More

    ಪಾಕ್ ಬಸ್ ಸ್ಫೋಟದಲ್ಲಿ 13 ಮಂದಿ ದುರ್ಮರಣ; ಮೃತರಲ್ಲಿ 9 ಜನ ಚೀನೀಯರು!

    ಪೇಶಾವರ : ವಾಯುವ್ಯ ಪಾಕಿಸ್ತಾನದಲ್ಲಿ ಜನರಿಂದ ತುಂಬಿದ್ದ ಬಸ್‌ನಲ್ಲಿ ಸ್ಫೋಟ ಉಂಟಾಗಿ, ಕಂದರಕ್ಕೆ ಬಿದ್ದಿರುವ ಘಟನೆ ಸಂಭವಿಸಿದೆ. ಹದಿಮೂರು ಜನರು ಮೃತಪಟ್ಟಿದ್ದು, ಅವರಲ್ಲಿ ಒಂಬತ್ತು ಮಂದಿ ಚೀನಾದ ಕಾರ್ಮಿಕರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಫೋಟದ ಸ್ವರೂಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದರೆ, ಇಸ್ಲಾಮಾಬಾದ್‌ನ ಚೀನಾದ ರಾಯಭಾರ ಕಚೇರಿಯು ತನ್ನ ಪ್ರಜೆಗಳ ಮೇಲೆ ‘ದಾಳಿ’ ನಡೆದಿದೆ ಎಂದು ಹೇಳಿಕೆ ನೀಡಿದೆ. “ಪಾಕಿಸ್ತಾನದಲ್ಲಿ ಚೀನಾದ ಕಂಪೆನಿಯ ನಿರ್ದಿಷ್ಟ ಯೋಜನೆಯು ದಾಳಿಗೆ ಒಳಗಾಗಿದೆ. ಇದರಿಂದ ಚೀನಾದ ಪ್ರಜೆಗಳ ಸಾವುಂಟಾಗಿದೆ” ಎಂದಿರುವ ಚೀನಾ ಎಂಬೆಸಿ, ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಸಂಸ್ಥೆಗಳಿಗೆ, ತಮ್ಮ ಭದ್ರತಾ ವಿಧಾನಗಳನ್ನು ಬಲಪಡಿಸುವಂತೆ ಹೇಳಿದೆ.

    ಇದನ್ನೂ ಓದಿ: ದೀದಿ ನಾಡಿನ ಬೀಡಿ ಪ್ರಿಯರ ಬಾಯಲ್ಲಿ ಮೆಸ್ಸಿ ಮಾತು! ವೈರಲ್ ಆಯ್ತು ಮೆಸ್ಸಿ ಬೀಡಿ ಫೋಟೋ!

    ಖೈಬರ್​ ಪಕ್ತುಂಖ್ವಾ ಪ್ರದೇಶದಲ್ಲಿ ದಾಸು ಅಣೆಕಟ್ಟಿನ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಹೋಗುತ್ತಿದ್ದ ಚೀನಾದ ಇಂಜಿನಿಯರ್​ಗಳು, ಸರ್ವೆಯರ್​ಗಳು ಮತ್ತು ಮೆಕಾನಿಕಲ್​ ಸಿಬ್ಬಂದಿಯೊಂದಿಗೆ, ಸ್ಥಳೀಯ ಕಾರ್ಮಿಕರಿದ್ದ ಬಸ್ಸಿನಲ್ಲಿ ಇಂದು ಸ್ಫೋಟವುಂಟಾಯಿತು. ಸ್ಫೋಟದ ನಂತರ ಬಸ್​ ಕಂದರಕ್ಕೆ ಜಾರಿತು. ನಾಲ್ವರು ಪಾಕಿಸ್ತಾನೀಯರು ಮತ್ತು 9 ಚೀನಾ ಪ್ರಜೆಗಳು ಸಾವಪ್ಪಿದ್ದು, ಇನ್ನೂ 28 ಚೀನೀಯರಿಗೆ ಗಾಯಗಳಾಗಿವೆ ಎನ್ನಲಾಗಿದೆ.

    ಈ ಹಲ್ಲೆಯನ್ನು ಖಂಡಿಸಿರುವ ಚೀನಾ ವಿದೇಶಾಂಗ ವಕ್ತಾರ ಝಾವೊ ಲಿಜಿಯನ್​, ದಾಳಿಕೋರರನ್ನು ಶೀಘ್ರವಾಗಿ ಬಂಧಿಸಿ ತೀವ್ರ ಶಿಕ್ಷೆ ವಿಧಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ. (ಏಜೆನ್ಸೀಸ್)

    ರಾಜ್ಯದಲ್ಲಿ ಮಾಸಿಕ 60 ಲಕ್ಷ ಜನರಿಗೆ ಕರೊನಾ ಲಸಿಕೆ

    VIDEO | ಭಾರೀ ಜಡಿಮಳೆ, ಊರಿನೊಳಗೆ ನೀರಿನ ಹೊಳೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts