More

    ಕೋವಿಡ್​ 19ನ ಜಾಗತಿಕ ಕೇಂದ್ರ ಬಿಂದು ವುಹಾನ್​ನಲ್ಲಿ ಕರೊನಾ ವೈರಸ್​ ಬಳಿಕ ‘ಬಾಡಿಗೆ‘ಯ ಹೊಸ ತಲೆನೋವು

    ನವದೆಹಲಿ: ಕೋವಿಡ್​ 19 ಪಿಡುಗಿನ ಜಾಗತಿಕ ಕೇಂದ್ರ ಬಿಂದು ಎಂಬ ಕುಖ್ಯಾತಿಯ ಚೀನಾದ ವುಹಾನ್​ನಲ್ಲಿ ಈಗ ಕರೊನಾ ವೈರಸ್​ ಬಳಿಕ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ಸೋಂಕಿನಿಂದಾಗಿ ಹಲವು ತಿಂಗಳು ಲಾಕ್​ಡೌನ್​ನಿಂದಾಗಿ ವಹಿವಾಟು ಸ್ತಬ್ಧವಾಗಿದ್ದು, ಅಂಗಡಿ ಮಳಿಗೆಗಳ ಬಾಡಿಗೆಯನ್ನು ಒಂದು ವರ್ಷ ಮಾಫಿ ಮಾಡಬೇಕು ಇಲ್ಲವೇ ಮುಂಗಡ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮಳಿಗೆಗಳ ಮಾಲೀಕರು ಪ್ರತಿಭಟನೆ ಆರಂಭಿಸಿದ್ದಾರೆ.

    ಪ್ರತಿಭಟನೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದ ಮಳಿಗೆಗಳ ಮಾಲೀಕರು ಒಂದೊಂದು ಮೀಟರ್​ ಅಂತರದಲ್ಲಿ ಕುಳಿತು ಗ್ರ್ಯಾಂಡ್​ ಓಷನ್​ ಡಿಪಾರ್ಟ್​ಮೆಂಟ್​ ಸ್ಟೋರ್​ ಎದುರು ಪ್ರತಿಭಟನೆ ನಡೆಸಿದರು. ಮಾಸ್ಕ್​ ಧರಿಸಿದ್ದ ಪ್ರತಿಭಟನಾಕಾರರು, ಬಾಡಿಗೆಯನ್ನು ಒಂದು ವರ್ಷ ಮಾಫಿ ಮಾಡಬೇಕು ಎಂಬ ಹಕ್ಕೊತ್ತಾಯದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

    ಬಾಡಿಗೆಯನ್ನು ಮಾಫಿ ಮಾಡಲು ಸಾಧ್ಯವಿಲ್ಲ ಎಂದಾದರೆ, ಲೀಸ್​ ಮೊತ್ತವನ್ನು ಹಿಂದಿರುಗಿಸುವಂತೆಯೂ ಆಗ್ರಹಿಸಿದರು.

    ಲಾಕ್​ಡೌನ್​ನಿಂದಾಗಿ ಭಾರಿ ನಷ್ಟವಾಗಿದೆ. ಇದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಕೊಟ್ಟಿರುವ ಮುಂಗಡ ಹಣವನ್ನು ಮರಳಿಸುವ ಜತೆಗೆ 3 ತಿಂಗಳು ಲಾಕ್​ಡೌನ್​ ಅವಧಿಯ ಬಾಡಿಗೆಯನ್ನು ಮಾಫಿ ಮಾಡುವಂತೆ ಮಹಿಳೆಯೊಬ್ಬರು ಭಿತ್ತಿಪತ್ರ ಪ್ರದರ್ಶಿಸಿದ್ದು ವಿಶೇಷವಾಗಿ ಗಮನಸೆಳೆಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕವಾಗಿ ಬ್ಯಾಟರಾಯನಪುರ, ಪಾದರಾಯನಪುರ ಸೀಲ್​ ಡೌನ್​: ಭಾಸ್ಕರ್​ ರಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts