More

    100 ಮೀಟರ್ ಸೀಲ್​ಡೌನ್ ಮಾಡಲು ವಿರೋಧ

    ಉಪ್ಪಿನಬೆಟಗೇರಿ: ಕರೊನಾ ಸೋಂಕು ಶನಿವಾರ ದೃಢಪಟ್ಟ ಗ್ರಾಮದ ಮಹಿಯೊಬ್ಬರ ಮನೆಯ ಸುತ್ತಮುತ್ತ ಸೀಲ್​ಡೌನ್ ಮಾಡುವ ವೇಳೆ ಅಂಗಡಿ ಕಾರರರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

    ಭಾನುವಾರ ಸ್ಥಳಕ್ಕೆ ಬಂದ ಗ್ರಾಪಂ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಆ ಮನೆಯ ಸುತ್ತ 100 ಮೀಟರ್ ಸೀಲ್ ಡೌನ್ ಮಾಡಲು ಮುಂದಾದರು. 100 ಮೀಟರ್ ಸೀಲ್ ಡೌನ್ ಮಾಡಿದರೆ ಅದರೊಳಗೆ ಬರುವ ಎಲ್ಲ ಅಂಗಡಿಗಳು ಬಂದಾಗಿ ದೈನಂದಿನ ಎಲ್ಲ ವಹಿವಾಟುಗಳು ಬಂದಾಗುತ್ತವೆ. ಇದನ್ನು ಅರಿತ ವರ್ತಕರು ಮಾರುಕಟ್ಟೆ ಸ್ಥಳವನ್ನು ಬಂದು ಮಾಡದೆ ಕರೊನಾ ಧೃಢಪಟ್ಟ ಮನೆಯ ಅಕ್ಕಪಕ್ಕ ಮಾತ್ರ ಬಂದ್ ಮಾಡಿರಿ ಎಂದರು. ಈ ವೇಳೆ ವಾಗ್ವಾದ ನಡೆಯಿತು. ಅಂತಿಮವಾಗಿ ಅಧಿಕಾರಿಗಳು ಮನೆಯ ಹತ್ತಿರ ಮಾತ್ರ ಸೀಲ್​ಡೌನ್ ಮಾಡಿ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts