More

    ಎಲ್​​ಪಿಜಿ ದರ 10 ರೂ. ಇಳಿಕೆ; 14.2 ಕೆ.ಜಿ. ಸಿಲಿಂಡರ್‌ಗೆ 812 ರೂಪಾಯಿ.

    ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಮೇಲೆ 10 ರೂ. ಇಳಿಕೆಯಾಗಿದೆ. ಏ.1ರಿಂದ ಈ ಹೊಸ ದರ ಅನ್ವಯವಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ 14.2 ಕೆ.ಜಿ. ಎಲ್​ಪಿಜಿ ಸಿಲಿಂಡರ್ ಬೆಲೆ 812 ರೂ. ಇದೆ. ಈ ಹಿಂದೆ 822 ರೂ. ಇತ್ತು. 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ 1,701 ರೂ. ಇದೆ.
    ಎಲ್​ಪಿಜಿ ಸಿಲಿಂಡರ್ ಮೇಲೆ ಹಂತ ಹಂತವಾಗಿ ಒಟ್ಟಾರೆ 200 ರೂ. ಹೆಚ್ಚಿಸಲಾಗಿತ್ತು.

    ಕಳೆದ ಫೆಬ್ರವರಿ ಒಂದೇ ತಿಂಗಳಲ್ಲಿ ಮೂರು ಬಾರಿ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿತ್ತು. ಫೆ.4ರಂದು 25 ರೂ., ಫೆ.15ರಂದು 50 ರೂ. ಹಾಗೂ ಫೆ.25ರಂದು 25 ರೂ. ಏರಿಸಲಾಗಿತ್ತು. ಅಲ್ಲದೆ, ಡಿಸೆಂಬರ್‌ನಲ್ಲಿ ಎರಡು ಬಾರಿ ತಲಾ 50 ರೂ. ಹೆಚ್ಚಿಸಲಾಗಿತ್ತು. ಮೂರು ತಿಂಗಳಲ್ಲಿ ಒಟ್ಟಾರೆ 200 ರೂ. ಹೆಚ್ಚಿಸಲಾಗಿತ್ತು. ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಸಹ 5 ಬಾರಿ ಹೆಚ್ಚಿಸಲಾಗಿದೆ.

    ಇದನ್ನೂ ಓದಿ: ಬಾರ್ ಡಾನ್ಸರ್​​ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ!

    1.78 ಕೋಟಿ ಗ್ರಾಹಕರು: ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಎಚ್‌ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟಾರೆ 1.46 ಕೋಟಿ ಗ್ರಾಹಕರು ಎಲ್​ಪಿಜಿ ಸಂಪರ್ಕ ಹೊಂದಿದ್ದಾರೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897, ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ.

    ಇಂಥ ಮದುವೆ ಇನ್ಯಾವುದೂ ಆಗೇ ಇಲ್ಲ ಅನಿಸುತ್ತೆ!: ತೋಟದಲ್ಲೇ ಲಗ್ನ, ಸೈಕಲಲ್ಲೇ ದಿಬ್ಬಣ; ಒಟ್ಟು ಖರ್ಚೆಷ್ಟು ಗೊತ್ತಾ?

    ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts