More

    ಹೈಟೆಕ್ ನಿಲ್ದಾಣದಲ್ಲಿ ಸೌಲಭ್ಯಗಳ ಮರಿಚಿಕೆ

    ಕೊಡೇಕಲ್ : ಗ್ರಾಮೀಣ ಭಾಗದ ಏಕೈಕ ಹೈಟೆಕ್ ನಿಲ್ದಾಣ ಎಂದರೆ ಅದು ನಾರಾಯಣಪುರ ಬಸ್ ನಿಲ್ದಾಣ. ಆದರೆ ಈ ನಿಲ್ದಾಣದಲ್ಲಿ ಹೆಸರಿಗೆ ತದ್ವಿರುದ್ಧವಾಗಿ ಕುಡಿಯುವ ನೀರು, ಶೌಚಗೃಹ ಮತ್ತು ನಿಲ್ದಾಣ ತುಂಬ ಕಸದಿಂದ ಕೂಡಿದೆ. ಆದರೆ ತನ್ನ ಹೆಸರಿಗೆ ತಕ್ಕನಾಗಿ ಸೌಲಭ್ಯ ಇರದ ಕಾರಣ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.

    ಈ ಹೈಟೆಕ್ ಬಸ್ ನಿಲ್ದಾಣ ಒಂದಿಲ್ಲೊAದು ಸಮಸ್ಯೆಯಿಂದ ಸದಾ ಸುದ್ದಿಯಲ್ಲಿರುತ್ತದೆ. ಈ ನಿಲ್ದಾಣಕ್ಕೆ ನಿತ್ಯ ಅಂತಾರಾಜ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚಾರ ಮಾಡುವ ನೂರಾರು ಬಸ್ ಬಂದು ಹೋಗುತ್ತವೆ. ಆದರೆ ದೂರದಿಂದ ಬರುವ ಪ್ರಯಾಣಿಕರಿಗೆ ಬೇಕಾಗುವ ಸೌಲಭ್ಯವಿಲ್ಲದ ತೀವ್ರ ತೊಂದರೆ ಅನುಭವಿಸಬೇಕಾಗಿದೆ.

    ನಿಲ್ದಾಣದಲ್ಲಿ ಕುಡಿಯುವ ನೀರಿಗಾಗಿ ಸ್ಥಳ ಕಾಯ್ದಿರಿಸಲಾಗಿದೆ ಆದರೂ ಈವರೆಗೆ ನೀರಿನ ವ್ಯವಸ್ಥೆ ಮಾಡದ ಕಾರಣ ಗ್ರಾಮೀಣ ಭಾಗದ ಪ್ರಯಾಣಿಕರು ಹಣಕೊಟ್ಟು ನೀರು ಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ನಿತ್ಯ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

    ಇನ್ನು ನಿಲ್ದಾಣದ ಶೌಚಗೃಹದ ಸ್ಥಿತಿ ತೀರಾ ಶೋಚನೀಯವಾಗಿದೆ. ನಿರ್ವಹಣೆ ಇಲ್ಲದೆ ಶೌಚಗೃಹ ದುರ್ವಾಸನೆಯಿಂದ ನಾರುವಂತಾಗಿದೆ. ಶೌಚಗೃಹಕ್ಕೆ ಅಳವಡಿಸಿರುವ ನಳಗಳು ಸಂಪೂರ್ಣ ಕೆಟ್ಟು ಹೋಗಿದ್ದರಿಂದ ನೀರು ಬಾರದಂತಾಗಿದೆ. ಇದು ಹೈಟೆಕ್ ನಿಲ್ದಾಣದವಾದರೆ ಇನ್ನೂ ಸಾಮಾನ್ಯ ನಿಲ್ದಾಣದ ಸ್ಥಿತಿ ಹೇಗಿರಬೇಕು ಎಂಬುದು ಊಹಿಸಲಸಾಧ್ಯವಾಗಿದೆ.

    ನಿಲ್ದಾಣದ ಆವರಣ ಸ್ವಚ್ಛತೆ ಕೂಡ ಅಷ್ಟಕಷ್ಟೇ ಎನ್ನುವಂತಾಗಿದೆ. ವಾರಕ್ಕೊಮ್ಮೆ ಸ್ಥಳೀಯ ಗ್ರಾಮ ಪಂಚಾಯಿತಿಯಿAದ ಕಸದ ವಿಲೇವಾರಿ ಮಾಡಲಾಗುತ್ತದೆ. ಆದರೂ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್ ಮತ್ತು ಇತರೆ ಅಂಗಡಿಗಳಿAದ ಬಂದ ಪ್ಲಾಸ್ಟಿಕ್ ಮತ್ತು ಪೇಪರ್ ಇಡೀ ನಿಲ್ದಾಣ ಆವರಿಸಿಕೊಂಡಿದೆ. ಒಟ್ಟಾರೆ ಅವ್ಯವಸ್ಥೆಯ ಆಗರವಾಗಿರುವ ಹೈಟೆಕ್ ನಿಲ್ದಾಣಕ್ಕೆ ಅಧಿಕಾರಿಗಳು ಈ ಎಲ್ಲ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಬಹಳ ಜರೂರಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts