More

    ಕರೊನಾ ವೈರಾಣು ಕುರಿತ ಅಧ್ಯಯನಕ್ಕಾಗಿ ಯುವಕರನ್ನೂ ನಾಚಿಸಿದ 103 ಅಜ್ಜ

    ಬೆಲ್ಜಿಯಂ: ವಿಶ್ವಮಾರಿ ಕರೊನಾ ಪಿಡುಗನ್ನು ತಡೆಗಟ್ಟಲು ಹಾಗೂ ಚಿಕಿತ್ಸೆ ನೀಡುವಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ವಿಷಯದಲ್ಲಿ ಸಾಕಷ್ಟು ಜನರು ತಮ್ಮದೇ ಆದ ರೀತಿಯಲ್ಲಿ ಸೇವೆ ಮತ್ತು ಕೊಡುಗೆ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ 103 ವರ್ಷದ ಅಜ್ಜ, ಕರೊನಾ ವೈರಾಣು ಕುರಿತ ಅಧ್ಯಯನಕ್ಕೆ ದೇಣಿಗೆ ಸಂಗ್ರಹಿಸಲು ಮ್ಯಾರಥಾನ್​ ನಡಿಗೆಯಲ್ಲಿ ಪಾಲ್ಗೊಂಡು ಯುವಕರನ್ನು ನಾಚುವಂತೆ ಮಾಡಿದ್ದಾರೆ.

    ಬೆಲ್ಜಿಯಂನ ವೈದ್ಯ ಆಲ್ಫೋನ್ಸ್​ ಲೀಂ​ಪೋಯಿಲ್ಸ್​ ಸದ್ಯ ಬ್ರಿಟನ್​ನಲ್ಲಿ ನೆಲೆಸಿದ್ದಾರೆ. ಇವರು ಬ್ರುಸೆಲ್ಸ್​ನ ಈಶಾನ್ಯ ಭಾಗದಲ್ಲಿರುವ ರಾಟ್​ಸೆಲ್ಲಾರ್​ನಿಂದ ಜೂನ್​ 1ರಂದು 42.2 ಕಿ.ಮೀ. ಮ್ಯಾರಥಾನ್​ ನಡಿಗೆ ಆರಂಭಿಸಿದ್ದಾರೆ. ಕೈಯಲ್ಲಿ ವಾಕಿಂಗ್​ ಫ್ರೇಮ್​ ಹಿಡಿದ ಇವರು ದಿನಕ್ಕೆ 0.145 ಕಿ.ಮೀನಂತೆ (145 ಮೀಟರ್​) 10 ಚರಣಗಳಲ್ಲಿ ನಡಿಗೆಯಲ್ಲಿ (ಅಂದಾಜು 1.45 ಕಿ.ಮೀ) ತೊಡಗಿದ್ದು, ಜೂನ್​ 30ರೊಳಗೆ ಮ್ಯಾರಥಾನ್​ ಮುಗಿಸುವ ಗುರಿ ಹಾಕಿಕೊಂಡಿದ್ದಾರೆ.

    ಇದನ್ನೂ ಓದಿ: ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?

    ಬೆಳಗ್ಗೆ 3, ಮಧ್ಯಾಹ್ನ 3 ಮತ್ತು ಸಂಜೆ 4 ಚರಣಗಳಲ್ಲಿ ಇವರು ನಡೆಯುತ್ತಾರೆ. ತಾವು ನಡೆದ ಚರಣಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಇವರು ತಮ್ಮ ಬಳಿಯಿರುವ ಬುಟ್ಟಿಯಲ್ಲಿ ಚರಣಕ್ಕೆ ಒಂದರಂತೆ ಕಡ್ಡಿಗಳನ್ನು ಹಾಕಿಕೊಳ್ಳುತ್ತಾರೆ.

    2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಶತಾಯುಷಿ (ನಿಖರವಾಗಿ 100 ವರ್ಷ) ಟಾಮ್​ ಮೋರ್ ತಮ್ಮ ಉದ್ಯಾನದಲ್ಲಿ ನಡೆಯುವ ಮೂಲಕ ಬ್ರಿಟನ್​ನ ಆರೋಗ್ಯ ಸೇವೆಗಾಗಿ 303.22 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದರಿಂದ ಪ್ರೇರಣೆ ಪಡೆದ ಆಲ್ಫೋನ್ಸ್​ ಲೀಂಪೋಯಿಲ್ಸ್​ ಮ್ಯಾರಥಾನ್​ ನಡಿಗೆಯಲ್ಲಿ ತೊಡಗಿಕೊಂಡು ದೇಣಿಗೆ ಸಂಗ್ರಹಿಸಲು ನಿರ್ಧರಿಸಿದರು. ಇದಕ್ಕೆ ಅವರ ಮಕ್ಕಳು ಪ್ರೇರಣೆ ಒದಗಿಸಿದರು ಎಂದು ಲೀಂ​ಪೋಯಿಲ್ಸ್​ ತಿಳಿಸಿದ್ದಾರೆ.

    ಲೀಂಪೋಯಿಲ್ಸ್​ ಇದುವರೆಗೆ ಮ್ಯಾರಥಾನ್​ನ ಮೂರನೇ ಒಂದು ಭಾಗ ದೂರ ಕ್ರಮಿಸಿದ್ದು, ಇದುವರೆಗೆ 5.16 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

    ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ದಿನ ಲಾಕ್​ಡೌನ್​..! ಹೀಗಂತ ಮಾಜಿ ಶಿಕ್ಷಣ ಸಚಿವರು ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts