More

    ಹೋಮ, ಯಾಗಗಳಿಂದ ದೇವರು ಕಾಣುತ್ತಾನೆ

    ಚಿತ್ತಾಪುರ: ಹೋಮ, ಯಾಗ, ಪೂಜೆಗಳು ಮಾಡುವುದರಿಂದ ಸಾಕ್ಷಾತ ದೇವರು ಕಾಣುತ್ತಾನೆ. ಇದರಿಂದ ಮಕ್ಕಳು, ಮನುಷ್ಯನಲ್ಲಿನ ಶುದ್ದವಾದ ಜ್ಞಾನ ಲಭಿಸುತ್ತದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
    ಪಟ್ಟಣದ ಶಿವಶಂಕರ ಮಠದ ಅಕ್ಕಮಹಾದೇವಿ ಮಂದಿರದಲ್ಲಿ ಮಂಗಳವಾರ ಶ್ರೀ ಋಗ್ವೇದ ವೈದಿಕ ಪುರೋಹಿತರ ಟ್ರಸ್ಟ್, ಶ್ರೀ ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಆಶ್ವಿಜ ಅಧಿಕ ಮಾಸ ಹಾಗೂ ಕರೋನಾ ನಿರ್ಮೂಲನೆ ಪ್ರಯುಕ್ತ 5ನೇ ದಿನದ ಸಾಮೂಹಿಕ ಗಣಪತಿ ಹೋಮ, ಶ್ರೀ ಗುರುಪಾದ ಪೂಜೆ, ಧನ್ವಂತರಿ ಯಾಗ ಹಾಗೂ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ಕರೊನಾ ಬದುಕುವುದನ್ನು ಕಲಿಸಿದರೆ, ಹೋಮ, ಯಾಗಗಳು ರೋಗ ರುಜಿನಗಳು ಓಡಿಸುತ್ತದೆ ಎಂದು ಹೇಳಿದರು.
    ವೈದಿಕ ಜ್ಞಾನ ತಪೋನಿಧಿ ಡಾ. ರಾಜಶೇಖರ ಸ್ವಾಮಿ ತಾಂಡೂರ, ಮುಖಂಡ ಚಂದ್ರಶೇಖರ ಅವಂಟಿ ಮಾತನಾಡಿದರು. ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಉದ್ಘಾಟಿಸಿದರು. ಕಂಬಳೇಶ್ವರ ಶ್ರೀಗಳಿಗೆ ಭಕ್ತರು ಪಾದಪೂಜೆ ಸಲ್ಲಿಸಿದರು.
    ಟ್ರಸ್ಟ್ನ ಗೌರವಾಧ್ಯಕ್ಷ ಶಿವಶರಣಯ್ಯ ಶಾಸ್ತ್ರಿ ಪುರದಯ್ಯನಮಠ, ಅಧ್ಯಕ್ಷ ಶಿವಕುಮಾರ ಶಾಸ್ತ್ರೀ ಹಿರೇಮಠ, ಕಾರ್ಯದರ್ಶಿ ಮಂಜುನಾಥ ಶಾಸ್ತ್ರಿ, ಕರಬಸಯ್ಯ ಶಾಸ್ತ್ರಿ, ತೋಟಯ್ಯ ಶಾಸ್ತ್ರಿ, ರಾಚಯ್ಯ ಶಾಸ್ತ್ರಿ, ಮಹಾಂತೇಶ ಶಾಸ್ತ್ರಿ, ಮಂಜುನಾಥ ಶಾಸ್ತ್ರಿ ಬಂಡಾ, ವೀರೇಶ ಶಾಸ್ತ್ರಿ, ಶಂಭುಲಿಂಗ ಶಾಸ್ತ್ರಿ, ಮಡಿವಾಳಯ್ಯ ಸ್ವಾಮಿ ವೈದಿಕ ವೃಂದದವರಿಂದ ಹೋಮ, ಹವನದ ವೇದ ಘೋಷ, ಮಂತ್ರ ಪಠಣ ಮಾಡಿದರು.
    ಉದ್ಯಮಿ ಬಸವರಾಜ ಪಾಟೀಲ್ ಬೆಳಗುಂಪಿ, ಪ್ರಮುಖರಾದ ಕರುಣಯ್ಯಸ್ವಾಮಿ, ವೀರಯ್ಯಸ್ವಾಮಿ ಹತ್ತಿಕುಣಿ, ಬಸಯ್ಯಸ್ವಾಮಿ ಸಾತನೂರ, ಅಯ್ಯಣ್ಣ ಗಡೇಸೂರ, ಓಂಕಾರೇಶ್ವರ ರೇಶ್ಮಿ, ಆನಂದ ಪಾಟೀಲ ನರಬೋಳ, ಅಂಬರೀಷ ಸುಲೇಗಾಂವ, ರಾಜು ಕಲಶೆಟ್ಟಿ, ಶಿವಶರಣಪ್ಪ ರೇಷ್ಮಿ, ಬಸವರಾಜ ಹೂಗಾರ, ಸಿದ್ದು ರೇಷ್ಮಿ, ನಾಗರಾಜ ರೇಷ್ಮಿ ಇದ್ದರು.
    ಶಿವುಕುಮಾರಶಾಸ್ತ್ರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ತೋಟಯ್ಯಶಾಸ್ತ್ರಿ, ಸ್ವಾಗತಿಸಿದರು. ವೀರೇಶ ಶಾಸ್ತ್ರಿ ನಿರೂಪಣೆ ಮಾಡಿದರು. ಶಿವಶರಣಯ್ಯಶಾಸ್ತ್ರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts