More

    ಎರಡು ವಿಶ್ವಯುದ್ಧ, ಡೆಡ್ಲಿ ಸ್ಪ್ಯಾನಿಷ್​ ಫ್ಲೂನಿಂದ ಬಚಾವ್​ ಆಗಿದ್ದ ಹಿರಿಯ ಮಹಿಳೆ ಕಿಲ್ಲರ್​ ಕರೊನಾಗೆ ಬಲಿ

    ಲಂಡನ್​: ಎರಡು ವಿಶ್ವಯುದ್ಧ ಮತ್ತು 1918ರ ಡೆಡ್ಲಿ ಸಾಂಕ್ರಮಿಕ ಸ್ಪ್ಯಾನಿಷ್​ ಫ್ಲೂನಿಂದ ಬಚಾವ್​ ಆಗಿದ್ದ 108 ವರ್ಷದ ಹಿರಿಯ ಮಹಿಳೆಯೊಬ್ಬರು ಕಿಲ್ಲರ್​ ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಕರೊನಾ ಪಾಸಿಟಿವ್​​ ಫಲಿತಾಂಶ ಪತ್ತೆಯಾದ ಒಂದು ದಿನದೊಳಗೆ ಶತಾಯುಷಿ ಕೊನೆಯುಸಿರೆಳೆದಿದ್ದಾರೆ. ಕೋವಿಡ್​ 19ಗೆ ಬಲಿಯಾದ ಯುನೈಟೆಡ್​ ಕಿಂಗ್​ಡಮ್​ನ ಅತ್ಯಂತ ಹಿರಿಯ ಮಹಿಳೆಯಾಗಿದ್ದಾರೆ.

    ಹಿಲ್ಡ ಚರ್ಚಿಲ್ ಏಪ್ರಿಲ್ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ,​ ಕಳೆದ ಮಂಗಳವಾರದಿಂದ ಕರೊನಾ ರೋಗ ಲಕ್ಷಣಗಳು ಆರಂಭವಾಗಿತ್ತು. ದುರಾದೃಷ್ಟವಶಾತ್​ ಪಾಸಿಟಿವ್​ ದೃಢವಾದ ಒಂದು ದಿನದೊಳಗೆ ಮೃತರಾಗಿದ್ದಾರೆ.

    ಸಾಲ್​ಫೋರ್ಡ್​ ನಗರದ ತಮ್ಮ ನಿವಾಸದಲ್ಲಿ ಹಿಲ್ಡ ಚರ್ಚಿಲ್​ ಶನಿವಾರ ಮೃತಪಟ್ಟಿದ್ದಾರೆ. ಬ್ರಿಟನ್​ನ ಅತ್ಯಂತ ಹಿರಿಯ ಕರೊನಾ ಸಂತ್ರಸ್ತೆ ಎಂದು ನಂಬಲಾಗಿದೆ. ಈವರೆಗೂ ಯುಕೆಯಲ್ಲಿ 1000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 17 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ.

    1918ರಲ್ಲಿ ಹರಡಿದ್ದ ಸ್ಪ್ಯಾನಿಷ್​ ಫ್ಲೂ ವಿಶ್ವಾದ್ಯಂತ 50 ಮಿಲಿಯನ್​ ಜನರನ್ನು ಬಲಿಪಡೆದುಕೊಂಡಿತ್ತು. ಈ ವೇಳೆ ಮಗುವಾಗಿದ್ದ ಹಿಲ್ಡ ಸ್ಪ್ಯಾನಿಷ್​ ಫ್ಲೂನಿಂದ ಬದುಕುಳಿದಿದ್ದರು. ಆದರೆ, ಅವರ ಒಂದು ವರ್ಷದ ಸಹೋದರಿಯನ್ನು ಫ್ಲೂ ಬಲಿಪಡೆದುಕೊಂಡಿತ್ತು. (ಏಜೆನ್ಸೀಸ್​)

    ಕೋವಿಡ್ 19 ವಿರುದ್ಧ ಹೋರಾಟಕ್ಕೆ ಸ್ಫೂರ್ತಿ ಒದಗಿಸಿದ ಜೋಗಿಂದರ್ ಶರ್ಮ, ಐಸಿಸಿ ಮೆಚ್ಚುಗೆ

    ಮುಂಬೈನಲ್ಲಿ ಕರೊನಾ ಸೋಂಕಿಗೆ 40 ವರ್ಷದ ಮಹಿಳೆ ಬಲಿ: ಅಪಾಯಕಾರಿ ವಲಯದಲ್ಲಿ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts