More

    118 ವರ್ಷದ ಧರ್ಮವೀರ್‌ ಅತ್ಯಂತ ಹಿರಿಯ ಮತದಾರ! ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ ಹೇಳಿದ್ದಿಷ್ಟು

    ಲೋಕಸಭಾ ಚುನಾವಣೆಯ ಮತದಾನ ಹರಿಯಾಣದಲ್ಲಿ ನಡೆದಿದ್ದು, ರಾಜ್ಯದ ಹಿರಿಯ ಮತದಾರರು ಮತಗಟ್ಟೆಯಲ್ಲಿ ಮತದಾನ ಮಾಡಿರುವ ಬಗ್ಗೆ ಅಲ್ಲಿನ ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ ಸಂತಸ ವ್ಯಕ್ತಪಡಿಸಿದ್ದು, ಪಲ್ವಾಲ್ ಜಿಲ್ಲೆಯ ಧರ್ಮವೀರ್ ಅವರು 118 ವರ್ಷ ವಯಸ್ಸಿನವರು, ಇವರು ರಾಜ್ಯದ ಅತ್ಯಂತ ಹಿರಿಯ ಮತದಾರರಾಗಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಮೊದಲ ಸುತ್ತಿನಲ್ಲಿ 65.4% ಮತದಾನ; ತ್ರಿಪುರಾದಲ್ಲಿ ಅತಿಹೆಚ್ಚು, ಬಿಹಾರದಲ್ಲಿ ಅತಿ ಕಡಿಮೆ ವೋಟಿಂಗ್​

    ರಾಜ್ಯದ ಇತರ ಶತಾಯುಷಿಗಳೆಂದರೆ ಸಿರ್ಸಾ ಜಿಲ್ಲೆಯ ಬಲ್ಬೀರ್ ಕೌರ್ (117), ಸೋನಿಪತ್ ಜಿಲ್ಲೆಯ ಭಗವಾನಿ (116), ಪಾಣಿಪತ್ ಜಿಲ್ಲೆಯ ಲಕ್ಷಿಶೇಕ್ (115), ಪಾಣಿಪತ್ ಜಿಲ್ಲೆಯ ಚಂದ್ರೋ ಕೌರ್ (112), ರೋಹ್ಟಕ್ ಜಿಲ್ಲೆಯ ರಾಣಿ (112), ಫತೇಹಾಬಾದ್ ಜಿಲ್ಲೆಯ ಆಂಟಿದೇವಿ (111), ಕುರುಕ್ಷೇತ್ರ ಜಿಲ್ಲೆಯ ಮತ್ತು ಸರ್ಜಿತ್ ಕೌರ್ ಮತ್ತು ಚೋಬಿ ದೇವಿ ಇಬ್ಬರೂ 111 ವರ್ಷ ವಯಸ್ಸಿನವರು. ಅದೇ ರೀತಿ ರೇವಾರಿ ಜಿಲ್ಲೆಯ ನಾರಾಯಣಿ 110 ವರ್ಷ, ಕೈತಾಲ್ ಜಿಲ್ಲೆಯ ಫುಲ್ಲಾ 109 ವರ್ಷ, ಫರಿದಾಬಾದ್ ಜಿಲ್ಲೆಯ ಚಂದೇರಿ ದೇವಿ 109 ವರ್ಷ, ಜಿಂದ್ ಜಿಲ್ಲೆಯ ರಾಮ್ದೇವಿ 108 ವರ್ಷ, ನುಹ್ ಜಿಲ್ಲೆಯ ಹರಿ 108 ವರ್ಷ, ಮೇವಾದೇವಿ ಜಜ್ಜರ್ ಜಿಲ್ಲೆಯ 106 ವರ್ಷ ವಯಸ್ಸಿನವರು ಮತ್ತು ಕರ್ನಾಲ್ ಜಿಲ್ಲೆಯ ಗುಲ್ಜಾರ್ ಸಿಂಗ್, ಹಿಸಾರ್ ಜಿಲ್ಲೆಯ ಶಾಡ್ಕಿನ್ ಮತ್ತು ಶ್ರೀರಾಮ್ ಮತ್ತು ಚಾರ್ಖಿ ದಾದ್ರಿ ಜಿಲ್ಲೆಯ ಗೀನಾ ದೇವಿ 106 ವರ್ಷ ವಯಸ್ಸಿನ ಮತದಾರರು.

    “ಐದು ವರ್ಷಕ್ಕೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಬಾರಿಗೆ ಮತದಾನ ಮಾಡುವ 18-19 ವರ್ಷ ವಯಸ್ಸಿನ ಯುವಕ-ಯುವತಿಯರು ಮತದಾನ ಮಾಡುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ” ಎಂದು ಅಗರ್ವಾಲ್ ಮನವಿ ಜನರಲ್ಲಿ ಮನವಿ ಮಾಡಿಕೊಂಡರು,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts