More

    ಹೊಸ ಕಾಮಗಾರಿಗೆ ಪ್ರಸ್ತಾವನೆ

    ಗೋಕರ್ಣ: ಮಹಾಬಲೇಶ್ವರ ಮಂದಿರದ ಎದುರಿನ ಮುಖ್ಯ ಸಮುದ್ರ ತೀರದಲ್ಲಿ ಉಂಟಾದ ಕಡಲ್ಕೊರೆತವನ್ನು ವಿವಿಧ ಇಲಾಖೆ ಅಧಿಕಾರಿಗಳು ಶುಕ್ರವಾರ ವೀಕ್ಷಿಸಿದರು. ಇದಕ್ಕೆ ಕಾರಣವಾದ ಹತ್ತಿರದಲ್ಲಿರುವ ಊರಿನ ಮಳೆ ನೀರನ್ನು ಸಮುದ್ರಕ್ಕೆ ಮುಟ್ಟಿಸುವ ಸಂಗಮ ನಾಲೆಯನ್ನು ಕೂಡ ಅವರು ಪರಿಶೀಲಿಸಿದರು.

    ಈ ವೇಳೆ ಮಾಹಿತಿ ನೀಡಿದ ತಾಪಂ ಸದಸ್ಯ ಮಹೇಶ ಶೆಟ್ಟಿ, ಭಾರಿ ಮಳೆಯಿಂದ ಸಂಗಮ ನಾಲೆಗೆ ಒಮ್ಮೆಲೇ ನೀರು ಹರಿದು ಬಂದು ಅದು ತನ್ನ ಗತಿಯನ್ನು ತಿರುಗಿಸಿರುವುದು ಕಡಲ್ಕೊರೆತಕ್ಕೆ ಕಾರಣವಾಗಿದೆ. ಇದನ್ನು ತಡೆಯಲು ಸಂಗಮ ನಾಲೆಯ ಎರಡೂ ಕಡೆಗೆ ಪಿಚ್ಚಂಗ್ ಮಾಡಿ ಕೊಡುವಂತೆ ಆಗ್ರಹಿಸಿದರು.

    ಕಡಲ್ಕೊರೆತ ಇಂಜಿನಿಯರ್ ರಾಮದಾಸ ಆಚಾರಿ ಪ್ರತಿಕ್ರಿಯಿಸಿ, ಸಂಗಮ ನಾಲೆಯ ಒಂದು ಭಾಗಕ್ಕೆ ಪಿಚ್ಚಿಂಗ್ ಮಾಡಲು 34 ಲಕ್ಷ ರೂ. ಮಂಜೂರಾತಿ ಹಂತದಲ್ಲಿದೆ. ಇದರ ಜತೆಗೆ ಇನ್ನೊಂದು ಕಡೆಗೆ ಪಿಚ್ಚಿಂಗ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ನಾಲೆಯನ್ನು ಸಮುದ್ರದ ಒಳಗಿನ ತನಕ ತಲುಪುವ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದರು. ಚಿಕ್ಕ ನೀರಾವರಿ ಇಲಾಖೆ ಇಂಜಿನಿಯರ್ ಅಮಿತಾ ತಳೇಕರ, ಮಂಜುನಾಥ, ಪಿಡಿಒ ವಿನಯಕುಮಾರ, ಕಾರ್ಯದರ್ಶಿ ಶ್ರೀಧರ ಬೋಮ್ಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts