More

    10ನೇ ತರಗತಿ ಪರೀಕ್ಷೆ ಬರೆಯಲಿದ್ದಾನೆ 11 ವರ್ಷದ ಪೋರ!

    ಬಿಲಾಸ್ಪುರ: ಕೇರ್​ ಆಫ್​ ಫುಟ್​ಪಾತ್​ ಸಿನಿಮಾ ನೋಡಿದ ಅನೇಕರಿಗೆ ಕೆಲವು ಚಿಂತನೆಗಳು ಕಾಡಿದ್ದವು. ಈ ವಯಸ್ಸಲ್ಲಿ ಇಷ್ಟೇ ಕ್ಲಾಸ್​ ಎನ್ನುವ ನಿಯಮವೇಕೆ ಎನ್ನುವ ಯೋಚನೆ ಬಂದಿತ್ತು. ಇದೀಗ ಅಂತಹ ನಿಯಮಗಳು ಬದಲಾಗಿದ್ದು, 11 ವರ್ಷದ ಬಾಲಕನೊಬ್ಬ 10ನೇ ತರಗತಿ ಪರೀಕ್ಷೆ ಬರೆಯಲು ಸಿದ್ಧನಾಗಿದ್ದಾನೆ.

    ಚತ್ತೀಸ್​ಗಢದ ದುರ್ಗ್​ ಜಿಲ್ಲೆಯ ಮೈಲ್​ಸ್ಟೋನ್​ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಲಿವ್ಜೋತ್ ಸಿಂಗ್ ಇದೀಗ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಸಿದ್ಧನಾಗಿದ್ದಾನೆ. ಲಿವ್ಜೋತ್​ನ ಐಕ್ಯೂ ಮಟ್ಟವು 16 ವರ್ಷದ ಮಕ್ಕಳಿಗಿರುವಷ್ಟು ಇದೆಯಂತೆ. ಹಾಗಾಗಿ ಜಿಲ್ಲಾಸ್ಪತ್ರೆಯಲ್ಲಿ ಐಕ್ಯೂ ಪರೀಕ್ಷೆ ಮಾಡಿಸಲಾಗಿದ್ದು, ಅದರ ವರದಿ ಮತ್ತು ಈ ಹಿಂದಿನ ಪರೀಕ್ಷೆಗಳ ಅಂಕಪಟ್ಟಿಯನ್ನು ಚತ್ತೀಸ್​ಗಢ ಪ್ರೌಢ ಶಿಕ್ಷಣ ಮಂಡಳಿ (ಸಿಜಿಬಿಎಸ್​ಇ)ಗೆ ಸಲ್ಲಿಸಲಾಗಿದೆ. ಮಂಡಳಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರಿ ಬಾಲಕ ಮನವಿ ಪತ್ರ ಬರೆದಿದ್ದಾನೆ. ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ನಡೆಸಿದ ನಂತರ ಇದೀಗ ಬಾಲಕನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.

    ರಾಜ್ಯದಲ್ಲಿ ಇದೇ ಮೊದಲನೇ ಬಾರಿಗೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತಿದೆ ಎಂದು ಸಿಜಿಬಿಎಸ್​ಇ ಅಧಿಕಾರಿಗಳು ತಿಳಿಸಿದ್ದಾರೆ. “ನನ್ನ ಮಗ 3ನೇ ತರಗತಿ ಇದ್ದಾಗ ಗಣಿತದ ಕಠಿಣ ಲೆಕ್ಕಗಳನ್ನು ತಟ್ಟಂತ ಮಾಡುತ್ತಿದ್ದ. ಆಮೇಲೆ ಕಡಿಮೆ ವಯಸ್ಸಿನಲ್ಲಿಯೇ ಹೆಚ್ಚಿನ ತರಗತಿ ಪರೀಕ್ಷೆ ಬರೆಯುವ ಅವಕಾಶವಿದೆ ಎನ್ನುವ ವಿಚಾರ ನಮಗೆ ತಿಳಿಯಿತು. ಅಲ್ಲಿಂದ ಅವನನ್ನು ಎಸ್​ಎಸ್​ಎಲ್​ಸಿ ಪರೀಕ್ಷೆ ಸಿದ್ಧತೆ ಮಾಡತೊಡಗಿದೆವು” ಎನ್ನುತ್ತಾರೆ ಬಾಲಕನ ತಂದೆ ಗುರುವಿಂದರ್ ಸಿಂಗ್ ಅರೋರಾ. (ಏಜೆನ್ಸೀಸ್​)

    ಬಿಗ್​ಬಾಸ್​ನಲ್ಲಿ ಕಿರಿಕಿರಿ ಮಾಡಿ ಹೊರಬಂದಿದ್ದ ಸ್ಪರ್ಧಿ ನಿಧನ; ಈ ಸ್ಪರ್ಧಿ ಮೇಲಿತ್ತು ಹಲವು ಕೇಸ್​!

    Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts