More

    ಹೋಮಿಯೋಪಥಿಕ್​ ಆಸ್ಪತ್ರೆ ಮಾದರಿ

    ಬೆಳಗಾವಿ: ವೈದ್ಯಕಿಯ ವಲಯದಲ್ಲಿ ಈಚೆಗೆ ಹೋಮಿಯೋಪಥಿಕ್​ ಪದ್ಧತಿ ಜನಪ್ರಿಯಾಗುತ್ತಿದೆ. ದೇಶದಲ್ಲೇ ಮಾದರಿಯಾಗಿರುವಂತೆ ಬೆಳಗಾವಿ ಮಹಾನಗರದಲ್ಲಿ ಅತ್ಯಾಧುನಿಕ ಸಲಕರಣೆ ಹಾಗೂ ಸುಸಜ್ಜಿತ ಕಟ್ಟಡದಲ್ಲಿ ಕೆಎಲ್​ಇ ಹೋಮಿಯೋಪಥಿಕ್​ ಆಸ್ಪತ್ರೆ ಮತ್ತು ಕಾಲೇಜು ನಡೆಸಲಾಗುತ್ತಿದೆ ಎಂದು ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

    ಶುಕ್ರವಾರ ಕೆಎಲ್​ಇ ಉನ್ನತ ಶಿಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಕೆಎಲ್​ಇ ವಿಶ್ವವಿದ್ಯಾಲಯದ ಹೋಮಿಯೋಪಥಿಕ್​ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆ ವತಿಯಿಂದ ಬಸವನ ಕುಡಚಿಯಲ್ಲಿ ನಿರ್ಮಿಸಿರುವ ಸಂಕಲ್ಪ ಕೆಎಲ್​ಇ ವೆಲ್​ನೆಸ್​ ಸೆಂಟರ್​ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸ್ವಿಟ್ಜರ್​ಲೆಂಡ್​ನಲ್ಲಿ ಸಂಪೂರ್ಣವಾಗಿ ಹೋಮಿಯೋಪಥಿಕ್​ ಪದ್ಧತಿ ಅನುಸರಿಸುತ್ತಿದ್ದಾರೆ. ಕೆಎಲ್​ಇ ಸಂಸ್ಥೆಯಿಂದ ಬೆಳಗಾವಿ ಮಹಾನಗರದ ಜನತೆಗೆ ಹೋಮಿಯೋಪಥಿಕ್​ ಸೌಲಭ್ಯ ಕೈಗೆಟುಕುತ್ತಿದೆ. ಇಲ್ಲಿನ ಹೋಮಿಯೋಪಥಿಕ್​ ಸೌಲಭ್ಯಗಳಿಂದಾಗಿ ಸ್ವಿಟ್ಜರ್​ಲ್ಯಾಂಡ್​ನಿಂದ ಇಬ್ಬರು ಕೆಎಲ್​ಇ ಸಂಸ್ಥೆಗೆ ಅಭ್ಯಸಿಸಲು ಬಂದಿದ್ದಾರೆ. ಹೋಮಿಯೋಪಥಿಕ್​ ಕಲಿತು ಅಲೋಪಥಿಕ್​ ಬೋಧಿಸಬೇಡಿ. ಕಡ್ಡಾಯವಾಗಿ ಹೋಮಿಯೋಪಥಿಕ್​ ಚಿಕಿತ್ಸೆಯನ್ನೇ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ವೈದ್ಯರು ದೇವರಿಗೆ ಸಮಾನ. ಬಸವನ ಕುಡಚಿ ಎಂಬ ಹಳ್ಳಿಯಲ್ಲಿ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂದು ಸಂಕಲ್ಪ ವೆಲ್​ನೆಸ್​ ಆರಂಭಿಸಿರುವುದಕ್ಕೆ ಕೆಎಲ್​ಇ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

    ಪ್ರಾಚಾರ್ಯ ಡಾ. ಎಂ.ಎ.ಉಡಚನಕರ್​ ಮಾತನಾಡಿ, ಕೇಂದ್ರದಲ್ಲಿ ಚಿಕಿತ್ಸೆ ಮಾತ್ರವಲ್ಲದೆ, ಕಾಯಿಲೆಗಳು ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಲಾಗುವುದು. ಅಮೃತ ಮಹೋತ್ಸವ ಸಂದರ್ಭದಲ್ಲಿರುವ ಡಾ.ಪ್ರಭಾಕರ್​ ಕೋರೆ ಅವರಿಗೆ ಈ ವೆಲ್​ನೆಸ್​ ಅರ್ಪಿಸುತ್ತಿದ್ದೇವೆ ಎಂದರು.

    ಕಾಹೇರ ಕುಲಸಚಿವ ಡಾ.ವಿ.ಎ.ಕೋಟಿವಾಲೆ, ನಗರಸೇವಕರಾದ ಬಸವರಾಜ ಮೊದಗೇಕರ, ರಾಜಶೇಖರ ಡೋಣಿ, ಡಾ. ಎಚ್​. ಬಿ. ರಾಜಶೇಖರ, ಡಾ.ವಿ.ಡಿ.ಪಾಟೀಲ, ಡಾ.ಎಂ.ಎಸ್​.ಗಣಾಚಾರಿ, ಡಾ.ಸುಹಾಸ ಕುಮಾರಶೆಟ್ಟಿ, ಡಾ.ಸುನೀಲ ಜಲಾಲಪುರೆ ಸೇರಿ ವಿದ್ಯಾರ್ಥಿಗಳು ಇದ್ದರು. ಡಾ. ಶಿಲ್ಪಾ ಪಾಟೀಲ ನಿರೂಪಿಸಿದರು. ಡಾ. ನಾಗರಾಜ ಹವಳದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts