More

    10 ವರ್ಷದ ಬಾಲಕ 30 ಸೆಕೆಂಡ್​ಗಳಲ್ಲಿ ಎಗರಿಸಿದ್ದು ಎಷ್ಟು ಲಕ್ಷ ರೂ. ಗೊತ್ತಾ?

    ಭೋಪಾಲ್​: ಆತನಿಗೆ ಕೇವಲ 10 ವರ್ಷ ವಯಸ್ಸು. ನೋಡಲು ಕುಳ್ಳು. ಇಂಥ ಬಾಲಕ ಬ್ಯಾಂಕ್​ನ ಕ್ಯಾಷಿಯರ್​ ಕೌಂಟರ್​ಗೆ ನುಗ್ಗಿ ಕೇವಲ 30 ಸೆಕೆಂಡ್​ಗಳಲ್ಲಿ 10 ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿದ್ದಾನೆ.

    ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯ ಜಾವಾದ್​ ಪ್ರದೇಶದಲ್ಲಿರುವ ಸಹಕಾರಿ ಬ್ಯಾಂಕ್​ನಲ್ಲಿ ಈ ಕಳ್ಳತನ ನಡೆದಿದೆ. ಬ್ಯಾಂಕ್​ನಲ್ಲಿ ಗ್ರಾಹಕರು ಇರುವಾಗಲೇ, ಅವರ ಅರಿವಿಗೂ ಬಾರದಂತೆ ಬಾಲಕ ಹಣ ಎಗರಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಈ ಚಾಕಚಕ್ಯತೆ ಬ್ಯಾಂಕ್​ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

    ಮಾಸಲು ಬಟ್ಟೆ ಧರಿಸಿ ಬೆಳಗ್ಗೆ 10.30ಕ್ಕೆ ಬ್ಯಾಂಕ್​ ಪ್ರವೇಶಿಸಿದ ಬಾಲಕ ಕಳ್ಳತನಕ್ಕೆ ಸೂಕ್ತ ಅವಕಾಶಕ್ಕಾಗಿ ಕಾಯುತ್ತಾ ಬ್ಯಾಂಕ್​ ತುಂಬಾ ಓಡಾಡಿದ್ದಾನೆ. ಈ ಸಂದರ್ಭದಲ್ಲಿ ಬ್ಯಾಂಕ್​ ತುಂಬಾ ಗ್ರಾಹಕರಿದ್ದರೂ ಕುಳ್ಳುಗಿರುವ ಈತನನ್ನು ಯಾರೂ ಗಮನಿಸಿಲ್ಲ.

    11 ಗಂಟೆಗೆ ಬ್ಯಾಂಕ್​ನ ಕ್ಯಾಷಿಯರ್​ ತಮ್ಮ ಚೇಂಬರ್​ ಅನ್ನು ಬಿಟ್ಟು ಹೊರಹೋಗುತ್ತಿದ್ದಂತೆ ಬ್ಯಾಂಕ್​ನ ಇತರೆ ಸಿಬ್ಬಂದಿ ಮತ್ತು ಗ್ರಾಹಕರ ಉಪಸ್ಥಿತಿಯಲ್ಲೇ ಆತ ರಾಜಾರೋಷವಾಗಿ ಚೇಂಬರ್​ ಅನ್ನು ಪ್ರವೇಶಿಸಿದ್ದಾನೆ. ಬಳಿಕ 500 ರೂ.ಗಳ 10 ಕಟ್ಟುಗಳುಳ್ಳ ಎರಡು ಕಟ್ಟುಗಳನ್ನು ತಾನು ತಂದಿದ್ದ ಹರಕಲು ಬ್ಯಾಗ್​ನಲ್ಲಿ ಹಾಕಿಕೊಂಡು ಕ್ಷಣಾರ್ಧದಲ್ಲಿ ಮಾಯವಾಗಿದ್ದಾನೆ. ಆತ ಇಷ್ಟೆಲ್ಲ ಮಾಡಲು ಕೇವಲ 30 ಸೆಕೆಂಡ್​ ಸಮಯ ತೆಗೆದುಕೊಂಡಿದ್ದಾನೆ.

    ಇದನ್ನೂ ಓದಿ: ಕಾಮೇಗೌಡರ ಕೆರೆ ಕಾಳಜಿ ಕಟ್ಟುಕಥೆ: ಏನೂ ಮಾಡದೇ ದೊಡ್ಡ ಸಾಧನೆಯ ಕಿರೀಟ

    ಕಳ್ಳತನದ ಅರಿವು: ಬಾಲಕ ಬ್ಯಾಂಕ್​ನ ಹೆಬ್ಬಾಗಿಲನ್ನು ದಾಟುವ ಸಂದರ್ಭದಲ್ಲಿ ಆತ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆತನನ್ನು ಹಿಡಿದುಕೊಳ್ಳುವಂತೆ ಬ್ಯಾಂಕ್​ ಸಿಬ್ಬಂದಿ ಕೂಗಿದ್ದಾರೆ. ಬಾಗಿಲಲ್ಲಿದ್ದ ಗಾರ್ಡ್​ ಆ ಬಾಲಕನ ಬೆನ್ನಟ್ಟಿದರೂ ಆತ ಮಾಯಾ ಜಿಂಕೆಯಂತೆ ಕಾಣೆಯಾದ ಎನ್ನಲಾಗಿದೆ. ಬಾಲಕ ಓಡಿದ ದಿಕ್ಕಿಗೆ ವಿರುದ್ಧವಾಗಿ ಯುವಕ ಓಡಿದ ಎನ್ನಲಾಗಿದೆ. ಕೆಲ ಅನುಮಾನಾಸ್ಪದ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೂ ನಿಜವಾದ ಕಳ್ಳರು ಪತ್ತೆಯಾಗಿಲ್ಲ ಎನ್ನಲಾಗಿದೆ.

    20ರ ಯುವಕನ ನಿರ್ದೇಶನ: ಕಳ್ಳತನ ಮಾಡಿದ ಈ ಬಾಲಕನಿಗೆ 20 ವರ್ಷದ ಯುವಕನೊಬ್ಬ ಬಾಲಕನಿಗೆ ನಿರ್ದೇಶನ ನೀಡುತ್ತಿದ್ದ ಎನ್ನಲಾಗಿದೆ. ಯಾವಾಗ ಎಲ್ಲಿ ಹೋಗಬೇಕು, ಚೇಂಬರ್​ ಅನ್ನು ಹೇಗೆ ಪ್ರವೇಶಿಸಬೇಕು, ನೋಟುಗಳ ಕಟ್ಟುಗಳನ್ನು ಬ್ಯಾಗ್​ಗೆ ತುಂಬಿಸಿಕೊಂಡು ಯಾರಿಗೂ ಗೊತ್ತಾಗದ ಹಾಗೆ ಅಲ್ಲಿಂದ ಹೇಗೆ ಪರಾರಿಯಾಗಬೇಕು ಎಂಬುವವರೆಗೂ ಆತ ನಿರ್ದೇಶನ ನೀಡಿದ್ದಾನೆ. ಈ ದೃಶ್ಯಗಳು ಕೂಡ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನಲಾಗಿದೆ.

    ಹೆಣ್ಣುಮಕ್ಕಳ ಬಳಕೆ: ಮಕ್ಕಳನ್ನು ಬಳಸಿಕೊಮಡು ಬ್ಯಾಂಕ್​ಗಳಿಂದ ಹಣ ಕದಿಯುವ ಬೃಹತ್​ ಜಾಲವೇ ಇದೆ. 10ರಿಂದ 14 ವರ್ಷದ, ಕುಳ್ಳುಗಿರುವ ಬಾಲಕ-ಬಾಲಕಿಯರನ್ನು ಈ ಗುಂಪು ಬಳಸಿಕೊಂಡು ಕಳ್ಳತನ ಮಾಡುತ್ತದೆ. ಮಕ್ಕಳು ಸಿಕ್ಕಿಬಿದ್ದರೆ ದೊಡ್ಡವರ ಹೆಸರನ್ನು ಹೇಳುವುದಿಲ್ಲ, ಜತೆಗೆ ಬಾಲಮಂದಿರದಲ್ಲಿ ಒಂದಷ್ಟು ಕಾಲ ಇದ್ದು ಶಿಕ್ಷೆ ಅನುಭವಿಸಿ ಬಿಡುಗಡೆಯಾಗುತ್ತಾರೆ ಎಂಬ ಕಾರಣಕ್ಕಾಗಿ ಈ ಜಾಲ ಮಕ್ಕಳನ್ನು ಬಳಸಿಕೊಳ್ಳುತ್ತದೆ ಎನ್ನಲಾಗಿದೆ.

    ಅಬುಧಾಬಿಗೆ ಗುಡ್​ಬೈ ಹೇಳಿದ ಮೌನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts