More

    ಯೋಗಿ ಆದಿತ್ಯನಾಥ ಅರ್ಚಕರಾಗಿರುವ ದೇವಾಲಯದಲ್ಲಿ ಭಯೋತ್ಪಾದಕ: ಕರೆ ಕೇಳಿ ಪೊಲೀಸರ ದೌಡು!

    ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೋರಖನಾಥ ದೇವಸ್ಥಾನದಲ್ಲಿ ಭಯೋತ್ಪಾದಕನೊಬ್ಬ ನುಸುಳಿದ್ದು, ಯಾವುದೇ ಸಂದರ್ಭದಲ್ಲಿಯೂ ಬಾಂಬ್‌ ಬ್ಲಾಸ್ಟ್‌ ಆಗುವ ಸಾಧ್ಯತೆ ಇದೆ ಎಂದು ಪೊಲೀಸ್‌ ಪೊಲೀಸ್ ಕಂಟ್ರೋಲ್ ರೂಂಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅರ್ಚಕರಾಗಿರುವ ಈ ದೇವಾಲಯದಲ್ಲಿ ಭಯೋತ್ಪಾದಕ ನುಸುಳಿದ್ದಾನೆ ಎಂದು ಕರೆ ಮಾಡಲಾಗಿತ್ತು.

    ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಶ್ವಾನ ದಳದೊಂದಿಗೆ ದೌಡಾಯಿಸಿದರು. ಇಡೀ ಪೊಲೀಸ್‌ ತಂಡ ದೇವಾಲಯವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿತು. ಶ್ವಾನಗಳು ಕೂಡ ಬಾಂಬ್‌ ಇರುವಿಕೆ ಕುರಿತು ಪರಿಶೀಲನೆ ನಡೆಸಿದವು.

    ಇದನ್ನೂ ಓದಿ: ಮಿಲನ ಬಯಸಿದಾಗ ಬಗೆಬಗೆ ಹಾಡು ಹೇಳುವ ಲಕ್ಷ ಕೆ.ಜಿ ತೂಕದ ನೀಲಿ ತಿಮಿಂಗಲ ಪತ್ತೆ!

    ದೇವಾಲಯದ ಒಳಗೆ ಅಥವಾ ಹೊರಗೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿಯನ್ನು ಪತ್ತೆಯಾಗಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಹಾಗೂ ಸ್ಥಳೀಯರನ್ನು ವಿಚಾರಣೆ ಮಾಡಿದ ನಂತರ ಅಂಥ ಯಾವುದೇ ವ್ಯಕ್ತಿ ಇಲ್ಲಿ ಬಂದಿದ್ದು ಕಾಣಿಸಲಿಲ್ಲ.

    ನಂತರ ಇದು ಹುಸಿ ಕರೆ ಎಂದು ತಿಳಿಯಿತು. ಕೂಡಲೇ ಕರೆ ಮಾಡಿದ ವ್ಯಕ್ತಿಯ ಹುಡುಕಾಟ ನಡೆಸಲಾಯಿತು. ಕರೆ ಮಾಡಿದ ವ್ಯಕ್ತಿ ಸಿಕ್ಕಿಬಿದ್ದ. ಬನ್ಸ್‌ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೆಡೌಲಿ ಗ್ರಾಮದ ಶಿವೇಂದ್ರ ಪ್ರತಾಪ್ ಸಿಂಗ್ ಎಂದು ಈತನನ್ನು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ ಈತ ಮಾನಸಿಕ ಅಸ್ವಸ್ಥ ಎಂದಿದ್ದಾರೆ. ತನಿಖೆ ನಡೆಯುತ್ತಿದೆ.

    ನಾಥ್ ಸಂಪ್ರದಾಯದ ನಾಥ್ ಸನ್ಯಾಸಿಗಳ ದೇಗುಲ ಗೋರಖನಾಥ್‌ ದೇವಾಲಯ. ಮಧ್ಯಕಾಲೀನ ಸಂತ ಗೋರಕ್ಷನಾಥ್ ಎಂಬ ಯೋಗಿಯಿಂದ ಈ ಹೆಸರು ಬಂದಿದೆ.

    ಸ್ತ್ರೀಲೋಲ, ಮದ್ಯವ್ಯಸನಿ ಸಂಸದ ಪತಿಗೆ ಶಿಕ್ಷೆ ನೀಡಿ: ನಟಿಯಿಂದ ಕೇಸ್‌ ದಾಖಲು- ದೂರಲ್ಲಿ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts