More

    2022ರೊಳಗೆ ರೈತರ ಆದಾಯ ದ್ವಿಗುಣ: 3ನೇ ಜಾಗತಿಕ ಆಲೂಗೆಡ್ಡೆ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

    ಗಾಂಧಿನಗರ: ರೈತರ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸಲು ಅನೇಕ ಪ್ರಯತ್ನ ಮತ್ತು ಹೆಜ್ಜೆಗಳನ್ನು ಇಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

    ಗುಜರಾತ್​ನ ಗಾಂಧಿನಗರದಲ್ಲಿ ಮಂಗಳವಾರ ನಡೆದ 3ನೇ ಜಾಗತಿಕ ಆಲೂಗೆಡ್ಡೆ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಮಾತನಾಡಿದರು.

    ಆರು ಕೋಟಿ ರೈತರ ಖಾತೆಗಳಿಗೆ ನೇರವಾಗಿ 12 ಸಾವಿರ ಕೋಟಿ ರೂ. ಜಮಾ ಆಗುವ ಮೂಲಕ ಈ ತಿಂಗಳ ಆರಂಭದಲ್ಲೇ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ ಎಂದು ತಿಳಿಸಿದರು.

    ಮೂರನೇ ಜಾಗತಿಕ ಆಲೂಗೆಡ್ಡೆ ಸಮಾವೇಶವು ಗುಜರಾತಿನಲ್ಲಿ ನಡೆದಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಆಲೂಗೆಡ್ಡೆ ಉತ್ಪಾದನೆಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ. ಕಳೆದ 11 ವರ್ಷಗಳಿಂದ ಆಲೂಗೆಡ್ಡೆ ಬೆಳೆಯುವ ಏರಿಯಾ ಅಂದಾಜು ಶೇ. 20ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಗುಜರಾತಿನಲ್ಲಿ ಅಂದಾಜು ಶೇ 170 ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.

    ಕೆಲವು ವಿಶಿಷ್ಠ ಆಹಾರ ಉತ್ಪನ್ನ ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಪ್ರಮುಖ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಪಡೆದಿದೆ. ಅದಕ್ಕೆ ಕಾರಣ ರೈತರ ಶ್ರಮ ಮತ್ತು ಸರ್ಕಾರ ನಿಯಮಗಳು ಎಂದು ಪ್ರಧಾನಿ ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts