More

    12ರಂದು ಬೃಹತ್ ಉದ್ಯೋಗ ಮೇಳ

    ಕೊಳ್ಳೇಗಾಲ: ಪಟ್ಟಣದ ನ್ಯಾಷನಲ್ ಶಾಲಾ ಮೈದಾನದಲ್ಲಿ ಬಿ.ರಾಚಯ್ಯ ಪ್ರತಿಷ್ಠಾನ ವತಿಯಿಂದ ಮಾ.12ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.

    ಕ್ಷೇತ್ರ ಪ್ರವಾಸದಲ್ಲಿದ್ದಾಗ ನೂರಾರು ನಿರುದ್ಯೋಗಿ ಯುವಕ-ಯುವತಿಯರು ಉದ್ಯೋಗ ಮೇಳ ಮಾಡುವಂತೆ ಮನವಿ ಮಾಡಿದ್ದರು. ಅಂತೆಯೆ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ತಂದೆ ದಿ.ಬಿ.ರಾಚಯ್ಯ ಅವರ 100ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾರ್ಯಕ್ರಮಕ್ಕೆ ವಾಟಾಳ್ ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಚಾಲನೆ ನೀಡುವರು ಎಂದರು.

    ಕ್ವೇಸ್ ಕಾರ್ಪೊರೇಟ್ ಕಂಪನಿಯ ಜನರಲ್ ಮ್ಯಾನೇಜರ್ ಬಿ.ಪಿ.ವೆಂಕಟೇಶ್‌ಮೂರ್ತಿ ಮಾತನಾಡಿ, ಈವರೆಗೆ ನಮ್ಮ ಕಂಪನಿಯಲ್ಲಿ 5 ಲಕ್ಷ ಜನರು ಉದ್ಯೋಗ ಮಾಡುತ್ತಿದ್ದಾರೆ. ನಮ್ಮ ಕಂಪನಿ ಜತೆ 100 ಕ್ಕೂ ಹೆಚ್ಚು ಕಂಪನಿಗಳು ಸಹಭಾಗಿತ್ವ ಪಡೆದಿವೆ. ದೇಶ ಮತ್ತು ವಿದೇಶದಲ್ಲೂ ನಮ್ಮ ಕಂಪನಿಯಿದ್ದು, ಪ್ರತಿ ತಿಂಗಳು 2 ರಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

    ಫೆಸಿಲಿಟಿ ಮ್ಯಾನೇಜ್ಮೆಂಟ್, ಸೆಕ್ಯೂರಿಟಿ ಸರ್ವಿಸ್, ಫುಟ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಸರ್ವಿಸಸ್, ಟೆಲಿ ಕಮ್ಯುನಿಕೇಷನ್, ಇ-ಕಾಮರ್ಸ್…ಹೀಗೆ ಹಲವು ಕಡೆ ಕೆಲಸ ಮಾಡುವ ಅವಕಾಶ ಸಿಗಲಿದೆ. ಮೇಳದಲ್ಲಿ 50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಪಿಎಫ್, ಎಎಸ್‌ಐ, ವಿಮಾ ಸೌಲಭ್ಯ ಲಭ್ಯವಿದ್ದು, 7ನೇ ತರಗತಿಯಿಂದ ಉನ್ನತ ಶಿಕ್ಷಣ ಅರ್ಹತೆ ಪಡೆದವರು ಭಾಗವಹಿಸಬಹುದು. ಕನಿಷ್ಠ 2000 ಸಾವಿರ ಜನರಿಗೆ ಉದ್ಯೋಗ ನೀಡುವ ಗುರಿ ಇದ್ದು, 18 ರಿಂದ 45 ವರ್ಷ ವಯೋಮಿತಿಯೊಳಗಿನವರು ಭಾಗವಹಿಸಬಹುದು. ಸಂದರ್ಶನದಲ್ಲಿ ಆಯ್ಕೆಯಾದರೆ ಅಂದೇ ಆಯ್ಕೆ ಪತ್ರ ನೀಡಲಾಗುವುದು ಎಂದರು.

    ಜಿಎನ್‌ಎನ್‌ಗೆ ಸ್ವಾಗತ: ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ವರು ಮಾಜಿ ಶಾಸಕರು ಒಂದೆಡೆ ಇರುವುದು ವಿಶೇಷ. ಜಿಎನ್‌ಎನ್ ಅವರ ಸೇರ್ಪಡೆ ಸ್ವಾಗತಾರ್ಹ. ಷರತ್ತುರಹಿತವಾಗಿ ಪಕ್ಷಕ್ಕೆ ಬಂದಿದ್ದಾರೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಬಿಜೆಪಿಗೆ ಸೆಡ್ಡು ಹೊಡೆಯಬಹುದು ಎಂದರು.

    ನಗರಸಭೆಯ ಅಧಿಕಾರಿಗಳು ನಿರ್ಣಯ ಹಾಗೂ ನಿಯಮವನ್ನು ಅನುಸರಿಸಿಲ್ಲ. ಹೀಗಾಗಿ ಬಸ್ ಟರ್ಮಿನಲ್ ಲೋಕಾರ್ಪಣೆ ವಿಚಾರದಲ್ಲಿ ಸಮಸ್ಯೆ ಎದ್ದಿದೆ. ಶಾಸಕರು ಅವ್ಯವಸ್ಥೆಯನ್ನು ಅರಿತು ಸರಿಪಡಿಸಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಆದ್ದರಿಂದಲೇ ಕಾಂಗ್ರೆಸ್ ಅಧ್ಯಕ್ಷರನ್ನು ಒಳಗೊಂಡಂತೆ ಸದಸ್ಯರು ನ್ಯಾಯಾಲಯ ಮೊರೆ ಹೋಗುವ ಹೇಳಿಕೆ ನೀಡಿದ್ದಾರೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಮುಖಂಡ ಅನ್ಸರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts