More

    116 ಗ್ರಾಮಗಳಿಗೆ ಭೀಮೆ ದಿಗ್ಬಂಧನ

    ಕಲಬುರಗಿ: ಮಹಾರಾಷ್ಟ್ರ ಜಲಾಶಯಗಳಿಂದ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಜಿಲ್ಲೆಯ ಭೀಮಾ ನದಿ ಒಡಲಲ್ಲಿ ಭೀಕರ ಪ್ರವಾಹ ಸೃಷ್ಟಿಸಿದೆ. ನದಿ ವ್ಯಾಪ್ತಿಯ 116 ಹಳ್ಳಿಗಳು ಜಲಾವೃತಗೊಂಡಿವೆ. ಹಳ್ಳಿಗರ ಬದುಕು ಸಂಕಟಕ್ಕೆ ಸಿಲುಕಿದೆ.
    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಮತ್ತು ವೀರಭಟ್ಕಳ ಜಲಾಶಯಗಳು ಭರ್ತಿಯಾಗಿದ್ದು, ದಾಖಲೆಯ 8 ಲಕ್ಷ ಕ್ಯೂಸೆಕ್ ನೀರು ಜಿಲ್ಲೆಯ ಸೊನ್ನ ಬ್ಯಾರೇಜ್ಗೆ ಹರಿಸಲಾಗಿದೆ. ಇನ್ನೂ 2 ಲಕ್ಷ ಕ್ಯೂಸೆಕ್ ನೀರು ಬರಲಿದೆ ಎನ್ನಲಾಗಿದೆ.
    ದಾಖಲೆಯ ಒಳಹರಿವಿನಷ್ಟೇ ಪ್ರಮಾಣದ ನೀರು ಸೊನ್ನ ಬ್ಯಾರೇಜ್ನಿಂದ ಭೀಮಾ ಒಡಲಿಗೆ ಹರಿಬಿಟ್ಟಿದ್ದರಿಂದ ನದಿಪಾತ್ರದ ಹಳ್ಳಿಗಳಿಗೆ ನೀರು ಹೊಕ್ಕಿದೆ.
    ಶುಕ್ರವಾರ ಸಂಜೆ 6.30 ಲಕ್ಷ ಕ್ಯೂಸೆಕ್ ಹರಿಸಲಾಗಿತ್ತು. ಕ್ರಮೇಣ ಅದು 7.11 ಲಕ್ಷ ಕ್ಯೂಸೆಕ್ಗೆ ಏರಿತು. ಶನಿವಾರ ಸಂಜೆವರೆಗೆ 8 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ನಿಂದ ನದಿಗೆ ಬಿಡಲಾಗುತ್ತಿದೆ. ಅಫಜಲಪುರ, ಕಲಬುರಗಿ, ಜೇವಗರ್ಿ, ಶಹಾಬಾದ್ ಮತ್ತು ಚಿತ್ತಾಪುರ ತಾಲೂಕಿನಲ್ಲಿ ಲಕ್ಷಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರು ಹೊಕ್ಕು ಬೆಳೆ ಹಾಳಾಗಿವೆ. ಅನ್ನದಾತರ ಆಹಾರಕ್ಕೆ ಕಲ್ಲು ಬಿದ್ದಿದೆ. 40ಕ್ಕೂ ಹೆಚ್ಚು ಹಳ್ಳಿ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದು, ಕೆಲವರು ತಮ್ಮ ಟಾ್ರೃಕ್ಟರ್, ಎತ್ತಿನ ಬಂಡಿಗಳಲ್ಲಿ ಸುರಕ್ಷಿತ ಸ್ಥಳ ಸೇರಿದ್ದಾರೆ.
    ಜಲಾವೃತವಾದ ಅಫಜಲಪುರ ತಾಲೂಕಿನ ಭೋಸಗಾದ ನಾಲ್ಕು ಮನೆಗಳಲ್ಲಿದ್ದ 15 ಜನರನ್ನು ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ. ಕೆಲ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ತರಲು ಆಗುತ್ತಿಲ್ಲ ಎಂದು ಮಂದರವಾಡ ರೈತ ಶರಣಬಸಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.


    ಸುರಕ್ಷಿತ ಸ್ಥಳಗಳಿಗೆ ತೆರಳಿದ ಹಳ್ಳಿಗರು ಅಫಜಲಪುರ ತಾಲೂಕಿನ 54, ಕಲಬುರಗಿಯ 12, ಜೇವಗರ್ಿ 28, ಚಿತ್ತಾಪುರ ಮತ್ತು ಶಹಾಬಾದ್ ಸೇರಿ 22 ಹಳ್ಳಿಗಳಿಗೆ ನೀರು ಹೊಕ್ಕಿದೆ. ಶನಿವಾರ ಸೊನ್ನ, ಹಿರಿಯಾಳ, ಭೋಸಗಾ, ತೆಲ್ಲೂರ, ಹಟ್ಟಿಗಳಿಗೆ ನೀರು ಪ್ರವೇಶಿಸಿದ್ದು, ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದರು. ಘತ್ತರಗಿ, ದೇವಲಗಾಣಗಾಪುರ, ಚಿನಮಳ್ಳಿ ಸೇತುವೆಗಳು ಮುಳುಗಡೆಯಾಗಿವೆ. ರಾಷ್ಟ್ರೀಯ ಹೆದ್ದಾರಿ 50ರ ಜೇವಗರ್ಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಸಂಚಾರ ಬಂದ್ ಮಾಡಲಾಗಿದೆ.

    ರಕ್ಷಣಾ ಕಾರ್ಯಕ್ಕೆ ಅಫಜಲಪುರ, ಜೇವರ್ಗಿ , ಶಹಾಬಾದ್ಗೆ ತೆರಳಿದ ತಂಡ
    ಸೇನಾ ಪಡೆ ಸ್ವಾಗತಿಸಿದ ವಣಿಕ್ಯಾಳ
    ಕಲಬುರಗಿ: ಪ್ರವಾಹಪೀಡಿತರ ರಕ್ಷಣೆ ಮಾಡಲು ಸೇನಾ ಪಡೆ ತುಕಡಿಯೊಂದು ಶನಿವಾರ ರಾತ್ರಿ ನಗರಕ್ಕೆ ಆಗಮಿಸಿತು. ಸಿಕಿಂದ್ರಾಬಾದ್ನಿಂದ ಮೇಜರ್ ಮಾರ್ಟಿನ್ ಅರವಿಂದ ನೇತೃತ್ಬದ ಕಂಪನಿಯಲ್ಲಿ 98 ಯೋಧರಿದ್ದಾರೆ. ಈ ತಂಡವನ್ನು ಹೆಚ್ಚುವರಿ ಡಿಸಿ ಡಾ.ಶಂಕರ ವಣಿಕ್ಯಾಳ ರಿಂಗ್ ರಸ್ತೆಯ ಕಾಯಕ ಫೌಂಡೇಷನ್ ಕಾಲೇಜಿನ ಬಳಿ ಬರ ಮಾಡಿಕೊಂಡರು. ಸೈನಿಕರನ್ನು ಮೂರು ತಂಡವಾಗಿ ಅಫಜಲಪುರ, ಜೇವಗರ್ಿ ಹಾಗೂ ಶಹಾಬಾದ್ ತಾಲೂಕು ಹಾಗೂ ವಾಡಿ ಬಳಿ ಭೀಮಾ ನದಿ ಪಾತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ನಿಯೋಜಿಸಲಾಗಿದ್ದು, ಶನಿವಾರ ರಾತ್ರಿಯಿಂದಲೇ ಕಾಯರ್ಾಚರಣೆಗೆ ಇಳಿಯಲಿದ್ದಾರೆ ಎಂದು ಡಾ.ವಣಿಕ್ಯಾಳ ತಿಳಿಸಿದ್ದಾರೆ.

    ಜನರಕ್ಷಣೆಗೆ ಬಂದ ಭಾರತೀಯ ಸೇನೆ
    ಕಲಬುರಗಿ: ಪ್ರವಾಹದಿಂದ ತತ್ತರಿಸಿರುವ ಜಿಲ್ಲೆ ಜನರ ರಕ್ಷಣೆಗೆ ಪರಿಣಾಮಕಾರಿ ಸೇವೆ ನೀಡಲು ಭಾರತೀಯ ಸೇನೆ ಮತ್ತು ಏರ್ಫೋಸರ್್ ತಂಡಗಳನ್ನು ಜಿಲ್ಲಾಡಳಿತ ಕರೆಸಿದೆ ಎಂದು ಡಿಸಿ ವಿ.ವಿ. ಜೋತ್ಸ್ನಾ ಹೇಳಿದ್ದಾರೆ. ಅಫಜಲಪುರ, ಜೇವರ್ಗಿ, ಕಲಬುರಗಿ, ಶಹಾಬಾದ್ ಮತ್ತು ಚಿತ್ತಾಪುರ ತಾಲೂಕಿನ 148 ಹಳ್ಳಿಗಳು ಅಪಾಯದಲ್ಲಿದ್ದು, ನೆರೆ ಸಂತ್ರಸ್ತರ ರಕ್ಷಣೆಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ಕಾಯರ್ೋನ್ಮುಖವಾಗಿವೆ. ಇವುಗಳಿಗೆ ಜಿಲ್ಲಾ ಪೊಲೀಸ್ ಮತ್ತು ಅಗ್ನಿಶಾಮಕ ದಳ ಸಾಥ್ ನೀಡಿದ್ದು, ದಿನದ 24 ಗಂಟೆ ದುಡಿಯುತ್ತಿದ್ದಾರೆ. ಆಮರ್ಿ ಮತ್ತು ಏರ್ಫೋಸರ್್ ತಂಡಗಳು ಬಂದಿದ್ದರಿಂದ ಇನ್ನಷ್ಟು ಅನುಕೂಲವಾಗಿದೆ. ಶನಿವಾರ ಅಫಜಲಪುರ ತಾಲೂಕಿನ ಬನಹಟ್ಟಿ, ಶಿವಪುರ, ಘತ್ತರಗಾ ಮಾರ್ಗಗಳ ಸಂಚಾರ ಸ್ಥಗಿತವಾಗಿದೆ. ಇಲ್ಲಿಯ ಜನರನ್ನು ಟಾ್ರೃಕ್ಟರ್ ಮುಖಾಂತರ ಅಫಜಲಪುರ ಕಾಳಜಿ ಕೇಂದ್ರಕ್ಕೆ ಕಳಿಸಲಾಗುತ್ತಿದೆ ಎಂದು ಸ್ಥಳೀಯ ಮುಖಂಡ ಅಪ್ಪು ಜಮಾದಾರ ಮಾಹಿತಿ ನೀಡಿದ್ದಾರೆ.

    ಜನ ಜಾನುವಾರುಗಳ ಸಂಕಷ್ಟಕ್ಕೆ
    ಕಣ್ಣೀರಿಟ್ಟ ಸಚಿವ ಕಾರಜೋಳ
    ಕಲಬುರಗಿ: ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ಸ್ಥಿತಿ ಕಂಡು ಮರುಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಕಣ್ಣೀರು ಹಾಕಿದ್ದಾರೆ. ತಮ್ಮ ಕುಟುಂಬ ಕರೊನಾದಿಂದ ಬಳಲುತ್ತಿದ್ದರಿಂದ ಕಲಬುರಗಿಗೆ ಹೋಗಲು ಆಗಿಲ್ಲ. ಆದರೆ ಅಧಿಕಾರಿಗಳ ಜತೆ ನಿತ್ಯ ಸಂಪರ್ಕದಲ್ಲಿದ್ದು, ಪರಿಹಾರಕ್ಕೆ ಸೂಕ್ತ ಸೂಚನೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುವುದರ ಜತೆಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಪ್ರಕಟಣೆ ಮೂಲಕ ಸೂಚಿಸಿರುವ ಅವರು, ಉತ್ತರ ಕನರ್ಾಟಕದಲ್ಲಿ ಮಣ್ಣಿನ ಮನೆಗಳೇ ಹೆಚ್ಚಾಗಿವೆ. ರಣಭೀಕರ ಮಳೆ ಮತ್ತು ಪ್ರವಾಹದಿಂದ ಕುಸಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಬಿದ್ದ ಮನೆಗಳ ಸಮೀಕ್ಷೆ ಮಾಡಿ ಸಂತ್ರಸ್ತರಿಗೆ ಸೂರು ಒದಗಿಸುವಂತೆ ಆದೇಶಿಸಿದ್ದಾರೆ. ಕೃಷಿ ಕೂಲಿಕಾರರು ದುಡಿದು ಬದುಕಬಹುದು. ಆದರೆ ಸೂರೇ ಇಲ್ಲವೆಂದರೆ ಇರೋದಾದ್ರೂ ಎಲ್ಲಿ ಎಂದು ಪ್ರಶ್ನಿಸಿದ ಅವರು, ಸೂರು ಒದಗಿಸುವುದು ಪ್ರಥಮಾದ್ಯತೆ ಆಗಬೇಕು. ಗುಡಿಸಲು ವಾಸಿಗಳ ಕಡೆಯೂ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts