More

    ಕರ್ತವ್ಯದ ವೇಳೆ ಮೃತಪಟ್ಟರೆ 1 ಕೋಟಿ ರೂ.; ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮಾಹಿತಿ

    ಮಾಗಡಿ: ಸರ್ಕಾರಿ ನೌಕರರು ಕರ್ತವ್ಯದ ವೇಳೆ ಮೃತಪಟ್ಟರೆ 1 ರೂ. ಪ್ರೀಮಿಯಂ ಇಲ್ಲದೆ 1 ಕೋಟಿ ರೂ. ನೀಡುವ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ತಿಳಿಸಿದರು.

    ಪಟ್ಟಣದಲ್ಲಿ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.

    ವಾರ್ಚ್ 15ರ ಒಳಗೆ ವೇತನ ಆಯೋಗ ಜಾರಿಗೆ ಒತ್ತಾಯಿಸಲಾಗಿದೆ. 40 ವರ್ಷದ ಪ್ರಯತ್ನದಿಂದ ಆನ್‌ಲೈನ್ ಮೂಲಕ ಸಾಲ ಪಡೆಯುವ ಸೌಲಭ್ಯ ಒದಗಿಸಲಾಗಿದೆ. ವೇತನ ಆಯೋಗಕ್ಕೆ 8 ವರ್ಷ ಬೇಕಿತ್ತು. ಈಗ 4 ವರ್ಷದಲ್ಲೇ ವೇತನ ಆಯೋಗ ರಚನೆಯಾಗಿದೆ. ವೈಯಕ್ತಿಕ ಸಾಲ, ಮನೆ ನಿರ್ವಾಣ, ವಿದ್ಯಾಭ್ಯಾಸ, ವಾಹನ ಸಾಲಗಳಿಗೆ ಬಡ್ಡಿ ದರ 2 ಪರ್ಸೆಂಟ್ ಕಡಿಮೆ ಮಾಡುವಂತೆ ಸರ್ಕಾರದ ಜತೆ ಚರ್ಚಿಸಲಾಗಿದೆ. ಗ್ರಾಮೀಣ ಕೃಪಾಂಕ, ವೇತನ ಆಯೋಗದ ಫಲಶ್ರುತಿ ಹೊರಡಿಸಲಾಗುವುದು ಎಂದರು.

    22 ಕೋಟಿ ಉಳಿತಾಯ: ನಾನು ಅಧ್ಯಕ್ಷನಾದ ನಂತರ 3 ವರ್ಷಗಳಲ್ಲಿ 22 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಸಿದ್ಧಾಂತದ ನೆಲೆಗಟ್ಟಿನಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಸಂಘಟನೆಗೆ ಸರ್ಕಾರ 8 ಕೋಟಿ ರೂ. ನೀಡುತ್ತಿದೆ. ಸಂಟನೆಗೆ 102 ವರ್ಷಗಳ ಇತಿಹಾಸವಿದೆ. ಸಂವನ್ನು ಛಿದ್ರಗೊಳಿಸಲು ಪಿತೂರಿಗಳು ನಡೆದವು. ಆದರೆ ಅವು ಯಾವುದೂ ಈಡೇರಲಿಲ್ಲ. ನೌಕರರ ಸಂ ಸದೃಢವಾಗಿ ಹೆಮ್ಮರವಾಗಿದೆ ಎಂದು ಷಡಾಕ್ಷರಿ ವಿರೋಧಿಗಳಿಗೆ ತಿರುಗೇಟು ನೀಡಿದರು.

    ತಾಲೂಕು ನೌಕರರ ಸಂದ ಅಧ್ಯಕ್ಷ ಎಂಜಿ.ಶಿವರಾಮಯ್ಯ ವಾತನಾಡಿ, ಷಡಾಕ್ಷರಿ ಅವರು ಸಂಘದ ಅಧ್ಯಕ್ಷರಾದ ನಂತರ ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜ್ಯೋತಿ ಸಂಜೀವಿನಿ, ಎಲ್‌ಪಿಎಸ್ ಪದ್ಧತಿ ಕೈಬಿಡಲು ಶ್ರಮಿಸುತ್ತಿದ್ದಾರೆ ಎಂದರು. ಸಭಾಂಗಣ ನಿರ್ವಾಣಕ್ಕೆ 10 ಲಕ್ಷ ರೂ ಮಂಜೂರು ವಾಡುವಂತೆ ಮತ್ತು ಪತ್ತಿನ ಸಹಕಾರ ಸಂ ಆರಂಭಿಸಲು ಸಹಕಾರ ನೀಡುವಂತೆ ಮನವಿ ವಾಡಿದರು.

    85 ನೌಕರರಿಗೆ ಸೇವಾರತ್ನ ಪ್ರಶಸ್ತಿ, 80 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು

    ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ, ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮುನ್ನೋತ್, ರಾಜ್ಯ ಹಿರಿಯ ಉಪಾಧ್ಯಕ್ಷ ಬಸವರಾಜು, ಉಪಾಧ್ಯಕ್ಷರಾದ ವಾಲತೇಶ್, ಮೋಹನ್ ಕುವಾರ್, ಜಿಲ್ಲಾಧ್ಯಕ್ಷ ಸತೀಶ್, ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಖಜಾಂಚಿ ಎಚ್.ಸಿ. ಸುರೇಶ್, ಬಿಇಒ ಯತಿಕುವಾರ, ಧರಣೇಶ್, ಸಿ.ಪ್ರಕಾಶ್, ಶಿವಸ್ವಾಮಿ, ಜಯರಾಮು, ಸವಾಜ ಸೇವಕ ಎಂ.ಸಿ.ರಾಜಣ್ಣ ಇತರರು ಇದ್ದರು.

    ಬೆಂಗಳೂರಿನಲ್ಲಿ ಬೃಹತ್ ಸಮಾವೇಶ: ಶೀಘ್ರದಲ್ಲೇ 6 ಲಕ್ಷ ಸರ್ಕಾರಿ ನೌಕರರನ್ನು ಸೇರಿಸಿ ಬೆಂಗಳೂರಿನಲ್ಲಿ ಬೃಹತ್ ಸವಾವೇಶ ಆಯೋಜಿಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

    ಸವಾವೇಶದಲ್ಲಿ ಮುಖ್ಯಮಂತ್ರಿ, ಸಚಿವರು ಭಾಗವಹಿಸಲಿದ್ದು ವೇತನ ಆಯೋಗ, ಎಲ್‌ಪಿಎಸ್‌ನಿಂದ ಓಪಿಎಸ್ ವಾಡುವಂತೆ ಸೇರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು. ಸವಾವೇಶಕ್ಕೆ ತಾಲೂಕಿನಿಂದ 2 ಸಾವಿರ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಷಡಾಕ್ಷರಿ ಕರೆ ನೀಡಿದರು.

    ವಾಗಡಿಯಲ್ಲಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದ 85 ನೌಕರರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ತಾಲೂಕು ನೌಕರರ ಸಂದ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts