More

    Bicycle Ambulance: ಸೈಕಲ್ ಆಂಬ್ಯುಲೆನ್ಸ್‌ ತಯಾರಿಸಿದ ವಿದ್ಯಾರ್ಥಿಗೆ ರಾಷ್ಟ್ರ ಪ್ರಶಸ್ತಿ

    ಆಂಧ್ರಪ್ರದೇಶ: ಅಪಘಾತಗಳು ಅಥವಾ ಗಂಭೀರ ವೈದ್ಯಕೀಯ ಸಮಸ್ಯೆಗಳು ಉಂಟಾದಾಗ ಆಂಬ್ಯುಲೆನ್ಸ್‌ಗಳು ರೋಗಿಗಳನ್ನು ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತವೆ. ಆದರೆ, ಗುಡ್ಡಗಾಡು ಪ್ರದೇಶ ಹಾಗೂ ದೂರದ ಹಳ್ಳಿಗಳಲ್ಲಿ ಆಂಬ್ಯುಲೆನ್ಸ್ ಕೊರತೆಯಿಂದ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಈ ವಿಚಾರವನ್ನು ಅರಿತ ವಿದ್ಯಾರ್ಥಿಯೊಬ್ಬ ಹೊಸ ಆವಿಷ್ಕಾರ ಮಾಡಿದ್ದಾನೆ.

    ಹತ್ತು ಸಾವಿರ ರೂ. ವೆಚ್ಚದಲ್ಲಿ ತಯಾರಾಯ್ತು ಸೈಕಲ್ ಆಂಬುಲೆನ್ಸ್: ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಅತ್ತೋಟದವರಾದ ಗೋವರ್ಧನ ನಾಯ್ಡು, 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಗೋವರ್ಧನ ನಾಯ್ಡು ಸೈಕಲ್ ಆಂಬ್ಯುಲೆನ್ಸ್ ತಯಾರಿಸಿದರೆ ವಿಜ್ಞಾನ ಶಿಕ್ಷಕ ರಾಯಪತಿ ಶಿವನಾಗೇಶ್ವರರಾವ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಬಳಸುವಂತೆ ಈ ಸೈಕಲ್ ವಿನ್ಯಾಸ ಮಾಡಿದ್ದಾರೆ. ಕೇವಲ ಹತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಸೈಕಲ್ ಆಂಬುಲೆನ್ಸ್ ತಯಾರಿಸಿದ್ದಾರೆ.

    ಆಂಬ್ಯುಲೆನ್ಸ್ ವಿಶೇಷತೆ?: ಬೈಸಿಕಲ್‌ನ ಹಿಂಭಾಗದಲ್ಲಿ ಎರಡು ಚಕ್ರಗಳನ್ನು ಹೊಂದಿರುವ ಸ್ಟ್ರೆಚರ್ ಅನ್ನು ಅಳವಡಿಸಲಾಗಿದೆ. ಬಿಸಿಲು ಮತ್ತು ಮಳೆಯನ್ನು ತಡೆಯುವಂತೆ ಡಿಸೈನ್​​​ ಮಾಡಲಾಗಿದೆ.

    ಪ್ರಥಮ ಚಿಕಿತ್ಸಾ ಕಿಟ್, ಆಮ್ಲಜನಕ ಸಿಲಿಂಡರ್, ಪಲ್ಸ್ ಮೀಟರ್, ಬಿಪಿ ಯಂತ್ರವನ್ನು ಒಳಗೊಂಡಿದೆ. ಇವುಗಳ ಜತೆಗೆ ಸೌರಶಕ್ತಿ ಚಾಲಿತ ಫ್ಯಾನ್, ಸೈರನ್, ಲೈಟ್‌ಗಳನ್ನು ಅಳವಡಿಸಲಾಗಿದೆ. ಮಾರ್ಗದರ್ಶಕ ಶಿವನಾಗೇಶ್ವರ ರಾವ್ ಶಿಕ್ಷಕರ ಪ್ರೋತ್ಸಾಹದಿಂದ ಇವೆಲ್ಲವನ್ನೂ ವಿನ್ಯಾಸಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.

    ಪ್ರಶಸ್ತಿ: ಈ ಮಾದರಿಯು ಇನ್‌ಸ್ಪೈರ್ ಈವೆಂಟ್‌ನಲ್ಲಿ ರಾಷ್ಟ್ರೀಯ ಬಹುಮಾನವನ್ನು ಗೆದ್ದಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಕೈಯಿಂದ ವಿದ್ಯಾರ್ಥಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾನೆ. ಶೀಘ್ರದಲ್ಲೇ ಜಪಾನ್‌ನಲ್ಲಿ ನಡೆಯಲಿರುವ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅವರು ತಮ್ಮ ಮಾದರಿಯನ್ನು ಪ್ರದರ್ಶಿಸಲು ಅನುಮತಿ ಪಡೆದರು. ಈ ಬಗ್ಗೆ ಸಹ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts