More

    ಹೆಲ್ಮೆಟ್​ ಇಲ್ದೆ ಬೈಕ್ ಚಲಾಯಿಸ್ತೀರಾ? ಎಚ್ಚರ…ಇಲ್ಲೊಬ್ಬ​ ಸವಾರನಿಗೆ ಬಿದ್ದಿದೆ ಬರೋಬ್ಬರಿ 1.3 ಲಕ್ಷ ರೂ. ದಂಡ!

    ಬೆಂಗಳೂರು: ಟ್ರಾಫಿಕ್ ದಂಡದ ಡಿಜಿಟಲೀಕರಣದ ನಂತರ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬಿದ್ದಾಗ ಸಾವಿರಾರು ರೂ,ದಂಡ ಪಾವತಿಸಲೇಬೇಕಾಗುತ್ತದೆ. ಇದಕ್ಕೆ ಉತ್ತಮ ನಿದರ್ಶನವೊಂದು ಇಲ್ಲಿದೆ.

    ಇದನ್ನೂ ಓದಿ: ಯುವಕನ ಜೀನ್ಸ್, ಒಳಉಡುಪುಗಳಲ್ಲಿ ಪತ್ತೆಯಾಯ್ತು 55 ಲಕ್ಷ ರೂ. ಮೌಲ್ಯದ ಚಿನ್ನದ ಪೇಸ್ಟ್!

    ಬೆಂಗಳೂರಿನ ವಿವಿಧೆಡೆ 255 ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 1.34 ಲಕ್ಷ ರೂ. ದಂಡ ಬಿದ್ದಿದೆ.
    ಸ್ಕೂಟರ್​ ಸವಾರ ಏಳುಮಲೈಗೆ ಸೇರಿದ ಸುಜುಕಿ ಆಕ್ಸೆಸ್ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಡು ಪರಿಶೀಲಿಸಿದಾಗ ಪೊಲೀಸರೇ ಶಾಕ್​ ಆಗಿದ್ದಾರೆ. ಈತ ಎರಡು ವರ್ಷಗಳಿಂದ 255 ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದ್ದು, 10,000 ರೂಪಾಯಿ ದಂಡ ನೀಡಿದ್ದರಿಂದ 20 ಪ್ರಕರಣಗಳನ್ನು ಇತ್ಯರ್ಥಗೊಳಿಸಸಲಾಗಿದೆ. ಆದರೆ ಆತನ ಸ್ಕೂಟರ್ ಇನ್ನೂ ಪೊಲೀಸರ ವಶದಲ್ಲಿಯೇ ಇದೆ.

    ದಿನಗೂಲಿ ಕೆಲಸ ಮಾಡುವ ಏಳುಮಲೈಗೆ ಅವರ ಮನೆಯ ಬಳಿ ಅಳವಡಿಸಲಾಗಿರುವ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ಕ್ಯಾಮೆರಾ ಬಗ್ಗೆ ತಿಳಿದಿರಲಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ, ಎಲುಮಲೈ ಮತ್ತು ಅವರ ಮಗ ಹಲವಾರು ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಓಡಿಸಿದ್ದಾರೆ.

    ಆದರೆ ಟ್ರಾಫಿಕ್ ದಂಡ ಪಾವತಿಯ ಡಿಜಿಟಲೀಕರಣದ ನಂತರ 50 ಕ್ಕೂ ಹೆಚ್ಚು ಉಲ್ಲಂಘನೆ ಹೊಂದಿರುವ ವಾಹನಗಳ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತಿರುವುದರಿಂದ ಅಂತಹ ಪ್ರಕರಣಗಳು ನಿಯಮಿತವಾಗಿ ವರದಿಯಾಗುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸದನದಲ್ಲಿ ಅತ್ತಿಂದಿತ್ತ ಓಡಾಡ್ತಿದ್ದ ಡಾ. ರಂಗನಾಥ್​​ಗೆ ಖಾದರ್ ಕ್ಲಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts