More

    10 ಲಕ್ಷ ಉದ್ಯೋಗ ಸೃಷ್ಟಿ;  5000 ಕೋಟಿ ರೂಪಾಯಿ ಬಂಡವಾಳ ನಿರೀಕ್ಷೆ

    ಬೆಂಗಳೂರು: ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯುವ ಉದ್ದೇಶದೊಂದಿಗೆ ಸರ್ಕಾರ ನೂತನ ಅಧ್ಯಾಯ ಆರಂಭಿಸಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಮಹತ್ವಾಕಾಂಕ್ಷಿ ಕರ್ನಾಟಕ ಪ್ರವಾಸೋದ್ಯಮ ನೀತಿ 2020-2025 ಬಿಡುಗಡೆಗೊಳಿಸಿದರು.

    10 ಲಕ್ಷ ಉದ್ಯೋಗ ಸೃಷ್ಟಿ, 5 ಸಾವಿರ ಕೋಟಿ ರೂ. ನೇರ ಬಂಡವಾಳ ಆಕರ್ಷಣೆ, 5 ವರ್ಷಗಳಲ್ಲಿ ಜಿಎಸ್​ಡಿಪಿ ಶೇ. 20ಕ್ಕೆ ಏರಿಸುವ ಸಂಕಲ್ಪದೊಂದಿಗೆ ಹೊಸ ನೀತಿ ಜಾರಿಗೊಳಿಸಲಾಗಿದೆ.

    ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರ್ನಾಟಕ ಉತ್ತೇಜಿಸಲು 380 ಡಿಗ್ರಿ ಮಾರುಕಟ್ಟೆ ತಂತ್ರ, ಕೃಷಿ ಪ್ರವಾಸೋದ್ಯಮದ ಮೂಲಕ ರೈತರಿಗೆ ನೆರವು, ಪ್ರವಾಸಿಗರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ ಸ್ಥಳೀಯ ಆಹಾರ ವೈವಿಧ್ಯತೆ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಅಭಿವೃದ್ಧಿ, ರಾಜ್ಯದ ಲಂಬಾಣಿ ಹಾಗೂ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕ್ರಮಗಳಿಗೆ ಈ ನೀತಿಯಲ್ಲಿ ಒತ್ತು ನೀಡಲಾಗಿದೆ. 5ಎ- ಅಟ್ರಾಕ್ಷನ್, ಆಕ್ಸೆಸೆಬಿಲಿಟಿ, ಅಮಿನಿಟಿಸ್, ಅಕಮಡೇಷನ್, ಆಕ್ಟಿವಿಟಿಗಳಿಗೆ ವಿಶೇಷ ಆದ್ಯತೆ, ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಪ್ರವಾಸೋದ್ಯಮ ಭೂ-ಬ್ಯಾಂಕ್ ಸ್ಥಾಪಿಸುವ ಗುರಿ ಹೊಂದಲಾಗಿದೆ.

    ಪ್ರವಾಸಿ ತಾಣಗಳ ಅಭಿವೃದ್ಧಿ: ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, 70 ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸೋದ್ಯಮ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿ ಪಡಿಸುವ ಪ್ರಸ್ತಾವವೂ ಪ್ರವಾಸೋದ್ಯಮ ನೀತಿಯಲ್ಲಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿ.. ಇಬ್ಬರು ಉಗ್ರರ ಎನ್​ಕೌಂಟರ್.. ಕಾರ್ಯಾಚರಣೆ ಮುಂದುವರಿಕೆ…

    500 ಕೋಟಿ ರೂ. ಪ್ರೋತ್ಸಾಹ ಧನ!: ಸಾಹಸ ಪ್ರವಾಸೋದ್ಯಮ 20 ಕೋಟಿ, ಕಾರವಾನ್ ಪಾರ್ಕ್ ಯೋಜನೆ 10 ಕೋಟಿ, ಹೋಟೆಲ್ ಪ್ರಾಜೆಕ್ಟ್ 50 ಕೋಟಿ, ಹೌಸ್ ಬೋಟ್ ಪ್ರಾಜೆಕ್ಟ್ 250 ಕೋಟಿ, ವೇಸೈಡ್ ಅಮಿನಿಟೀಸ್ 50 ಕೋಟಿ, ವೆಲ್​ನೆಸ್ ಸೆಂಟರ್ 20 ಕೋಟಿ ರೂ. ಸಬ್ಸಿಡಿಯನ್ನು ನೀಡಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮ ನೀತಿಯಡಿ ವಾರ್ಷಿಕ 93 ಯೋಜನೆಗಳಿಗೆ 87.12 ಕೋಟಿ ರೂ.ನಂತೆ ಐದು ವರ್ಷಗಳ ಅವಧಿಗೆ 465 ಯೋಜನೆಗಳಿಗೆ 435 ಕೋ. ರೂ. ಸಹಾಯಧನ, ಪೋ›ತ್ಸಾಹ ಧನ, ಇತರ ನೆರವು ನೀಡುವ ಪ್ರಸ್ತಾವವಿದೆ.

    ಬೈಕ್ ರ‍್ಯಾಲಿ

    ವಿಶ್ವಪ್ರವಾಸೋದ್ಯಮದ ದಿನದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ ಹೊರಟಿರುವ ಐವರ ತಂಡ ಹಾಗೂ ಬೆಂಗಳೂರಿನಿಂದ ನಂದಿಹಿಲ್ಸ್​ಗೆ ಹೊರಟಿದ್ದ ಬೈಕ್ ಸವಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದ ಮುಂಭಾಗ ಶುಭ ಹಾರೈಸಿದರು. ಇದನ್ನೂ ಓದಿ: ಮುಂಬೈನಲ್ಲಿ ಹೋಟೆಲ್​ ನಡೆಸುತ್ತಿದ್ದ ಕಾರ್ಕಳದ ಉದ್ಯಮಿ ಆತ್ಮಹತ್ಯೆ

    8 ಜಿಲ್ಲೆಗಳ ಅಭಿವೃದ್ಧಿಗೆ ಪ್ರೋತ್ಸಾಹ

    ನೂತನ ನೀತಿಯಲ್ಲಿ 18 ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ, 270 ಆದ್ಯತಾ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು. 8 ಜಿಲ್ಲೆಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಸ್ಥಳೀಯರಿಗೆ ಆದ್ಯತೆ, ಸುರಕ್ಷತೆ, ವಿಶ್ವಾಸಾರ್ಹತೆ, ನೈರ್ಮಲ್ಯತೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

    ರಾಜಧಾನಿ ಕೇಂದ್ರಿತವಾಗಿ ಬೆಂಗಳೂರು ಹಬ್ಬ ಆಯೋಜಿಸುವ ಚಿಂತನೆ ಇದೆ. ಪ್ರಮುಖ ಜಾತ್ರೆಗಳನ್ನು ಅಂತಾರಾಷ್ಟ್ರೀಯ ಕ್ಯಾಲೆಂಡರ್​ನಲ್ಲಿ ಹಾಕಲಾಗುತ್ತದೆ.

    | ಸಿ.ಟಿ.ರವಿ ಸಚಿವ.

    ರಾಜ್ಯದ ಪ್ರವಾಸಿ ತಾಣಗಳಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯ ಒದಗಿಸಲು ಕರ್ನಾಟಕ ಪ್ರವಾಸೋದ್ಯಮ ನೂತನ ನೀತಿ ಸಹಕಾರಿಯಾಗಲಿದೆ. ಕರೊನಾದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ನೀತಿ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ನೆರವಾಗಲಿದೆ.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    VIDEO| ರಾಯರ ಮಠದಲ್ಲಿ ಊಟಕ್ಕೆ ಕುಳಿತ್ತಿದ್ದ ಬಾಲಕ ಅಚ್ಚರಿಯ ಬೇಡಿಕೆ ಇಟ್ಟ! ತುಸು ನಕ್ಕ ಮಂತ್ರಾಲಯ ಶ್ರೀಗಳು ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts