More

    ೩ ನೇ ಅಪರ ಜಿಲ್ಲಾ ನ್ಯಾಯಾಲಯ ಸ್ಥಾಪಿಸಿ

    ಬಾಗಲಕೋಟೆ: ಶಾಸಕ ಎಚ್.ವೈ.ಮೇಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ನೇತೃತ್ವದ ನಿಯೋಗ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯ ಸಂತ್ರಸ್ತರ ಕಾನೂನು ಸಮಸ್ಯೆ, ಭೂ ಸ್ವಾಧೀನ ಪರಿಹಾರ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

    ಬುಧವಾರ ಸಂಜೆ ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗ ಮುಖ್ಯವಾಗಿ ಬಾಗಲಕೋಟೆ ಸಂತ್ರಸ್ತರ ಸಮಸ್ಯೆ ಕುರಿತು ಬೆಳಕು ಚಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಿತು.

    ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ಮುಳಗಡೆಯಾಗುವ ಹಾಗೂ ಇತರೆ ಕಾಮಗಾರಿಗೆ ಭೂಸ್ವಾಧಿಗೊಳಪಡಿಸುವ ಭೂಮಿಗೆ ಪರಿಹಾರಕ್ಕೆ ಸಂಬಂದಿಸಿದಂತೆ ಸಾವಿರಾರು ಪ್ರಕರಣ ನ್ಯಾಯಾಲಯದಲ್ಲಿದ್ದು, ಅವುಗಳ ಇತ್ಯರ್ಥಕ್ಕೆ ಸರ್ಕಾರ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಶಾಸಕ ಎಚ್.ವೈ.ಮೇಟಿ ಆಗ್ರಹಿಸಿದರು.

    ಶಾಸಕ ಎಚ್.ವೈ.ಮೇಟಿ ನೇತೃತ್ವದ ನಿಯೋಗ ಸಂತ್ರಸ್ತರಿಗೆ ಸಂಬಂದಿಸಿದ ಅನೇಕ ಕಾನೂನು ಸಮಸ್ಯೆ, ಪರಿಹಾರ, ಪ್ರಕರಣಗಳ ಇತ್ಯರ್ಥಕ್ಕೆ ಬಗ್ಗೆ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿತು.

    ಬಾಗಲಕೋಟೆ ಜಿಲ್ಲಾ ನ್ಯಾಯಾಲಯಗಳಲ್ಲಿ ೧೨೨೯೯ ಪ್ರಕರಣಗಳ ಬಾಕಿ ಇವೆ. ಇವುಗಳ ಪೈಕಿ ೧೦ ಸಾವಿರ ಪ್ರಕರಣಗಳು ಭೂಸ್ವಾಧೀನಕ್ಕೆ ಸಂಬಂದಿಸಿದಾಗಿವೆ. ೯೦೦ ಕ್ರಿಮಿನಲ್ ಪ್ರಕರಣಗಳಿವೆ. ಭೂಸ್ವಾಧೀನಕ್ಕೆ ಸಂಬಂದಿಸಿದಂತೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು. ಅದಕ್ಕಾಗಿ ಕಟ್ಟಡ, ಜಾಗೆ ಸೌಲಭ್ಯ ನವನಗರದಲ್ಲಿ ಒದಗಿಸಲಾಗುವುದು. ಸಂತ್ರಸ್ತರಿಗೆ ಸಮರ್ಪಕ ಹಾಗೂ ಸಮಯಕ್ಕೆ ಸರಿಯಾಗಿ ನ್ಯಾಯ ದೊರಕುವಂತಾಗಬೇಕು ಎಂದು ಮನವಿ ಮಾಡಿದರು.

    ಇದಕ್ಕೆ ಸಂಬಂದಿಸಿದಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಹಿರೇಮಠ ಅವರೊಂದಿಗೆ ಸ್ಥಳದಲ್ಲಿ ಚರ್ಚೆ ನಡೆಸಿದರು. ಇದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಮೂರು ನ್ಯಾಯಾಲಯಗಳು ಸ್ಥಾಪನೆಯಾದಲ್ಲಿ ಎರಡು ವರ್ಷಗಳಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯ ಎಂದು ಪ್ರಭಾವತಿ ಸಚಿವರ ಗಮನಕ್ಕೆ ತಂದರು.

    ನಂತರ ಸಚಿವ ಎಚ್.ಕೆ.ಪಾಟೀಲ ಈ ಬಗ್ಗೆ ಹೈಕೋರ್ಟ ಸಮಿತಿಗೆ ಗಮನಕ್ಕೆ ತರಲಾಗುವುದು. ಹಣಕಾಸು ಇಲಾಖೆಗೆ ವಿವರವಾಗಿ ಮಾಹಿತಿ ನೀಡಬೇಕು. ಸಿಎಂ ಸಿದ್ದರಾಮಯ್ಯ ಭೇಟಿ ಮನವರಿಕೆ ಮಾಡಿದಾಗ ಮುಂದಿನ ಕ್ರಮ ತೆಗೆದುಕೊಳ್ಳಲು ಸಹಜವಾಗುತ್ತದೆ ಎಂದು ಹೇಳಿದರು.

    ಇದಕ್ಕೆ ನಿಯೋಗದ ನೇತೃತ್ವ ವಹಿಸಿದ್ದ ಶಾಸಕ ಎಚ್.ವೈ.ಮೇಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಆನಂದ ಜಿಗಜಿನ್ನಿ, ಚಂದ್ರಶೇಖರ ರಾಠೋಡ ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಬಾಗಲಕೋಟೆ ರೈತರಾದ ಬಸಪ್ಪ ಸ್ವಾಗಿ, ರವಿ ಕುಮಟಗಿ, ನಾಗರಾಜ ರುದ್ರಾಕ್ಷಿ, ಸಿದ್ದಣ್ಣ ಹಲಕಟ್ಟಿ, ತಾವರಪ್ಪ ಲಮಾಣಿ, ಪರಶುರಾಮ ಛಬ್ಬಿ, ಮಲ್ಲಿಕಾರ್ಜುನ ವಾಲೀಕಾರ, ಮಹೇಶ ಹೆರಕಲ್ ೬೦ ಕ್ಕೊ ಹೆಚ್ಚು ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts