More

    95 ಸಾವಿರ ಜೀವ ಪಡೆದ ಮಹಾಮಾರಿಗೆ 100 ದಿನ: ವಿವಿಧ ದೇಶಗಳ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

    ವಾಷಿಂಗ್ಟನ್‌: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿ, ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಮಹಾಮಾರಿ ಕರೊನಾ ವೈರಸ್‌ ಕಾಣಿಸಿಕೊಂಡು ಇವತ್ತಿಗೆ 100ನೇ ದಿನ. ಚೀನಾದ ವುಹಾನ್‌ ನಗರದಿಂದ ಶುರುವಾಗಿ ಜಗತ್ತಿನೆಲ್ಲೆಡೆ ತನ್ನ ಬಾಹು ವಿಸ್ತರಿಸಿರುವ ಕರೊನಾ ವೈರಸ್‌ ಇಲ್ಲಿಯವರೆಗೆ ಪಡೆದಿರುವ ಬಲಿಯ ಸಂಖ್ಯೆ 95,718. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ. ಇಲ್ಲಿಯವರೆಗೆ ಜಗತ್ತಿನಾದ್ಯಂತ ಕರೊನಾ ಸೋಂಕಿತರ ಸಂಖ್ಯೆ 16,01,018. ಒಂದೇ ಒಂದು ಸಮಾಧಾನಕರ ಸಂಗತಿ ಎಂದರೆ 3,54,972 ಮಂದಿ ಗುಣಮುಖರಾಗಿರುವುದು.

    ವಿವಿಧ ದೇಶಗಳಲ್ಲಿ ತೆಗೆದುಕೊಳ್ಳುತ್ತಿರುವ ವೈದ್ಯಕೀಯ ಕ್ರಮ, ಕರೊನಾ ಸೃಷ್ಟಿಸಿರುವ ತಲ್ಲಣ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ವೀಡಿಯೋ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ), ‘ಜೀವಗಳನ್ನು ಉಳಿಸಲು ವಿಶ್ವ ಆರೋಗ್ಯ ಸಂಸ್ಥೆ ಸದಾ ಬದ್ಧವಾಗಿದೆ. ಅಗತ್ಯ ಇರುವ ದೇಶಗಳಿಗೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗೆ ಸದಾ ನಾವು ಸಿದ್ಧರಿದ್ದೇವೆ. ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಇರುವ ತರಬೇತಿ ಹಾಗೂ ಕರೊನಾ ವೈರಸ್‌ ಸೋಂಕಿತರ ಸೇವೆಗೆ ಆರೋಗ್ಯ ಕಾರ್ಯಕರ್ತರು ಹೇಗೆಲ್ಲಾ ಸನ್ನದ್ಧರಾಗಬೇಕು ಎಂಬ ತರಬೇತಿ, ನೆರವು ನೀಡಲೂ ಸದಾ ಸಿದ್ಧರಿದ್ದೇವೆ’ ಎಂದು ಹೇಳಿದೆ.

    ಅದರ ಜತೆಗೆ ಇಲ್ಲಿಯವರೆಗಿನ ಕರೊನಾ ವೈರಸ್‌ ಕುರಿತಾದ ಮಾಹಿತಿಯನ್ನು ನೀಡಿರುವ ಡಬ್ಲ್ಯುಎಚ್‌ಒ, ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 4.50 ಲಕ್ಷಕ್ಕೆ ಏರಿದ್ದು, ದೇಶದ ಶೇ.10ರಷ್ಟು ಜನ ನಿರುದ್ಯೋಗಿಗಳಾಗಿದ್ದಾರೆ, ಇಂಡೋನೇಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಹೇಳಿದ್ದಾರೆ. ಆಸ್ಟ್ರೆಲೀಯಾ ಹಾಗೂ ದಕ್ಷಿಣ ಕೊರಿಯಾ ಅತ್ಯಂತ ಪರಿಣಾಮಕಾರಿಯಾಗಿ ವೈರಸ್‌ನ್ನು ಹತ್ತಿಕ್ಕಿವೆ ಎಂದಿರುವ ಡಬ್ಲುಎಚ್‌ಒ, ಭಾರತ ಮಾರಕ ವೈರಸ್ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದು, ವೈರಸ್‌ನ್ನು ಮಟ್ಟ ಹಾಕಲಿದೆ ಎಂದು ಶ್ಲಾಘಿಸಿದ್ದಾರೆ.

    ಬ್ರೆಜಿಲ್ ಇಡೀ ವಿಶ್ವದಲ್ಲೇ ಒಂದು ದಿನದಲ್ಲಿ ಅತ್ಯಂತ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಿಸುತ್ತಿರುವ ರಾಷ್ಟ್ರವಾಗಿದ್ದು, ಇಟಲಿ ಮತ್ತು ಸ್ಪೇನ್ ಕರೊನಾ ವೈರಸ್‌ನಿಂದ ಅತ್ಯಂತ ಹೆಚ್ಚು ನರಳಿರುವ ದೇಶಗಳಾಗಿವೆ ಎಂದಿದ್ದಾರೆ. (ಏಜೆನ್ಸೀಸ್​)

    ಲಾಕ್‌ಡೌನ್ ಸಡಿಲಗೊಳಿಸುವಾಗ ಮುನ್ನೆಚ್ಚರಿಕೆ ವಹಿಸಿ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

    ಕೋವಿಡ್​ 19ನ ಜಾಗತಿಕ ಕೇಂದ್ರ ಬಿಂದು ವುಹಾನ್​ನಲ್ಲಿ ಕರೊನಾ ವೈರಸ್​ ಬಳಿಕ ‘ಬಾಡಿಗೆ‘ಯ ಹೊಸ ತಲೆನೋವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts