More

    ಮುಸ್ಲಿಂ ಧರ್ಮಗುರುವಿನ ಅಂತ್ಯಕ್ರಿಯೆಯಲ್ಲಿ 10ಸಾವಿರ ಮಂದಿ ಭಾಗಿ; ಸುತ್ತಲಿನ 3 ಹಳ್ಳಿ ಸಂಪೂರ್ಣ ಲಾಕ್​​

    ನಾಗಾನ್: ಮುಸ್ಲಿಂ ಧರ್ಮಗುರುವಿನ ಅಂತ್ಯಕ್ರಿಯೆಲ್ಲಿ ಅಂದಾಜು 10 ಸಾವಿರ ಜನರು ಪಾಲ್ಗೊಂಡಿದ್ದರ ಪರಿಣಾಮವಾಗಿ, ಆ ಸ್ಥಳದ ಸುತ್ತಲಿನ ಮೂರು ಹಳ್ಳಿಗಳನ್ನು ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ.

    ಈ ಘಟನೆ ನಡೆದಿದ್ದು ಆಸ್ಸಾಂನ ನಾಗಾನ್​ ಜಿಲ್ಲೆಯಲ್ಲಿ. ಧರ್ಮಗುರು ಮೌಲಾನಾ ಖೈರುಲ್​ ಇಸ್ಲಾಮ್​ ಮುಫ್ತಿ ಎಂಬುವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಅನುಯಾಯಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಭಾಗವಹಿಸಿದ್ದವರಿಗೆ ಯಾರಿಗಾದರೂ ಕರೊನಾ ಇದ್ದರೆ ತುಂಬ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಲಿನ ಮೂರು ಹಳ್ಳಿಗಳನ್ನು ಲಾಕ್​ಡೌನ್ ಮಾಡಲಾಗಿದೆ.

    ಲಾಕ್​ಡೌನ್ ಮಾರ್ಗಸೂಚಿಯ ಪ್ರಕಾರ ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಮಂದಿಯಷ್ಟೇ ಪಾಲ್ಗೊಳ್ಳಬಹುದಾಗಿದೆ. ಆದರೆ ಧರ್ಮಗುರುವಿನ ಅಂತಿಮ ಸಂಸ್ಕಾರದಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.
    ಅಂತ್ಯಕ್ರಿಯೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ಅಲ್ಲಿ ಸಾಮಾಜಿಕ ಅಂತರದ ನಿಯಮ ಪಾಲನೆಯಾಗಿಲ್ಲ. ಎಷ್ಟೋ ಜನ ಮಾಸ್ಕ್​ ಕೂಡ ಧರಿಸಿಲ್ಲ. ಈ ಧರ್ಮಗುರುವಿನ ಅಂತ್ಯ ಸಂಸ್ಕಾರದಲ್ಲಿ ಸ್ಥಳೀಯ ಹಲವು ಮುಖಂಡರೂ, ರಾಜಕಾರಣಿಗಳೂ ಸಹ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇಳಿದಷ್ಟು ಬೆಡ್​​ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್​ ಕೇಸ್​ ಎಂದ್ರು ಸಚಿವ ಸುಧಾಕರ್​

    ಖೈರುಲ್​ ಇಸ್ಲಾಂ ಅವರು ಆಲ್ ಇಂಡಿಯಾ ಜಮಾತ್​ ಉಲೇಮಾ ಮತ್ತು ಆಮೀರ್​ ಇ ಶರಿಯಾತ್​ನ ಉಪಾಧ್ಯಕ್ಷರೂ ಆಗಿದ್ದವರು. ಆಲ್ ಇಂಡಿಯಾ ಯುನೈಟೆಡ್​ ಡೆಮಾಕ್ರಟಿಕ್​ ಫ್ರಂಟ್​ ಪಕ್ಷದ ಶಾಸಕ ಅಮಿನುಲ್​ ಇಸ್ಲಾಂ ಅವರ ತಂದೆ. ಹೀಗಾಗಿ ರಾಜಕೀಯ ಮುಖಂಡರೂ ಹಲವರು ಭಾಗವಹಿಸಿದ್ದರು. ಆದರೆ ಅವರೂ ಸಹ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇದನ್ನೂ ಓದಿ: ಗರ್ಭಿಣಿಯ ತುಂಬಿದ ಹೊಟ್ಟೆಯನ್ನು ಮುತ್ತಿಕೊಂಡ ಜೇನು ನೊಣಗಳು…; ದಿಗಿಲಾಗುವಂಥ ಫೋಟೋ ವೈರಲ್​

    ಶಾಸಕ ಅಮಿನುಲ್​ ಇಸ್ಲಾಂ ಅವರು ಮಾತನಾಡಿ, ನನ್ನ ತಂದೆಗೆ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಇದ್ದಾರೆ. ನಾವು ಅವರ ಅಂತ್ಯಕ್ರಿಯೆಯ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದೆವು. ಇಷ್ಟೆಲ್ಲ ಜನರು ಬರಬಹುದು ಎಂಬ ನಿರೀಕ್ಷೆ ನಮಗೂ ಇರಲಿಲ್ಲ. ಪೊಲೀಸರು ಎಷ್ಟೋ ವಾಹನಗಳನ್ನು ತಡೆದು ವಾಪಸ್​ ಕಳಿಸಿದ್ದಾರೆ. ಆದರೂ ಇಷ್ಟು ಜನರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

    ಧರ್ಮಗುರುವಿನಿ ಅಂತ್ಯಕ್ರಿಯೆಯಲ್ಲಿ ಸುಮಾರು 10,000 ಜನರು ಪಾಲ್ಗೊಂಡಿದ್ದರು ಎಂದು ಜಿಲ್ಲಾಧಿಕಾರಿ ಜಾದವ್​ ಸೈಕಿಯಾ ತಿಳಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಕಾನೂನು ಸುವ್ಯವಸ್ಥೆ ಹದಗೆಡಿಸುವ ಯಾವುದೇ ಘಟನೆ ನಡೆದಿಲ್ಲ. ಆದರೆ ಲಾಕ್​ಡೌನ್​ ನಿಯಮಗಳು ಪೂರ್ತಿಯಾಗಿ ಉಲ್ಲಂಘನೆಯಾಗಿದೆ. ಹಾಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡುವುದಿಲ್ಲ. ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್​)

    ‘ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಆಗುತ್ತಿದೆ…’ ತಿರುವನಂತಪುರದ ಸ್ಥಿತಿ ನೋಡಿ ಸಚಿವರ ಅಳಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts