More

    “ಜೂನ್​ ತಿಂಗಳಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್​ ಪೂರೈಕೆ”

    ನವದೆಹಲಿ : ಜೂನ್​ ತಿಂಗಳಲ್ಲಿ 9 ರಿಂದ 10 ಕೋಟಿ ಡೋಸ್​ಗಳಷ್ಟು ಕೋವಿಶೀಲ್ಡ್​ ಕರೊನಾ ಲಸಿಕೆಯನ್ನು ಉತ್ಪಾದಿಸಿ ಪೂರೈಸುವುದಾಗಿ ಕೋವಿಶೀಲ್ಡ್​ ಉತ್ಪಾದಕ ಸೀರಮ್​ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯ(ಎಸ್​​ಐಐ) ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಕರೊನಾ ಎರಡನೇ ಅಲೆಯ ಸಂದರ್ಭದಲ್ಲೂ ಕರೊನಾ ಲಸಿಕೆಯ ಉತ್ಪಾದನೆ ಹೆಚ್ಚಿಸಲು ತನ್ನ ಸಿಬ್ಬಂದಿ ಹಗಲೂ ಇರುಳೂ ಶ್ರಮಿಸುತ್ತಿದ್ದಾರೆ ಎಂದು ಕಂಪೆನಿ ಕೇಂದ್ರ ಗೃಹ ಸಚಿವ ಅಮಿತ್​ ಷಾಗೆ ಪತ್ರ ಬರೆದಿದೆ ಎನ್ನಲಾಗಿದೆ.

    “ಮೇನಲ್ಲಿ 6.5 ಕೋಟಿ ಡೋಸ್​ಗಳನ್ನು ಉತ್ಪಾದಿಸಿದ್ದಕ್ಕೆ ಹೋಲಿಸಿದರೆ ನಾವು ಜೂನ್​​ನಲ್ಲಿ 9 ರಿಂದ 10 ಕೋಟಿ ಡೋಸ್​ ಕೋವಿಶೀಲ್ಡ್​​ ಉತ್ಪಾದಿಸಿ ಪೂರೈಸಬಲ್ಲೆವು” ಎಂದು ಎಸ್​ಐಐನ ಜಿಆರ್​ಎ ನಿರ್ದೇಶಕ ಪ್ರಕಾಶ್​ ಕುಮಾರ್​ ಬರೆದಿದ್ದಾರೆ. “ನಮ್ಮ ಸಿಇಒ ಆಡಾರ್​ ಸಿ.ಪೂನವಾಲಾ ಅವರ ನಾಯಕತ್ವದಲ್ಲಿ ಕರೊನಾ ವಿರುದ್ಧ ಹೋರಾಡುವಲ್ಲಿ ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟು ನಮ್ಮ ತಂಡ ಕೆಲಸ ಮಾಡುತ್ತಿದೆ” ಎಂದಿದ್ದಾರೆ. (ಏಜೆನ್ಸೀಸ್)

    VIDEO | ಕರೊನಾ ರೋಗಿ ಶವವನ್ನು ಸೇತುವೆ ಮೇಲಿಂದ ನದಿಗೆ ಬಿಸಾಡಿದ ಕುಟುಂಬಸ್ಥರು !

    ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್ ವೀಸಾ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts