More

    ಹಾವಿನ ಮರಿ ನುಂಗಿ ಅಪಾಯದಿಂದ ಪಾರಾದ ಬಾಲಕ

    ಬರೇಲಿ: ಆತಂಕಕಾರಿ ಘಟನೆಯೊಂದರಲ್ಲಿ, ಮನೆಯಂಗಳದಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗು ಹಾವಿನ ಮರಿಯನ್ನು ನುಂಗಿದ್ದು, ಸಮಯಕ್ಕೆ ಸರಿಯಾಗಿ ಬಂದ ಆತನ ತಾಯಿ, ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.
    ಶನಿವಾರ ಮಧ್ಯಾಹ್ನ ಬರೇಲಿಯ ಫತೇಗಂಜ್‌ನ ಭೋಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
    ಶನಿವಾರ ಮಧ್ಯಾಹ್ನ, 1 ವರ್ಷದ ಬಾಲಕ ತನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಹಾವಿನ ಒಂದು ಭಾಗವನ್ನು ನುಂಗಿದ.

    ಇದನ್ನೂ ಓದಿ:  VIDEO| ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಕುಕ್ಕರ್​ ತೆರೆದ ಅಧಿಕಾರಿಗಳಿಗೆ ಕಾದಿತ್ತು ಅಚ್ಚರಿ!

    ಬಾಲಕನ ಬಾಯಿಯಲ್ಲಿ ಏನೋ ಇರುವುದನ್ನು ಆತನ ತಾಯಿ ಗಮನಿಸಿ ಅಲ್ಲಿದ್ದ ಹಾವಿನ ಭಾಗವನ್ನು ಹಿಡಿದು ಹೊರಗೆಳೆಯುವಲ್ಲಿ ಯಶಸ್ವಿಯಾದಳು. ಅದನ್ನು ಹೊರ ತೆಗೆದು ನೋಡಿದಾಗ, ಮಗು ಹಾವನ್ನು ನುಂಗಿರುವುದನ್ನು ನೋಡಿ ಆಕೆ ತೀವ್ರ ಆಘಾತಕ್ಕೊಳಗಾದಳು.
    ನಂತರ ಆಕೆ ಮತ್ತು ಗಂಡ ಧರ್ಮಪಾಲ್ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಧರಂಪಾಲ್ ಹಾವನ್ನು ಬರೇಲಿ ಜಿಲ್ಲಾ ಆಸ್ಪತ್ರೆಗೆ ಒಯ್ದು ಘಟನೆಯನ್ನು ತುರ್ತು ವೈದ್ಯಕೀಯ ಅಧಿಕಾರಿಗೆ ವಿವರಿಸಿದರು.

    ಇದನ್ನೂ ಓದಿ:  ಯೋಗಿ ಆದಿತ್ಯನಾಥ ಅರ್ಚಕರಾಗಿರುವ ದೇವಾಲಯದಲ್ಲಿ ಭಯೋತ್ಪಾದಕ: ಕರೆ ಕೇಳಿ ಪೊಲೀಸರ ದೌಡು!

    ಮಗುವಿಗೆ ವಿಷ ನಿರೋಧಕ ಚುಚ್ಚುಮದ್ದು ನೀಡಿ, ಆಸ್ಪತ್ರೆಯ ತುರ್ತು ವಾರ್ಡ್‌ಗೆ ಕರೆದೊಯ್ಯಲಾಗಿದೆ. “ಮಗುವಿನ ಬಾಯಿಯಲ್ಲಿ ಏನೋ ಇರುವುದನ್ನು ನನ್ನ ಹೆಂಡತಿ ನೋಡಿ ಅದನ್ನು ಹೊರತೆಗೆದಾಗ, ಅದು ಹಾವು ಎಂದು ಅವಳು ಭಯದಿಂದ ಕಿರುಚಿದಳು. ನಾವು ಮಗುವನ್ನು ಕರೆದುಕೊಂಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿದೆವು, ಆದರೆ ಅಲ್ಲಿಂದ ನಮ್ಮನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು ಎಂದು ಧರ್ಮಪಾಲ್ ತಿಳಿಸಿದ್ದಾರೆ. ಹಾವಿನ ಮರಿ ಅತ್ಯಂತ ವಿಷಕಾರಿಯಾಗಿದೆ ಎನ್ನಲಾಗಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾನೆ.

    ಮಿಲನ ಬಯಸಿದಾಗ ಬಗೆಬಗೆ ಹಾಡು ಹೇಳುವ ಲಕ್ಷ ಕೆ.ಜಿ ತೂಕದ ನೀಲಿ ತಿಮಿಂಗಲ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts