More

    ಕರೊನಾ: ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇಕಡ 12 ಏರಿಕೆ! ಕೇರಳದಲ್ಲಿ 32,803 ಹೊಸ ಕೇಸು

    ನವದೆಹಲಿ: ಭಾರತದಲ್ಲಿ ಕರೊನಾ ನಿತ್ಯಪ್ರಕರಣಗಳ ಸಂಖ್ಯೆಯು ಇಂದು ಶೇಕಡ 12 ರಷ್ಟು ಏರಿಕೆಯಾಗಿದೆ. ಇಂದು ಬೆಳಿಗ್ಗೆಯ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 47,092 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಕಳೆದ ಎರಡು ತಿಂಗಳುಗಳಲ್ಲಿ ಆಗಿರುವ ಅತಿದೊಡ್ಡ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 509 ಕರೊನಾ ಸಂಬಂಧಿತ ಸಾವುಗಳು ವರದಿಯಾಗಿವೆ.

    ಕರೊನಾ ಕೇಸುಗಳಲ್ಲಿ ಸತತ ಏರಿಕೆ ತೋರುತ್ತಿರುವ ಕೇರಳದಲ್ಲಿ 32,803 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 40,90,036ಕ್ಕೆ ಏರಿದೆ. ಕೇರಳದಲ್ಲಿ ಹಾಲಿ ಟೆಸ್ಟ್​ ಪಾಸಿಟಿವಿಟಿ ರೇಟ್​​ ಶೇ. 18.76 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ 173 ಜನರು ಕರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಕೇರಳದಲ್ಲಿ 20,961 ಜನರು ಕರೊನಾದಿಂದ ಸಾವಪ್ಪಿದ್ದಾರೆ.

    ಇದನ್ನೂ ಓದಿ: ಪಂಜ್‌ಶೀರ್‌ ಗೆಲ್ಲಲಾಗದ ತಾಲಿಬಾನಿಗಳಿಂದ ದುಷ್ಕೃತ್ಯ- ಇಂಟರ್‌ನೆಟ್‌ ಸ್ಥಗಿತ, ರಸ್ತೆ ಬಂದ್‌!

    ಕೇರಳದಲ್ಲಿ ಶೇಕಡ 85 ರಷ್ಟು ಸೋಂಕಿತರು ಮನೆಯಲ್ಲೇ ಐಸೊಲೇಟ್​ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ಚತುರ ಕ್ರಮಗಳನ್ನೊಳಗೊಂಡ ಲಾಕ್​ಡೌನ್​ ಮಾಡಲು ಸೂಚಿಸಿದೆ. ಆದಾಗ್ಯೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಲಹೆಗಳನ್ನು ಪೂರ್ಣವಾಗಿ ಅನುಸರಿಸುತ್ತಿಲ್ಲ ಹಾಗೂ ಇದರ ಪ್ರಭಾವವು ಅಕ್ಕಪಕ್ಕದ ರಾಜ್ಯಗಳ ಮೇಲೂ ಕಂಡುಬರುತ್ತಿದೆ ಎಂದು ತಿಳಿಸಿದೆ.

    ಕರ್ನಾಟಕದಲ್ಲಿ ಹಾಲಿ 18,386 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 4,456 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ 183 ಕರೊನಾ ಸಾವುಗಳನ್ನು ವರದಿ ಮಾಡಿದೆ. (ಏಜೆನ್ಸೀಸ್)

    VIDEO| ಫುಟ್​ಬಾಲ್​ ವಿಶ್ವ ದಾಖಲೆ ಮುರಿದ ಕ್ರಿಸ್ಟಿಯಾನೋ ರೊನಾಲ್ಡೋ! 111 ಅಂತರರಾಷ್ಟ್ರೀಯ ಗೋಲ್​ಗಳ ಒಡೆಯ!

    ಕಳೆದ 5 ತಿಂಗಳಲ್ಲಿ ಅಬಕಾರಿ ಇಲಾಖೆ ಆದಾಯ ಎಷ್ಟು ಗೊತ್ತಾ?

    ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts