More

    ಕಿಯೋನಿಕ್ಸ್ ಸಂಸ್ಥೆಯಲ್ಲಿ 109 ಕೋಟಿ ಹಗರಣ; ಮಾಜಿ ಎಂಡಿಗಳ ವಿರುದ್ಧ ಎಫ್ಐಆರ್

    ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಿಯೋನಿಕ್ಸ್ ಸಂಸ್ಥೆ 109 ಕೋಟಿ ರೂ. ಮೊತ್ತದ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.

    ಕೋಟ್ಯಂತರ ರೂ. ಹಗರಣದ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೃಷ್ಣರಾವ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಆಂತರಿಕ ತನಿಖೆ ನಡೆಸಿತ್ತು. ಇದರಲ್ಲಿ 109 ಕೋಟಿ ರೂ. ಅವ್ಯವಹಾರ ದೃಢವಾದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪೊಲೀಸ್ ತನಿಖೆಗೆ ಸೂಚಿಸಿದೆ.
    ಇದರ ಆಧಾರದ ಮೇಲೆ ಶಿಕ್ಷಣ ಇಲಾಖೆ ನಿರ್ದೇಶಕ ಕೃಷ್ಣಾಜಿ ಎಸ್. ಕರಿಚಣ್ಣನವರ, ಹಲಸೂರು ಗೇಟ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಕಿಯೋನಿಕ್ಸ್ ಸಂಸ್ಥೆಯ ಹಿಂದಿನ ಎಂಡಿ, ನಿವೃತ್ತ ಐಎ್ಎಸ್ ಅಧಿಕಾರಿ ಹರಿಕುಮಾರ್ ಝಾ, ಹಿಂದಿನ ವಿಶೇಷಾಧಿಕಾರಿ ಐ.ಎ್. ಮಾಗಿ ಮತ್ತು ಚೆನ್ನೈ ಮೂಲದ ಎವರಾನ್ ಎಜುಕೇಷನ್ ಲಿ. ಮತ್ತು ಅದರ ಎಂಡಿ ಪಿ. ಕಿಶೋರ್ ಮತ್ತು ಇತರರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಶಾಲೆಗಳಲ್ಲಿ ಐಸಿಟಿ-3 ಯೋಜನೆ ಅನುಷ್ಠಾನಕ್ಕೆ ತರಲು ‘ಟ್ಯಾಪ್‌‘ (ತಾಂತ್ರಿಕ ಸಲಹ ಸಮಿತಿ), ಇ-ಗರ್ವೇನೆನ್ಸ್ ಕ್ರಿಯಾ ಯೋಜನೆ ಅನುಮೋದನೆ ಸಮಿತಿ ಮತ್ತು ಎಸ್‌ಎಲ್‌ಇಸಿ (ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿ) ನೇಮಿಸಿ ಸರ್ಕಾರ 147.69 ಕೋಟಿ ರೂ. ಅನುಷ್ಠಾನದ ವೆಚ್ಚ ನಿಗದಿ ಮಾಡಿತ್ತು.

    2010ರಲ್ಲಿ ರಾಜ್ಯ ಸರ್ಕಾರ, ಗಣಕತಂತ್ರ ಒದಗಿಸುವ ಬಗ್ಗೆ ಸರ್ಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಗೆ ವಹಿಸಲು ಇಚ್ಚಿಸುತ್ತದೆ. ಅನುಷ್ಠಾನದ ಜವಾಬ್ದಾರಿ ವಹಿಸಿದ್ದ 3 ಸಮಿತಿಗಳು, ಕಂಪ್ಯೂಟರ್ ವಿವರ ಕೇಳಿ ಸಾಕಷ್ಟು ಬಾರಿ ಪತ್ರ ಬರೆದರೂ ಕಿಯೋನಿಕ್ಸ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.
    ಆದರೂ, 2011ರ ಜು.22ರಂದು ಕಿಯೋನಿಕ್ಸ್ ಸಂಸ್ಥೆಯೊಂದಿಗೆ ಸರ್ಕಾರ 412 ಕೋಟಿ ರೂ. ಒಡಂಬಡಿಕೆಗೆ ಸಹಿ ಮಾಡಿತ್ತು. ಇದಕ್ಕೂ ಮೊದಲೇ ಕಿಯೋನಿಕ್ಸ್ ಸಂಸ್ಥೆ, 3ನೇ ಮಾರಾಟಗಾರರಾದ ಎವರಾನ್ ಎಜುಕೇಷನ್ ಲಿ. ಜೊತೆಗೆ 2011ರ ಏ.25ರಂದು ಒಪ್ಪಂದ ಮಾಡಿ ಏಜೆಂಟ್‌ನಂತೆ ಕೆಲಸ ಮಾಡಿತ್ತು.

    ಜೊತೆಗೆ ಕೆಟಿಪಿಪಿ ಕಾಯ್ದೆ ನಿಯಮಗಳನ್ನು ಉಲ್ಲಂಸಿ ಆರ್‌ಎ್ಪಿ ನಿಬಂಧನೆಗಳನ್ನು ಅಳವಡಿಸಿಕೊಳ್ಳದೆ ಎವರಾನ್ ಕಂಪನಿಗೆ ಒಪ್ಪಂದ ಮಾಡಿಕೊಂಡು ಬ್ಯಾಂಕ್ ಗ್ಯಾರಂಟಿಗಳನ್ನು ಸಹ ಕೊಡಿಸಿರುವುದು ಬೆಳಕಿಗೆ ಬಂದಿದೆ. ಕಂಪ್ಯೂಟರ್ ಖರೀದಿಸುವ ಮೊದಲೇ 10.47 ಕೋಟಿ ರೂ. ವೆಚ್ಚದಲ್ಲಿ ಸ್‌ಟಾವೇರ್ ಖರೀದಿಸಿ ಕಿಯೋನಿಕ್ಸ್ ಸಂಸ್ಥೆ ಸರ್ಕಾರಕ್ಕೆ ನಷ್ಟ ಉಂಟು ಮಾಡಿದೆ.
    ಇದಾದ ಮೇಲೆ ಅನುದಾನಿತ ಶಾಲೆಗಳಲ್ಲಿ ಸ್ಥಳ ಆಯ್ಕೆ ಮತ್ತು ಸ್ಥಳ ಸಜ್ಜಗೊಳಿಸಲು 19.74 ಕೋಟಿ ರೂ. ಸಹ ಬಿಡುಗಡೆ ಮಾಡಿಸಿಕೊಂಡಿದೆ. 120 ದಿನಗಳಲ್ಲಿ ಯೋಜನೆ ಪೂರ್ಣ ಮಾಡಬೇಕಿತ್ತಾದರೂ, ಆ ಷರತ್ತನ್ನು ಪೂರ್ಣ ಮಾಡಿಲ್ಲ. ಇದರ ಪರಿಣಾಮ ಸರ್ಕಾರಕ್ಕೆ 109.19 ಕೋಟಿ ರೂ. ನಷ್ಟ ಉಂಟು ಮಾಡಿದೆ. ಇದಕ್ಕೆ ಅಂದಿನ ಕಿಯೋನಿಕ್ಸ್ ಸಂಸ್ಥೆ ಎಂಡಿ ಹರಿಕುಮಾರ್ ಝಾ, ವಿಶೇಷಾಧಿಕಾರಿ ಐ.ಎ್. ಮಾಗಿ, ಎವರಾನ್ ಕಂಪನಿ ಮತ್ತು ಅದರ ಎಂಡಿ ಪಿ.ಕಿಶೋರ್ ಕಾರಣರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಮೇರೆಗೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿಎಂ ಆದೇಶವನ್ನೇ ತಿರುಚಿದರು:

    2011ರ ಜು.16ರಂದು ಸಿಎಂ ನೀಡಿರುವ ಆದೇಶವನ್ನೇ ತಿರುಚಿ ಕಿಯೋನಿಕ್ಸ್ ಸಂಸ್ಥೆಗೆ ಅನುಕೂಲ ಆಗುವಂತೆ ಆದೇಶಿಸಲಾಗಿದೆ. ಹಣ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೂ ಹಣ ಬಿಡುಗಡೆ ಮಾಡಿರುವುದು ಆಂತರಿಕ ತನಿಖೆಯಲ್ಲಿ ಬಹಿರಂಗವಾಗಿದೆ.

    ಏನಿದು ಐಸಿಟಿ-3 ಯೋಜನೆ ?:

    2008ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಐಸಿಟಿ-3 (ಇನ್ಫಾರ್ಮೆಷನ್ ಆ್ಯಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಯೋಜನೆ) ಜಾರಿಗೆ ತರಲು ಉದ್ದೇಶಿಸಲಾಗಿತ್ತು. 1,763 ಸರ್ಕಾರಿ ಮತ್ತು 2,633 ಅನುದಾನಿತ ್ರೌಡಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಪ್ರಾರಂಭಿಸುವ ಯೋಜನೆ ಆಗಿದೆ. ಮೊದಲ ಕಂತಿನಲ್ಲಿ 31.50 ಕೋಟಿ ರೂ. ಮತ್ತು 2ನೇ ಕಂತಿನಲ್ಲಿ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರತಿ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಒಂದು ಕಂಪ್ಯೂಟರ್ ಲ್ಯಾಬ್, ಸರ್ವರ್, ಯುಪಿಎಸ್, ಸ್ಕಾೃನರ್, ಡಿಜಿಟಲ್ ಕ್ಯಾಮರಾ, ಪ್ರಿಂಟರ್, ಎಲ್‌ಸಿಡಿ ಪ್ರೋಜೆಕ್ಟರ್ ಒದಗಿಸಲು ಸೂಚಿಸಿತ್ತು. ಈ ಲ್ಯಾಬ್‌ಗಾಗಿ ಪ್ರತ್ಯೇಕ ಕೊಠಡಿಗೆ ಸಿದ್ದಪಡಿಸಲು ಆದೇಶಿಸಲಾಗಿತ್ತು.

    ಕೂಸು ಹುಟ್ಟುವ ಮೊದಲೇ ಕುಲಾವಿ?:

    ಕಂಪ್ಯೂಟರ್ ಖರೀದಿಗೂ ಮೊದಲೇ ಒಳಸಂಚು ರೂಪಿಸಿ ಸರ್ವರ್, ಯುಪಿಎಸ್, ಸ್ಕಾೃನರ್, ಡಿಜಿಟಲ್ ಕ್ಯಾಮರಾ, ಪ್ರಿಂಟರ್, ಎಲ್‌ಸಿಡಿ ಪ್ರೋಜೆಕ್ಟರ್ ಸೇರಿ ಇತರ ವಸ್ತುಗಳನ್ನು ಖರೀದಿಸಲಾಗಿದೆ. ಇದರಿಂದ 109.19 ಕೋಟಿ ರೂ. ವೆಚ್ಚ ತೋರಿಸಿದ್ದು, ಐಸಿಟಿ-3 ಯೋಜನೆ ಅನುಷ್ಠಾನ ಮಾಡುವಲ್ಲಿ ಕುಂಠಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts