More

    121 ಮಾರ್ಷಲ್ಸ್ ಪಡೆ ಕಾರ್ಯಾರಂಭ

    ಹುಕ್ಕೇರಿ: ಕೋವಿಡ್ ನಿಯತ್ರಣಕ್ಕಾಗಿ ಇಂದಿನಿಂದ ಜಿಲ್ಲೆಯ 33 ನಗರ ಸ್ಥಳೀಯ ಸಂಸ್ಥೆಗಳಲ್ಲಿ 121 ಕೋವಿಡ್ ಮಾರ್ಷಲ್ಸ್ ಪಡೆ ಕಾರ್ಯೋನ್ಮುಖವಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳದ ಹಾಗೂ ಮಾಸ್ಕ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಲಾಗುವುದು ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

    ತಾಲೂಕಿನ ಸಂಕೇಶ್ವರ ಪುರಸಭೆಯಲ್ಲಿ ಮಾರ್ಷಲ್ ಪಡೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆೆ. ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಯಾವುದೇ ಕೊರತೆ ಉಂಟಾಗದಂತೆ ಕ್ರಮವಹಿಸಲಾಗುವುದು ಎಂದರು.

    ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಮಾತನಾಡಿ, ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿ ಒಳಗೊಂಡ ಮಾರ್ಷಲ್ ಪಡೆ ಜನಸಂದಣಿ ಇರುವ ಪ್ರದೇಶಗಳು, ಗಡಿ ಭಾಗ, ದೇವಸ್ಥಾನ, ಸಭೆ ಸಮಾರಂಭಗಳಲ್ಲಿ ಭೇಟಿ ನೀಡಿ ಜಾಗೃತಿ ಮೂಡಿಸುವುದು ಮತ್ತ ದಂಡ ವಿಧಿಸಲಿದೆ. ಪುರಸಭೆ ಅಧ್ಯಕ್ಷೆ ಸೀಮಾ ಹತನೂರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ ಪರ್ವತರಾವ, ಶ್ರೀಕಾಂತ ಹತನೂರೆ, ಅಮರ ನಲವಡೆ, ಸಂಜಯ ಶಿರಕೋಳಿ, ಸಂಜಯ ನಷ್ಠಿ, ಪವನ ಪಾಟೀಲ, ಹಾರುನ್ ಮುಲ್ಲಾ, ತಹಸೀಲ್ದಾರ್ ಡಾ. ಡಿ.ಎಚ್.ಹೂಗಾರ, ಅಭಿಯಂತ ರವೀಂದ್ರ ಗಡಾದ, ಸಿಪಿಐ ರಮೇಶ ಛಾಯಾಗೋಳ ಸೇರಿದಂತೆ ಇತರರಿದ್ದರು.

    ಬಾರ್, ಕಲ್ಯಾಣ ಮಂಟಪ ಮಾಲೀಕರು ಹಾಗೂ ವರ್ತಕರು ಯಾವುದೇ ಕಾರಣಕ್ಕೂ ಕರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಮೀರಬಾರದು, ಉಲಂಘಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು.
    | ಡಾ.ಡಿ.ಎಚ್.ಹೂಗಾರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts