More

    ಪರಿಶ್ರಮವೇ ಸಾಧನೆಗೆ ಮೂಲ

    ವಿಜಯಪುರ: ಸತತ ಪರಿಶ್ರಮದ ಮೂಲಕವೇ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಬಹುದು ಹೊರತು ಇದರಲ್ಲಿ ಯಾವುದೇ ಒಳದಾರಿಗಳು ಇಲ್ಲ ಎಂದು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಹೇಳಿದರು.

    ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್, ವೈದ್ಯ ದಿ. ಡಾ. ಸಿ.ಆರ್. ಬಿದರಿಯವರ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ನಡೆದ ಬಿಎಲ್‌ಡಿಇ ಸಂಸ್ಥೆಯ 9ನೇ ಅಂತರ್ ಶಾಲಾ ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

    ಕ್ರೀಡೆಯಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ, ಸಮರ್ಪಣೆ ಮನೋಭಾವ ಮತ್ತು ಕ್ರೀಡಾಸ್ಪೂರ್ತಿ ಮುಖ್ಯವಾಗಿದೆ. ಇಲ್ಲಿ ಯಾವುದೇ ಅಡ್ಡಮಾರ್ಗಗಳ ಮೂಲಕ ಸಾಧನೆ ಮಾಡಲು ಸಾಧ್ಯವಿಲ್ಲ. ಶ್ರಮಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಫೆ. 23ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲುೃಪಿಎಲ್) ನಲ್ಲಿ ಜಿಲ್ಲೆಯ ಜನತೆ ನನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ಬಿಎಲ್‌ಡಿಇ ಡೀಮ್ಡ್ ವಿವಿಯ ಉಪಕುಲಪತಿ ಡಾ. ಆರ್.ಎಸ್. ಮುಧೋಳ ಮಾತನಾಡಿ, ಕ್ರೀಡಾಕೂಟಗಳು ನಾಯಕತ್ವ ಗುಣ ಮತ್ತು ಸಾಧನೆ ಮಾಡಲು ಅವಕಾಶ ಕಲ್ಪಿಸುತ್ತವೆ. ಎಲ್ಲ ಕ್ಷೇತ್ರಗಳಲ್ಲಿ ಕ್ರೀಡಾಸ್ಪೂರ್ತಿ ಪಡೆದು ಕಠಿಣ ಶ್ರಮಿವಹಿಸಿ ಉತ್ತಮ ಸಾಧನೆ ಮಾಡುವಂತೆ ಹೇಳಿದರು.

    ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್.ಎಸ್. ಕೋರಿ ಮಾತನಾಡಿದರು. ಡಾ. ಆರ್.ಬಿ. ಕೊಟ್ನಾಳ, ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ ಜಂಟಿಯಾಗಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ನೀಲಮ್ಮಾ ರಾಠೋಡ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

    ಡಾ. ಶೈಲಜಾ ಬಿದರಿ, ಪ್ರಾಚಾರ್ಯ ಡಾ. ವಿ.ಜಿ. ಸಂಗಮ, ಡಾ. ಆರ್.ವಿ. ಕುಲಕರ್ಣಿ, ಬಿ.ಆರ್. ಪಾಟೀಲ, ಎಸ್.ಎಚ್. ಲಗಳಿ, ಕೈಲಾಸ ಹಿರೇಮಠ, ಭಾರತಿ ಪಾಟೀಲ, ಪಿ.ವಿ. ಮಾಗಿ, ಉಮೇಶ ದೀಕ್ಷಿತ, ರಮೇಶ ಜೀರಗಾಳ, ಡಾ. ನವೀನ ದೇಸಾಯಿ, ಗಿರೀಶ ಕುಲಕರ್ಣಿ, ಐ.ಎಸ್. ಇಕ್ಕಳಕಿ, ಡಾ. ಎ.ಎಸ್. ಜಾಧವ, ವೈ.ಎ. ಕುಲಕರ್ಣಿ, ಎಸ್.ಎಸ್. ಚಪ್ಪಾರ, ಶಿಲ್ಪಾ ಪಾಟೀಲ ಮತ್ತಿತರರಿದ್ದರು.

    ಗೀತಾಂಜಲಿ ಪಾಟೀಲ ಸ್ವಾಗತಿಸಿದರು. ಆಶಾ ಎಂ. ಪಾಟೀಲ ನಿರೂಪಿಸಿದರು. ಐ.ಎಸ್. ಇಕ್ಕಳಕಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts