ಕೆರೂರ: ಬೀದಿ ಬದಿಯ ವ್ಯಾಪಾರಿಗಳು ಕೆನರಾ ಬ್ಯಾಂಕ್‌ನ ಕ್ಯೂಆರ್ ಕೋಡ್ ಬಳಸಿ ಮಾಸಿಕ 100 ರೂ. ಬೋನಸ್ ಪಡೆದುಕೊಳ್ಳಿ ಎಂದು ಶಾಖಾ ವ್ಯವಸ್ಥಾಪಕ ದುಂಡಪ್ಪ ಸೂಳಿಕೇರಿ ಹೇಳಿದರು.
ಪಟ್ಟಣದ ಪಪಂ ಆವರಣದಲ್ಲಿ ಜಿಲ್ಲಾಢಳಿತ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆ ಸೋಮವಾರ ಹಮ್ಮಿಕೊಂಡ ಪಿಎಂ ಸ್ವ ನಿಧಿ ಸೇ ಸಮೃದ್ಧಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿನ ನಿತ್ಯದ ವಹಿವಾಟಿಗೆ ತಪ್ಪದೆ ಕ್ಯೂಆರ್ ಕೋಡ್ ಬಳಕೆಯಿಂದ ವಹಿವಾಟಿನ ಪಾರದರ್ಶಕ ಮತ್ತು ಚಿಲ್ಲರೆ ಸಮಸ್ಯೆ ತಲೆನೋವು ಹೋಗಲಾಡಿಸಬಹುದು ಎಂದರು.
ರಸ್ತೆ ಬದಿಯ ವ್ಯಾಪಾರಿಗಳು ಪ್ರಧಾನ ಮಂತ್ರಿಯವರ ಸ್ವ ನಿಧಿ ಯೋಜನೆ ಸದ್ಬಳಕೆ ಮಾಡಕೊಂಡು ವ್ಯಾಪಾರ ವಹಿವಾಟು ವಿಸ್ತರಿಸಿಕೊಳ್ಳಬೇಕು. ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಶಿವು ಬಿರಾದಾರ ಮಾತನಾಡಿ, ನಿತ್ಯ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ನಡೆಸುವ ಜತೆಗೆ ವ್ಯಾಯಾಮ, ದೈಹಿಕ ಚಟುವಟಿಕೆ ಮೂಲಕ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.
ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಶಂಕರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಯಲ್ಲಪ್ಪ ಬಿದರಿ, ಬಸವರಾಜ ಕಟ್ಟಿಮನಿ, ಅಶ್ವಥ ರಂಗನಗೌಡರ, ಮಹಾದೇವಿ ಬೀಳಗಿ, ಮಹಾದೇವಪ್ಪ ಕಾಂಬಳೆ, ರವೀಂದ್ರ ಹುಚ್ಚಪ್ಪನವರ, ಮತ್ತಣ್ಣ ಕಲಾಲ, ಮಾಲಾಬಾಯಿ ಮದಿ, ಕರೀಂಸಾಬ ಪೆಂಡಾರಿ, ಬಿಯಾಮಾ ಕೆರೂರ, ಮಂಜುನಾಥ ಹರದೊಳ್ಳ, ಭಾರತಿ ಪಾಗಾದ, ಈರಣ್ಣ ಅಕ್ಕಿ ಇತರರಿದ್ದರು.