿಸಿದ್ದು, ಇನ್ನೂ 131.42 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಲು ಭೂ ಸ್ವಾಧಿನ ಅಧಿಕಾರಿಗಳು ಸತಾಯಿಸುತ್ತಿದ್ದು, ಇದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಹೊಸಕೋಟೆ ಹೊರವಲಯದಿಂದ ಆರಂಭವಾಗುವ ಕಾರಿಡಾರ್​ ರಸ್ತೆಯು ಚೆನ್ನೆ$ ಹೊರವಲಯದ ಶ್ರೀ ಪೆರಂಬದೂರುವರೆಗೂ ಒಟ್ಟು 262 ಕಿ.ಮೀ. ನಿರ್ಮಾಣವಾಗಲಿದೆ. ಈ ರಸ್ತೆಯು ಕೋಲಾರ ಜಿಲ್ಲೆಯ 62 ಗ್ರಾಮಗಳಲ್ಲಿ ಒಟ್ಟು 77 ಕಿಮೀ ಹಾದುಹೋಗಲಿದೆ. ಜಿಲ್ಲೆಯಲ್ಲಿ 1645.68 ಎಕರೆ ಕೃಷಿ ಭೂಮಿ ಹಾಗೂ2100 ಎಕರೆ ಸರ್ಕಾರಿ ಭೂಮಿ ಸೇರಿದಂತೆ ಒಟ್ಟು 3,746 ಎಕರೆ ಪ್ರದೇಶವನ್ನು ರಸ್ತೆಗಾಗಿ ಸ್ವಾಧಿನಪಡಿಸಿಕೊಳ್ಳಲಾಗಿದೆ.

  131 ಕೋಟಿ ಪರಿಹಾರ ಬಾಕಿ; ಚೆನ್ನೆ-ಬೆಂಗಳೂರು ಎಕ್ಸ್​ಪ್ರೆಸ್​ ರಸ್ತೆ ವೇಗ ಪಡೆದರೂ ರೈತರಿಗೆ ಪರಿಹಾರ ವಿಳಂಬ 
  ಚೆನ್ನೆ-ಬೆಂಗಳೂರು ಎಕ್ಸ್​ಪ್ರೆಸ್​ ರಸ್ತೆ.

  ಪರಿಹಾರ ಏನು ಎತ್ತ ಹೇಗೆ?
  ಆಯಾ ತಾಲೂಕಿನ ಸಬ್​ರಿಜಿಸ್ಟ್ರಾರ್​ ಕಚೇರಿಯಲ್ಲಿ ಆಯಾ ಪ್ರದೇಶದಲ್ಲಿ ಮಾರಾಟವಾಗುತ್ತಿರುವ ನಿಗದಿತ ಬೆಲೆಯನ್ನು ರೈತರಿಗೆ ನೀಡುವುದರ ಜತೆಗೆ ಪರಿಹಾರವಾಗಿ ನಾಲ್ಕು ಪಟ್ಟು ನೀಡುವುದಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಹುತೇಕ ರೈತರಿಗೆ ಹೇಳಿರುವ ರೀತಿಯಲ್ಲೆ ಪರಿಹಾರ ಹಣ ಈಗಾಗಲೇ ನೀಡಲಾಗಿದೆ.

  ಎಷ್ಟು ಸಿಕ್ಕಿದೆ, ಬಾಕಿ ಎಷ್ಟು?
  ಜಿಲ್ಲೆಯಲ್ಲಿ 4,974 ರೈತರು 1645 ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಮಾಲೂರು ತಾಲೂಕಿನ ರೈತರಿಗೆ ಈಗಾಗಲೇ 260.47 ಕೋಟಿ ರೂಪಾಯಿ, ಕೋಲಾರ ತಾಲೂಕಿನ ರೈತರಿಗೆ 4.12ಕೋಟಿ ರೂ., ಬಂಗಾರಪೇಟೆ ರೈತರಿಗೆ 54. 20 ಕೋಟಿ ರೂ., ಕೆಜಿಎ್​ ರೈತರಿಗೆ 68.34.ಕೋಟಿ ರೂಪಾಯಿ ಹಾಗೂ ಮುಳಬಾಗಿಲು ತಾಲೂಕಿನ ರೈತರಿಗೆ 71 ಲ ರೂಪಾಯಿ ಸೇರಿದಂತೆ ಒಟ್ಟು 387.84 ಕೋಟಿ ರೂ. ಹಣವನ್ನು ಪರಿಹಾರವಾಗಿ ನೀಡಲಾಗಿದೆ.

  132 ಕೋಟಿ ರೂಪಾಯಿ ಬಾಕಿ:
  ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಹಣ ನೀಡಲಾಗಿದೆಯಾದರೂ, ಪಿ.ನಂಬರ್​ ಹೊಂದಿರುವ ಭೂಮಿಗೆ ಮತ್ತು ಭೂಮಿಯಲ್ಲಿದ್ದ ಮರ, ಗಿಡಗಳು, ಮನೆ, ಕಟ್ಟಡ, ಕೊಳವೆಬಾವಿ ಸೇರಿದಂತೆ ರಸ್ತೆಗಾಗಿ ಆಸ್ತಿ ಕಳೆದುಕೊಂಡಿರುವ ರೈತರಿಗೆ ಇನ್ನೂ ಬರೋಬ್ಬರಿ 132 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕಿದೆ.

  ಕಳೆದುಕೊಂಡ ಸ್ಥಿರಾಸ್ತಿಗೆ ಪರಿಹಾರ ನೀಡಿ:
  ಎಸ್​.ಆರ್​.ತಾಲೂಕು ಸಬ್​ ರಿಜಿಸ್ಟರ್​ ಕಚೇರಿಯಲ್ಲಿ ಭೂ ಸ್ವಾಧಿನಗೊಂಡಿರುವ ಭೂಮಿಯ ನಮೂದಾಗಿರುವ ಬೆಲೆಗೆ ನಾಲ್ಕು ಪಟ್ಟು ಪರಿಹಾರ ಈಗಾಗಲೇ ನೀಡಿದ್ದಾರೆ. ಆದರೆ ಪಿ. ನಂಬರ್​ ಆಸ್ತಿ ಹೊಂದಿರುವ ರೈತರಿಗೆ ಪರಿಹಾರ ನೀಡದಿರುವುದು, ಅದೇ ರೀತಿಯಲ್ಲಿ ಸ್ವಾಧಿನಪಡಿಸಿಕೊಂಡಿರುವ ಭೂಮಿಯಲ್ಲಿದ್ದ ಕಟ್ಟಡಗಳು, ಮರಗಿಡಗಳು, ಬೋರ್​ವೆಲ್​ ಸೇರಿದಂತೆ ಇತರ ನಾಶವಾಗಿರುವ ಸ್ಥಿರ ಆಸ್ತಿಗೆ ಈವರೆಗೂ ಪರಿಹಾರ ನೀಡಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಶ್ರೀವೇ ಪರಿಹಾರ ಒದಗಿಸಬೇಕು ಎಂಬುದು ಕೋಮಲ್​ ನಿರ್ದೇಶಕರೂ ಆದ ರಸ್ತೆಗೆ ಭೂಮಿ ನೀಡಿರುವ ಜಯಸಿಂಹ ಕೃಷ್ಣಪ್ಪ ಆಗ್ರಹ.

  ಪಿ.(ಪೋಡಿ) ನಂಬರ್​ ದುರಸ್ತಿಗೊಳಿಸಿ ಪರಿಹಾರವನ್ನು ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದ ಭೂಸ್ವಾಧಿನ ಅಧಿಕಾರಿಗಳು 4 ವರ್ಷವಾದರೂ ಇನ್ನೂ ದುರಸ್ತಿ ಮಾಡಿಲ್ಲ. ಸರ್ಕಾರವು 10 ಅಡಿ ಮಣ್ಣು ತೆಗೆಯಬೇಕು ಎಂದು ತಿಳಿಸಿದೆ. ಆದರೆ ರಸ್ತೆ ಗುತ್ತಿಗೆ ಪಡೆದವರು 20 ರಿಂದ 30 ಅಡಿ ಆಳದವರೆಗೂ ಮಣ್ಣು ತೆಗೆಯುತ್ತಿದ್ದಾರೆ. ಇದರಿಂದ ಮುಂದೆ ಸಮಸ್ಯೆ ಎದುರಾಗಲಿದೆ.
  | ಕೂಳೂರು ಚಂದ್ರಪ್ಪ, ಜಿಲ್ಲಾ ಕಾರ್ಯದರ್ಶಿ, ರೈತಸಂ

  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ಭೂ ಸ್ವಾಧಿನಪಡಿಸಿಕೊಳ್ಳಲಾಗಿದೆ. ರಸ್ತೆಗಾಗಿ ಭೂಮಿ, ಇತರ ಆಸ್ತಿ ಕಳೆದುಕೊಂಡವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಪಿ.ನಂಬರ್​ ಮತ್ತು ನ್ಯಾಯಾಲಯದಲ್ಲಿರುವ ಜಮೀನುಗಳಿಗೆ ಪರಿಹಾರ ಹಣ ನೀಡಿಲ್ಲ. ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 400 ಕೋಟಿ ರೂಪಾಯಿ ಪರಿಹಾರ ನೀಡಿದ್ದು, ಇನ್ನೂ ಸುಮಾರು 100 ಕೋಟಿ ರೂಪಾಯಿ ನಮ್ಮಲ್ಲಿ ಬಾಕಿಯಿದೆ. ಸೂಕ್ತ ದಾಖಲೆ ನೀಡಿದರೆ ಪರಿಹಾರ ನೀಡಲಾಗುವುದು.
  | ಜಯರಾಮರೆಡ್ಡಿ, ವಿಶೇಷ ಭೂಸ್ವಾಧಿನಾಧಿಕಾರಿ, ಕೋಲಾರ

  ಎಲ್ಲೆಲ್ಲಿ ಎಷ್ಟು ಭೂ ಸ್ವಾಧಿನ?
  ತಾಲೂಕು         ಗ್ರಾಮ   ಎಕರೆ
  ಮಾಲೂರು        22      490
  ಕೋಲಾರ          2        43
  ಬಂಗಾರಪೇಟೆ    14     435
  ಕೆಜಿಎ್​             22     650
  ಮುಳಬಾಗಿಲು     2       40

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts