More

    ಎಸಿಬಿ-ಲೋಕಾಯುಕ್ತದಲ್ಲಿ ಮಹತ್ವದ ಬದಲಾವಣೆ; 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ..

    ಬೆಂಗಳೂರು: ರಾಜ್ಯದಲ್ಲಿನ 11 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಉನ್ನತ ಸ್ಥಾನದ ಜವಾಬ್ದಾರಿ ಹೊತ್ತ ಪ್ರಮುಖ ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.

    ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರನ್ನು ಬೆಂಗಳೂರಿನ ಇಂಟರ್ನಲ್ ಸೆಕ್ಯುರಿಟಿ ಡಿವಿಷನ್ ಎಡಿಜಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಎಸಿಬಿ ಎಡಿಜಿಪಿ ಆಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕೆಎಸ್​ಆರ್​ಪಿ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.

    ಕೆಎಸ್​ಆರ್​ಪಿ ಐಜಿಪಿ ಆಗಿದ್ದ ಎಸ್. ರವಿ ಅವರನ್ನು ಮಾಲಿನಿ ಕೃಷ್ಣಮೂರ್ತಿ ಈ ಹಿಂದೆ ಇದ್ದ ಪಿಸಿಎಎಸ್​ ಐಜಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಸ್ಥಾನದ ನಿರೀಕ್ಷೆಯಲ್ಲಿದ್ದ ಐಪಿಎಸ್ ಅಧಿಕಾರಿ ಅಜಯ್ ಹಿಲೊರಿ ಅವರನ್ನು ಡಿಸಿಆರ್​ಇ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ.

    ಎಸಿಬಿ ಎಸ್​ಪಿ ಆಗಿದ್ದ ಜಿ.ಎಚ್​.ಯತೀಶ್ ಚಂದ್ರ ಅವರನ್ನು ಕ್ರೈಮ್-2 ಡಿಸಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ಎಸಿಬಿ ಎಸ್​ಪಿ ಆಗಿದ್ದ ವೈ ಅಮರನಾಥ್ ರೆಡ್ಡಿಯನ್ನು ಕಲಬುರಗಿ ಇಂಟೆಲಿಜೆನ್ಸ್ ಎಸ್​​ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

    ಬಳ್ಳಾರಿ ಎಸಿಬಿ ಎಸ್​ಪಿ ಆಗಿದ್ದ ಬಿ.ಎಲ್. ಶ್ರೀಹರಿಬಾಬು ಅವರನ್ನು ಲೋಕಾಯುಕ್ತ ಎಸ್​ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಎಸಿಬಿ ಬೆಂಗಳೂರು ಎಸ್​ಪಿ ಆಗಿದ್ದ ಡಾ.ವಿ.ಜೆ.ಶೋಭಾರಾಣಿ ಅವರನ್ನು ಬಿಎಂಟಿಎಫ್ ಎಸ್​ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

    ಎಸಿಬಿ ಮೈಸೂರು ಎಸ್​ಪಿ ಆಗಿದ್ದ ವಿ.ಜೆ. ಸಜೀತ್​ ಅವರನ್ನು ಲೋಕಾಯುಕ್ತ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ. ವಿಜಯಪುರ ಅಡಿಷನಲ್ ಎಸ್​ಪಿ ಆಗಿದ್ದ ರಾಮ್​ ಎಲ್. ಅರಸಿದ್ದಿ ಅವರನ್ನು ಲೋಕಾಯುಕ್ತ ಎಸ್​ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಎಸಿಬಿ ಬೆಳಗಾವಿ ಎಸ್​ಪಿ ಆಗಿದ್ದ ಬಾಬಾಸಾಬ್ ನೇಮಗೌಡ ಅವರನ್ನು ಬೆಳಗಾವಿ ಇಂಟೆಲಿಜೆನ್ಸ್ ಎಸ್​ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

    ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

    ರಾಜ್ಯಕ್ಕೆ ಹಿಂಗಾರು ಆಗಮನ: ಎಷ್ಟು ಮಳೆ, ಎಲ್ಲಿಯವರೆಗೆ?; ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts