More

    ಹೊಸದಾಗಿ ಬರುವ ವಿದೇಶಿಯರಿಗೆ ಪ್ರವೇಶ ಇಲ್ಲ

    ವಿಜಯವಾಣಿ ಸುದ್ದಿಜಾಲ ಗೋಕರ್ಣ: ಇಲ್ಲಿಗೆ ಹೊಸದಾಗಿ ಬರುವ ವಿದೇಶಿಯರಿಗೆ ಗೋಕರ್ಣ ಪ್ರವೇಶಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 6 ವಿದೇಶಿಯರು ತಿರುಗಿ ಹೋದ ಘಟನೆ ನಡೆದಿದೆ. ಇವರೆಲ್ಲ ಯುರೋಪಿನ ವಿವಿಧ ದೇಶಗಳಿಂದ ಇಲ್ಲಿಗೆ ನೇರವಾಗಿ ಬಂದವರಾಗಿದ್ದಾರೆ.

    ಮಂಗಳವಾರ ಆರೋಗ್ಯ ಇಲಾಖೆ 49 ವಿದೇಶಿಯರನ್ನು ತಪಾಸಣೆಗೆ ಒಳ ಪಡಿಸಿತ್ತು.ಇವರಲ್ಲಿ ಕೆಲವರು ಇಲ್ಲಿಯೇ ಇರುವ ಸಂಶಯದ ಹಿನ್ನೆಲೆಯಲ್ಲಿ ಸಂಜೆ ಸ್ಥಳಕ್ಕೆ ಭೇಟಿಯಿತ್ತ ಕುಮಟಾ ವಿಭಾಗೀಯಾಧಿಕಾರಿ ಅಜಿತ್ ಎಂ. ತಪಾಸಣಾ ಕೇಂದ್ರದಲ್ಲಿದ್ದ ವಿದೇಶಿಯರನ್ನು ತಿರುಗಿ ಹೋಗುವಂತೆ ತಿಳಿಸಿ ಸಾರಿಗೆ ಬಸ್​ನಲ್ಲಿ ಅವರನ್ನು ರವಾನಿಸಿದರು. ತರುವಾಯ ಓಂ ಬೀಚ್ ಮತ್ತು ಕುಡ್ಲೆ ತೀರಕ್ಕೆ ತೆರಳಿ ವಿವಿಧ ವಸತಿ ಗೃಹಗಳನ್ನು ಪರಿಶೀಲಿಸಿದರು. ಆದರೆ, ಕಳೆದ ಮೂರು ದಿನದಿಂದ ಇಲ್ಲಿನ ವಸತಿ ಗೃಹ ಮತ್ತು ರಿಸಾರ್ಟ್​ಗಳಲ್ಲಿ ಹೊಸದಾಗಿ ವಿದೇಶಿಯರು ಸೇರಿ ಯಾರಿಗೂ ಅವಕಾಶ ನೀಡದೇ ಇರುವುದು ತಪಾಸಣೆ ವೇಳೆ ತಿಳಿದು ಬಂದಿದೆ. ಪಿಎಸ್​ಐ ನವೀನ ನಾಯ್ಕ ಮತ್ತು ಸಿಬ್ಬಂದಿ ಇದ್ದರು.

    ಆತಂಕಕ್ಕೆ ಹಿನ್ನೆಲೆ: ಬಹಳ ಹಿಂದೆಯೇ ಇಲ್ಲಿಗೆ ಬಂದು ವಾಸಿಸುತ್ತಿರುವ 351 ವಿದೇಶಿಯರು ಇಲ್ಲಿನ ವಿವಿಧ ಕಡೆಗಳಲ್ಲಿದ್ದಾರೆ. ಇದರ ಹೊರತಾಗಿ ಸೋಮವಾರ ಮತ್ತು ಮಂಗಳವಾರ ಸೇರಿ ಒಟ್ಟು 60 ಜನ ವಿದೇಶಿಯರು ಹೊಸದಾಗಿ ಗೋಕರ್ಣಕ್ಕೆ ಆಗಮಿಸಿದ್ದು ಇವರೆಲ್ಲರನ್ನು ಆರೋಗ್ಯ ಇಲಾಖೆ ಪರೀಕ್ಷಿಸಿದೆ. ಆದರೆ, ಇವರಲ್ಲಿ ಕೆಲವರು ಇಲ್ಲಿಯೇ ಬೀಡು ಬಿಟ್ಟಿರುವ ವದಂತಿ ಹಿನ್ನೆಲೆಯಲ್ಲಿ ಮಂಗಳವಾರ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಯಿತು. ಇವರಲ್ಲಿ ಹೆಚ್ಚಿನವರು ನಿತ್ಯ ಗೋವಾದಿಂದ ಇಲ್ಲಿಗೆ ಬಂದು ತಿರುಗಿ ಹೋಗುವ ರಷ್ಯಾದೇಶದವರು.ಉಳಿದ ಕೆಲ ವಿದೇಶಿಯರು ಸೋಮವಾರ ರಾತ್ರಿ ಬೀಚ್​ನಲ್ಲಿ ಕಳೆದು ತಿರುಗಿ ಬೇರೆಡೆಗೆ ಹೋಗಿದ್ದಾರೆ. ಹೀಗಾಗಿ ಹೊಸದಾಗಿ ಬಂದಿದ್ದ ಯಾವುದೇ ವಿದೇಶಿಯರು ಗೋಕರ್ಣದಲ್ಲಿ ಇಲ್ಲ ಎನ್ನುವುದನ್ನು ತಪಾಸಣೆ ವೇಳೆ ಉಪವಿಭಾಗಾಧಿಕಾರಿಗಳು ದೃಢ ಪಡಿಸಿದ್ದಾರೆ.

    ಗೋಕರ್ಣದಲ್ಲಿ ವಿದೇಶಿಯರು ಸೇರಿ ಯಾರಿಗೂ ವಸತಿಗೆ ಆಸ್ಪದ ನೀಡಬಾರದೆಂದು ಸಂಬಂಧಿಸಿದವರಿಗೆ ಕಟ್ಟು ನಿಟ್ಟಾಗಿ ಆದೇಶಿಸಿಲಾಗಿದೆ.ಇದರ ಜೊತೆಗೆ ಮುಂಜಾಗ್ರತೆ ಕ್ರಮವಾಗಿ ಮಂಗಳವಾರ ಸಂಜೆಯಿಂದ ವಿದೇಶಿಯರು ಒಳ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದ್ದು ಅವರನ್ನು ಊರ ಪ್ರವೇಶ ದ್ವಾರದಿಂದಲೆ ತಿರುಗಿ ಕಳಿಸುವ ವ್ಯವಸ್ಥೆ ಮಾಡಲಾಗಿದೆ. | ಅಜಿತ್ ಎಂ. ಉಪವಿಭಾಗಧಿಕಾರಿ ಕುಮಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts