More

    ಅಮ್ಮನ ವಿರುದ್ಧ ದೂರು ಹೇಳಲು 130 ಕಿ.ಮೀ. ದೂರದ ಅಜ್ಜಿ ಮನೆಗೆ ಸೈಕಲ್​ನಲ್ಲೇ ಹೋದ ಹುಡುಗ!

    ನವದೆಹಲಿ: ಮಕ್ಕಳು ಕೆಲವೊಮ್ಮೆ ತಂದೆ-ತಾಯಿಯ ವಿರುದ್ಧ ಅಜ್ಜಿ-ಅಜ್ಜನಿಗೆ ದೂರು ಹೇಳಿ ಬಚಾವಾಗುತ್ತಾರೆ. ಅವಿಭಕ್ತ ಕುಟುಂಬವಾಗಿ ಎಲ್ಲರೂ ಒಂದೇ ಕಡೆ ಇರುವಲ್ಲಿ ಇದು ಸಹಜ. ಆದರೆ ಇಲ್ಲೊಬ್ಬ ಹುಡುಗ ತನ್ನ ಅಮ್ಮನ ವಿರುದ್ಧ ದೂರು ಹೇಳಲು 130 ಕಿ.ಮೀ. ದೂರದಲ್ಲಿರುವ ಅಜ್ಜಿಮನೆಗೆ ಸೈಕಲ್​ನಲ್ಲೇ ಹೋಗಿದ್ದಾನೆ.

    ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಅಮ್ಮನೊಂದಿಗೆ ಜಗಳವಾಡಿದ ಈ ಹನ್ನೊಂದು ವರ್ಷದ ಹುಡುಗ ಸಿಟ್ಟು ಮಾಡಿಕೊಂಡಿದ್ದು, ಆ ಬಗ್ಗೆ ದೂರು ನೀಡಲು 130 ಕಿ.ಮೀ. ದೂರದಲ್ಲಿರುವ ಅಜ್ಜಿ ಮನೆಗೆ ಸೈಕಲ್​ನಲ್ಲೇ ಹೋಗಿದ್ದಾನೆ. ಇಷ್ಟು ದೂರ ಸಾಗಲು ಈತ ಸುಮಾರು 24 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾನೆ. ಚೀನಾದಲ್ಲಿ ಈ ಪ್ರಕರಣ ನಡೆದಿದ್ದು, ಈ ಬಾಲಕ ಮೀಜಿಯಾಂಗ್​ಗೆ ಸೈಕಲ್​ನಲ್ಲಿ ತೆರಳಿದ್ದ.

    ಇದನ್ನೂ ಓದಿ: ಆಪ್​ನ ಈ ಅಭ್ಯರ್ಥಿಯ ಠೇವಣಿ ಮೊತ್ತ ಎಣಿಸಿಯೇ ಸುಸ್ತಾದ ಅಧಿಕಾರಿಗಳು!

    ಅಜ್ಜಿ ಮನೆಯ ಮಾರ್ಗದಲ್ಲಿ ಸುಸ್ತಾಗಿ ಒಬ್ಬನೇ ಕುಳಿತಿದ್ದ ಈ ಬಾಲಕನನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ದಣಿದಿದ್ದ ಬಾಲಕನನ್ನು ಕಾರ್ ಮೂಲಕ ಅಲ್ಲಿಂದ ಕರೆದೊಯ್ದ ಪೊಲೀಸರು ಬಳಿಕ ಅಜ್ಜಿ ಹಾಗೂ ಮನೆಯವರನ್ನು ಕರೆಸಿ ಒಪ್ಪಿಸಿದ್ದಾರೆ. ಮಗ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಹೆದರಿಸಲು ಹೇಳಿದ್ದ ಎಂದು ಸುಮ್ಮನಾಗಿದ್ದೆ ಎಂಬುದಾಗಿ ಆತನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. –ಏಜೆನ್ಸೀಸ್

    ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts