More

    ಹೆಸ್ಕಾಂ ನೌಕರರು ಸುರಕ್ಷತಾ ಕವಚ ಧರಿಸಲಿ

    ಬಸವನಬಾಗೇವಾಡಿ: ಪವರ್‌ಮ್ಯಾನ್‌ಗಳು ಸಮಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೆಸ್ಕಾಂ ಬೆಳಗಾವಿ ವಲಯ ಮುಖ್ಯ ಇಂಜಿನಿಯರ್ (ಸಿಇ) ವಿ.ಪ್ರಕಾಶ ಹೇಳಿದರು.

    ಪಟ್ಟಣದ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಶುಕ್ರವಾರ ಆಯೋಜಿಸಿದ್ದ ವಿದ್ಯುತ್ ಸುರಕ್ಷತೆ ಅಭಿಯಾನ- ಹೆಸ್ಕಾಂ ನಡಿಗೆ ಸುರಕ್ಷತೆ ಕಡೆಗೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸರ್ಕಾರ ಮತ್ತು ನಿಗಮ ನೀಡಿರುವ ಸುರಕ್ಷತಾ ಕವಚವನ್ನು ಧರಿಸಿ ಹೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸಿದಾಗ ಮಾತ್ರ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದರು.

    ಮುಖ್ಯ ಅತಿಥಿ- ವಿಜಯಪುರ ಉಪವಿದ್ಯುತ್ ಪರಿವೀಕ್ಷಕ ಎಸ್.ಎಚ್. ಪಾಟೀಲ ಮಾತನಾಡಿ, ಸಾರ್ವಜನಿಕರು ಮನೆಯಲ್ಲಿ ಬಳಸುವ ವಿದ್ಯುತ್ ವಸ್ತು ಹಾಗೂ ಉಪಕರಣಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಕಳಪೆ ಮಟ್ಟದ ವಸ್ತುಗಳ ಬಳಕೆಯಿಂದ ಮನೆಯಲ್ಲಿ ಅವಘಡವಾಗಿ ಹಾನಿಯಾಗುವ ಸಂಭವಗಳು ಹೆಚ್ಚಾಗುತ್ತವೆ ಎಂದು ಹೇಳಿದರು.

    ವಿದ್ಯುತ್ ಅವಗಡದಿಂದ ಆಗುವ ಪ್ರಾಣಹಾನಿ ಬಗ್ಗೆ ತಾಳಿಕೋಟೆ ಶಾಲೆ ಮಕ್ಕಳಿಂದ ಕಿರುಚಿತ್ರ ಪ್ರದರ್ಶನವಾಯಿತು. ಪಟ್ಟಣದ ಬಸವ ಭವನದಿಂದ ಅಂದಾಜು 3 ಕಿ.ಮೀ. ವರೆಗೆ ವಿದ್ಯುತ್ ಸುರಕ್ಷತೆ ಅಭಿಯಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಬಸವನಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ, ಕೊಲ್ಹಾರ, ನಿಡಗುಂದಿ, ಹೆಸ್ಕಾಂ ಇಲಾಖೆಯ ವಿವಿಧ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.

    ವಿಜಯಪುರ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸಿದ್ದಪ್ಪ ಬಿಂಜಗೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಜಯಪುರ ಕಾರ್ಯನಿರ್ವಾಹಕ ಇಂಜಿನಿಯರ್ ಸುನಂದ ಜಂಬಗಿ, ಎಂ.ಎಂ. ಚನ್ನಗೊಂಡ, ಪಿ.ಎಸ್. ಸಿಂಧೆ, ಕೂಡಗಿ ಎನ್‌ಟಿಪಿಸಿ ಎಜಿಎಂ ಟಿ.ಆರ್. ಶಿವಪ್ರಸಾದ, ಬಿ.ಬುನಿಯಾಮಿನ್, ಮಹೇಶ ಶಿವಾಜಿರಾವ್, ಎಂ.ವೈ. ಉಕ್ಕಲಿ, ಸಿ.ಎಸ್. ರಡ್ಡಿ, ಪಿ.ಟಿ. ಮ್ಯಾಗೇರಿ, ಸುತಾಜಾ ಸಾಟಿ, ಸುಧಾ ಪತ್ತಾರ, ಅಗ್ನಿ ಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ, ಪಿ.ವಿ. ಚವಾಣ, ಎಸ್.ಎಂ. ಬಿರಾದಾರ ಇತರರಿದ್ದರು.

    ಎಇಇ ಜಿ.ವಿ. ಸಂಪನ್ನವರ ಮಾತನಾಡಿದರು. ಸಿ.ಎಸ್. ರೆಡ್ಡಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts